ನ್ಯಾಯಾಧೀಶೆಯಾಗಿ ಆಯ್ಕೆಯಾದ ಸಯಿದ ಕಶ್ಮೀರ ಸಿಮ್ರನ್ ಅವರನ್ನು ದಖ್ಖನಿ ಮೊಹಲ್ಲಾ ನಿವಾಸಿಗಳು ಮತ್ತು ವಿಜಯ ವಿನಾಯಕ ಉತ್ಸವ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ರವಿಕುಮಾರ್, ರಾಜೇಶ್ , ಸುಬ್ರಹ್ಮಣಿ, ಸರಳ, ಜೋಯ್, ರಾಗಿಣಿ ಗಣೇಶ್, ಜಯಂತಿ ಅಶೋಕ, ಪೊನ್ನಪ್ಪ ಇದ್ದರು. 
ಕೊಡಗು

ನ್ಯಾಯಾಧೀಶೆಯಾಗಿ ಆಯ್ಕೆಯಾದ ಸಯಿದ ಕಶ್ಮೀರ ಸಿಮ್ರನ್‌ಗೆ ಸನ್ಮಾನ

ಪ್ರಮುಖ ಮುಖ್ಯಾಂಶಗಳು

  • judge
ವಿರಾಜಪೇಟೆ: ವಿರಾಜಪೇಟೆ ನಗರದ ದಖನ್ನಿ ಮೊಹಲ್ಲಾದ ದಿ.ನಜೀರ್ ಅಹಮದ್ ಅಸ್ಮನಜೀರ್ ಅವರ ಪುತ್ರಿ ಸಯಿದ ಕಶ್ಮೀರ ಸಿಮ್ರನ್ ಅವರು ವಕೀಲರಾಗಿ ಎರಡು ವರ್ಷಗಳಲ್ಲೇ ನ್ಯಾಯಾಧೀಶರ ಪ್ರವೇಶ ಪರೀಕ್ಷೆ ಬರೆದು ಮೊದಲ ಪ್ರಯತ್ನದಲ್ಲಿ ಅತಿ ಹೆಚ್ಚು ಅಂಕ ಪಡೆದು ನ್ಯಾಯಾಧೀಶೆಯಾಗಿ ಆಯ್ಕೆಯಾಗಿರುವುದರಿಂದ ದಖ್ಖನ್ನಿ ಮೊಹಲ್ಲಾದ ನಿವಾಸಿಗಳು ಹಾಗೂ ವಿಜಯ ವಿನಾಯಕ ಉತ್ಸವ ಸಮಿತಿ ವತಿಯಿಂದ ಶುಕ್ರವಾರ ಆತ್ಮೀಯವಾಗಿ ಸನ್ಮಾನಿಸಲಾಯಿತು.
ವಿಜಯ ವಿನಾಯಕ ಸಮಿತಿ ಆಡಳಿತ ಮಂಡಳಿಯ ಸದಸ್ಯ ರವಿಕುಮಾರ್ ಮಾತನಾಡಿ, ನ್ಯಾಯಾಧೀಶರ ಹುದ್ದೆ ದೊಡ್ಡ ಜವಾಬ್ದಾರಿ. ಕಠಿಣ ಪರಿಶ್ರಮದ ಫಲವಾಗಿ ಕಶ್ಮೀರ ಅವರು ನ್ಯಾಯಾಧೀಶೆಯಾಗಿದ್ದಾರೆ ಎಂದರು.
ಸಮಾರಂಭದಲ್ಲಿ ಸ್ಥಳೀಯ ನಿವಾಸಿ ಹಾಗೂ ಸಂತ ಅನ್ನಮ್ಮ ಶಾಲೆಯ ಮುಖ್ಯಶಿಕ್ಷಕಿ ಬೆನ್ನಿ ಜೋಸೆಫ್, ಡಿ.ಪಿ.ರಾಜೇಶ್, ಪೋರಂಗಡ ರಾಜ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸನ್ಮಾನ ಕಾರ್ಯಕ್ರಮದಲ್ಲಿ ದಖನ್ನಿ ಮೊಹಲ್ಲದ ನಿವಾಸಿಗಳಾದ ಸುಬ್ರಹ್ಮಣಿ, ಸರಳ, ಜೋಯ್, ರಾಗಿಣಿ ಗಣೇಶ್, ಜಯಂತಿ ಅಶೋಕ, ಪೊನ್ನಪ್ಪ, ಆನಂದ ಸೇರಿದಂತೆ ಬಡಾವಣೆಯ ಹಲವಾರು ಸದಸ್ಯರು ಹಾಜರಿದ್ದರು.