ತಿತಿಮತಿ ಮಂಡಲ ಹಿಂದೂ ಸಂಗಮ ಆಯೋಜನ ಸಮಿತಿ ವತಿಯಿಂದ ರಾಮ ಮಂದಿರ ಮುಂಬಾಗ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಚಂದ್ರನ್ ಮಾತನಾಡಿದರು. ಚೆಪುö್ಪಡೀರ ರಾಮಕೃಷ್ಣ, ಪೋರಂಗಡ ರಾಣಿ ಇದ್ದರು.
ಸುಸ್ಥಿರ ಹಿಂದೂ ಸಮಾಜದ ನಿರ್ಮಾಣಕ್ಕೆ ಹಿಂದೂಗಳು ಕುಂಭಕರ್ಣನ ನಿದ್ರೆಯಿಂದ ಎಚ್ಚೆತ್ತುಕೊಳ್ಳಬೇಕು ಎಂದು ಬೌದಿಕ್ ಚಂದ್ರನ್ ಸಲಹೆ ನೀಡಿದರು. ತಿತಿಮತಿ ಮಂಡಲ ಹಿಂದೂ ಸಂಗಮ ಆಯೋಜನ ಸಮಿತಿ ವತಿಯಿಂದ ರಾಮ ಮಂದಿರ ಮುಂಭಾಗ ಗುರುವಾರ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಜಾಗತಿಕ ಮಟ್ಟದಲ್ಲಿ ಮಾರ್ಗದರ್ಶನ ಮಾಡುವಂತಹ ಪ್ರಾಮುಖ್ಯತೆಯನ್ನು ಹಿಂದೂ ಧರ್ಮ ಹೊಂದಿದೆ. ಶಾಂತಿಯಿAದ ಕೂಡಿರುವ ಆನಂದಮಯವಾದ ಮತ್ತು ಆರೋಗ್ಯಪೂರ್ಣವಾದ ಮತ್ತು ಭಕ್ತಿಯಿಂದ ಜೊತೆಗೆ ಸೌಹಾರ್ದತೆಯ ನೆಲೆಯಲ್ಲಿ ಹಿಂದೂ ರಾಷ್ಟ್ರವನ್ನು ಕಟ್ಟಿ ಬೆಳೆಸಬೇಕಾಗಿದೆ. ಈ ಉದ್ದೇಶದೊಂದಿಗೆ ಪ್ರತಿಯೊಬ್ಬ ಹಿಂದೂ ತನ್ನ ಆದ್ಯ ಕರ್ತವ್ಯವನ್ನು ಮರೆಯಬೇಕಾಗಿದೆ.
ಸಮಾಜದ ಬಲಿಷ್ಠ ಶಕ್ತಿಗೆ ಹಿಂದುತ್ವವನ್ನ ಎತ್ತಿ ಹಿಡಿಯುವುದು ಪ್ರಾಮುಖ್ಯತೆಯಾಗಿದೆ. ಹನುಮಂತ ಹೊಂದಿರುವ ಭಕ್ತಿಯ ಭಾವನೆಯಂತೆ ನಾವು ಈ ಹಿಂದೂ ರಾಷ್ಟ್ರದ ಬಗ್ಗೆ ಹೊಂದಿರಬೇಕಾದ ತ್ಯಾಗಮಯ ಜೀವನವನ್ನು ಕೂಡಿಸಿಕೊಂಡರೆ ಖಂಡಿತ ರಾಮನ ಪರಿಪೂರ್ಣ ಭಕ್ತಿ ದಕ್ಕುತ್ತದೆ.
ಈ ದೇಶ ಪರಿವರ್ತನೆಗೊಳ್ಳಬೇಕಾದರೆ ಮನೆ ಮತ್ತು ಮನದಲ್ಲಿ ಹಿಂದುತ್ವದ ಪ್ರತಿಪಾದನೆಯಾಗಬೇಕು. ವಿದೇಶ ಬೆಳದಂತೆ ಹಿಂದೂ ಧರ್ಮವೂ ಕೂಡ ಬೆಳೆದು ನಿಲ್ಲಬೇಕು ಈ ನಿಟ್ಟಿನಲ್ಲಿ ಹಿಂದೂಗಳಾದ ನಾವು ಜಾಗೃತಿ ಮತ್ತು ಎಚ್ಚರಿಕೆಯಿಂದ ಜೀವನ ನಡೆಸಬೇಕು ಎಂದು ಹೇಳಿದರು.
ಸಭೆಯಲ್ಲಿ ಹಿಂದೂ ಸಂಗಮ ಸಮಿತಿ ಕಾರ್ಯಕ್ರಮದ ಅಧ್ಯಕ್ಷ ಚೆಪುö್ಪಡೀರ ರಾಮಕೃಷ್ಣ, ನಿವೃತ್ತ ಶಿಕ್ಷಕಿ ಪೋರಂಗಡ ರಾಣಿ ಇದ್ದರು. ಸಭೆಯ ನಂತರ ಸ್ಥಳಿಯ ಮಕ್ಕಳ ಸಾಂಸ್ಕöÈತಿಕ ಕಾರ್ಯಕ್ರಮಗಳು ನಡೆಯಿತು.