ಪ್ಯಾರಾ ಕಮಾಂಡೋ ಹುದ್ದೆಗೆ ಆಯ್ಕೆಯಾದ ಕೊಂಡಂಗೇರಿ ಎಚ್.ಆರ್. ಮನೋಜ್ ಅವರನ್ನು ಸೋಮವಾರ ಪೊನ್ನಂಪೇಟೆಯ ಪ್ರಮುಖ ರಸ್ತೆಗಳಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಮಾಜಿ ಯೋಧ ಬಶೀರ್, ನರೇಂದ್ರ ಇತರರಿದ್ದರು. 
ಕೊಡಗು

ಸತತ ಪರಿಶ್ರಮವಿದ್ದರೆ ಯಶಸ್ಸು ಗಳಿಸಲು ಸಾಧ್ಯ

ಎ. ಆರ್. ರಘುರಾಮ
ಪೊನ್ನಂಪೇಟೆ : ಆಸಕ್ತಿ ಹಾಗೂ ಸತತ ಪರಿಶ್ರಮವಿದ್ದರೆ ಮಾತ್ರ ಯಾವುದೇ ರಂಗದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಪ್ಯಾರಾ ಕಮಾಂಡೋ ಹುದ್ದೆಗೆ ಆಯ್ಕೆಯಾದ ಕೊಂಡಂಗೇರಿ ಎಚ್.ಆರ್. ಮನೋಜ್ ಹೇಳಿದರು.
ಪೊನ್ನಂಪೇಟೆಯ ಜೈ ಜವಾನ್ ಡಿಫೆನ್ಸ್ ಟ್ರೇನಿಂಗ್ ಮತ್ತು ಕೋಚಿಂಗ್ ಅಕಾಡೆಮಿ ಕಚೇರಿಯಲ್ಲಿ ಸೋಮವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಈಗಾಗಲೇ ತರಬೇತಿ ಮುಗಿಸಿದ್ದು, ಜನವರಿ. 15 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದೇನೆ. ಭಾರತೀಯ ರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸುವ ಸುವರ್ಣ ಅವಕಾಶ ನನಗೆ ಒದಗಿ
ಬಂದಿದೆ. ಯುವಜನರು ಹೆಚ್ಚಾಗಿ ಸೇನಾ ಪಡೆಗಳಲ್ಲಿ ಸೇವೆ ಸಲ್ಲಿಸಲು ಶ್ರಮ ವಹಿಸಿ ಅಧ್ಯಯನ ಮಾಡಬೇಕು ಎಂದು ಅವರು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಅಧ್ಯಕ್ಷ ಮತ್ತು ನಿವೃತ್ತ ಕಮಾಂಡೋ ಅಮ್ಮಣಿಚಂಡ ಲವನ್ ಮಾದಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೊಡಗಿನ ಯುವಕರಲ್ಲಿ ಸೈನ್ಯಕ್ಕೆ ಸೇರುವ ಆಸಕ್ತಿ ಕಡಿಮೆಯಾಗುತ್ತಿದೆ ಎಂದರು. ಕೊಡಗಿನ ಯುವ ಜನರಿಗೆ ಸೂಕ್ತ ತರಬೇತಿ ನೀಡಿ, ಸೇನಾ ಪಡೆಗಳ ಸೇವೆಗೆ
ಸನ್ನದ್ಧಗೊಳಿಸಲು ಅಕಾಡೆಮಿಯನ್ನು ಕಾರ್ಯರೂಪಕ್ಕೆ ತರಲಾಗಿದೆ. ಯುವಕ, ಯುವತಿಯರಿಗೆ ಪ್ರತ್ಯೇಕ ವಸತಿ ಸೌಲಭ್ಯವಿದೆ ಎಂದರು. ಅಕಾಡೆಮಿ ಸದಸ್ಯ ರವಿ ತಮ್ಮಯ್ಯ, ಮನೋಜ್ ಅವರ ತಂದೆ ಮಂಜು ಅವರನ್ನೂ ಇದೇ ಸಂದರ್ಭ ಸನ್ಮಾನಿಸಲಾಯಿತು. ಮಾಜಿ ಯೋಧ ಬಶೀರ್, ಸಂಯೋಜಕ ನರೇಂದ್ರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ತೆರೆದ ವಾಹನದಲ್ಲಿ ಮನೋಜ್ ಅವರನ್ನು ಪೊನ್ನಂಪೇಟೆ ಬಸವೇಶ್ವರ ದೇವಸ್ಥಾನ ಸಮೀಪದಿಂದ ಗೋಣಿಕೊಪ್ಪಲು ಉಮಾಮಹೇಶ್ವರಿ ದೇವಸ್ಥಾನದ ವರೆಗೆ ಮೆರವಣಿಗೆ ನಡೆಸಲಾಯಿತು.