ಹುದುಗೂರುವಿನಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಬೈಕ್ ಜಾಥಾ ಗಮನ ಸೆಳೆಯಿತು.
ರಾಷ್ಟçಭಕ್ತಿ ರೂಢಿಸಿಕೊಳ್ಳುವುದಕ್ಕಿಂತ ವ್ಯಕ್ತಿತ್ವದ ಶ್ರೇಷ್ಠತೆ ಮತ್ತೊಂದಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಸುಳ್ಯದ ನವೀನ್ ಸುಬ್ರಹ್ಮಣ್ಯ ಹೇಳಿದರು. ಹುದುಗೂರುವಿನಲ್ಲಿ ಸೋಮವಾರ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಂಚ ಸಂದೇಶ ಬಗ್ಗೆ ಜಾಗೃತಿ ಆಗಬೇಕಿರುವುದರ ಜತೆಗೆ ಪ್ರಸ್ತುತ ಹಿಂದೂಗಳ ಸ್ಥಿತಿಯನ್ನು ನೋಡಿದಾಗ ಹಿಂದೂ ಸಂಗಮ ಕಾರ್ಯಕ್ರಮಗಳ ಅವಶ್ಯಕತೆ ಬಹಳಷ್ಟಿದೆ. ಕುಟುಂಬದ ಮೌಲ್ಯವನ್ನು ಕಿರಿಯರ ಮೂಲಕ ಮುಂದಿನ ಜನಾಂಗಕ್ಕೆ ತಿಳಿಸುವುದು, ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಬುನಾದಿ ಯಾಗಬಲ್ಲದು. ಸಾಮರಸ್ಯದ ಭಾವ ಅಂತರAಗದಿAದ ಹುಟ್ಟಬೇಕು, ಪ್ರಕೃತಿ ರಕ್ಷಣೆ, ಮತ್ತು ನಾಗರಿಕ ಶಿಷ್ಟಾಚಾರ ಸದಾ ನಮ್ಮ ಉಸಿರಾಗಬೇಕು, ಇದರ ಮೂಲಕ ಸಮಾಜ ಜಾಗೃತವಾಗಬೇಕಾಗಿದೆ ಎಂದರು.
ಗ್ರಾಮ ಪ್ರಮುಖರಾದ ಹೆಚ್.ಎಸ್. ರವಿ ಮಾತಾನಾಡಿ ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ, ಕುಟುಂಬ ಜೀವನ, ಸ್ವದೇಶಿ ಚಿಂತನೆ, ನಾಗರಿಕ ಕರ್ತವ್ಯ ಪ್ರಜ್ಞೆ ಇವುಗಳ ಮೂಲಕ ಜಾಗೃತಿ ಮೂಡಿಸುವುದು ಹಿಂದೂ ಸಂಗಮ ಉದ್ದೇಶ, ಜತೆಯಲ್ಲಿ ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯವಾಗಬೇಕಾಗಿದೆ ಎಂದು ಹೇಳಿದರು.
ಗ್ರಾಮದ ಪ್ರಮುಖರಾದ ಐ.ಎಸ್. ಗಣೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಶಾಲನಗರ ಹಿಂದೂ ಸಂಗಮ ಆಯೋಜನ ಸಮಿತಿ ಅಧ್ಯಕ್ಷ ದೇವಿಪ್ರಸಾದ್, ಉಪಾಧ್ಯಕ್ಷೆ ಉಮಾ, ಹೆಚ್.ಎಸ್. ರವಿ, ಸಂಯೋಜಕ ತಾಕೇರಿ ಮಣಿ ಮದಲಾಪುರ, ಭರತ್ ಮಾಚಯ್ಯ, ಕೂಡಿಗೆ ಹಿಂದೂ ಸಂಗಮ ಆಯೋಜಕ ಸಮಿತಿ ಅಧ್ಯಕ್ಷ ಧರ್ಮ, ಸಹ ಸಂಯೋಜಕ ಅನಿಲ್ ಕುಮಾರ್, ಚಂದ್ರಕಾAತ್, ತನ್ಮಯ್ ಮತ್ತಿತರರು ಇದ್ದರು,
ಕಾರ್ಯಕ್ರಮದ ಅಂಗವಾಗಿ ಕಾರ್ಯಕರ್ತರು ಬೈಕ್ ಮೂಲಕ ಹುದುಗೂರು, ಮದಲಾಪುರ, ಸೀಗೆಹೊಸೂರು, ಭುವನಗಿರಿ, ಕೂಡಿಗೆ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿ ಗಮನ ಸೆಳೆದರು.