ಮಲ್ಮ ಹಾಕಿ ಕ್ಲಬ್ ಕಕ್ಕಬ್ಬೆ ವತಿಯಿಂದ ಹಾಕಿ ಕೂರ್ಗ್ ಸಹಯೋಗದೊಂದಿಗೆ ಜಿಲ್ಲಾ ಹಾಕಿ ಲೀಗ್‌ನ ಟಾಪ್ 8 ತಂಡಗಳ ನಡುವಿನ ಹಾಕಿ ಪಂದ್ಯಾವಳಿಯ ಸಮಾರೋಪ ಸಮಾರಂಭವನ್ನು ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿ ಮಾತನಾಡಿದರು. ಹೆಡಿಕೇರಿ ಪ್ರಸನ್ನ, ಪಳಗಂಡ ಲವಕುಮಾರ್, ಮಾಪಂಗಡ ಯಮುನಾ ಚಂಗಪ್ಪ ಇತರರಿದ್ದರು.
ನಾಪೋಕ್ಲು: ಮಲ್ಮ ಹಾಕಿ ಕ್ಲಬ್ ಕಕ್ಕಬ್ಬೆ ವತಿಯಿಂದ ಹಾಕಿ ಕೂರ್ಗ್ ಸಹಯೋಗದೊಂದಿಗೆ ಇಲ್ಲಿಯ ಕೆಪಿಎಸ್ ಶಾಲೆಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಮೇ 15ರಂದು ಪ್ರಾರಂಭಗೊಂಡ ಜಿಲ್ಲಾ ಹಾಕಿ ಲೀಗ್‌ನ ಟಾಪ್ 8 ತಂಡಗಳ ನಡುವಿನ ಹಾಕಿ ಪಂದ್ಯಾವಳಿಯ ಸಮಾರೋಪ ಸಮಾರಂಭ ಭಾನುವಾರ ಜರುಗಿತು.
ಶಾಸಕ ಎ.ಎಸ್.ಪೊನ್ನಣ್ಣ ಕ್ರೀಡಾಪಟುಗಳನ್ನು ಪರಿಚಯಿಸಿಕೊಂಡ ಬಳಿಕ ಜ್ಯೋತಿ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಮಲ್ಮ ಹಾಕಿ ಕ್ಲಬ್ಬಿನ ಅಧ್ಯಕ್ಷರಾದ ಮಾದಂಡ ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಹೆಡಿಕೇರಿ ಪ್ರಸನ್ನ, ಹಾಕಿ ಕೂರ್ಗ್ ಅಧ್ಯಕ್ಷ ಪಳಗಂಡ ಲವಕುಮಾರ್ ಉಪಾಧ್ಯಕ್ಷೆ ಮಾಪಂಗಡ ಯಮುನಾ ಚಂಗಪ್ಪ, ಕಾರ್ಯದರ್ಶಿ ಚೇತನ್, ಬಾಚಮಾಂಡ ಲವ ಚಿಣ್ಣಪ್ಪ, ಕಲಿಯಂಡ ಸಂಪನ್ ಅಯ್ಯಪ್ಪ, ಕುಲ್ಲೇಟಿರ ಅರುಣ್ ಬೇಬ, ಅರೆಯಡ ಪವಿನ್ ಪೊನ್ನಣ್ಣ ಉಪಸ್ಥಿತರಿದ್ದರು. ಅಂಜಪರವಂಡ ಕುಶಾಲಪ್ಪ ಸ್ವಾಗತಿಸಿ, ಅಜ್ಜೆಟ್ಟಿರ ವಿಕ್ರಂ ವೀಕ್ಷಕ ವಿವರಣೆ ನೀಡಿ, ನಿರೂಪಿಸಿ ವಂದಿಸಿದರು.