ಬಲಮುರಿಯ ಮಹದೇವ ಕ್ರೀಡಾ ಮಂಡಳಿ ವತಿಯಿಂದ ಕಾವೇರಿ ನದಿ ದಡದ ಬಳಗಮುಡಿ ಮೈದಾನದಲ್ಲಿ ಆಯೋಜಿಸಿದ್ದ ಹಿಂದು ಕಪ್ ಜಿಲ್ಲಾಮಟ್ಟದ ಹಗ್ಗ ಜಗ್ಗಾಟ ಸ್ಪರ್ಧೆಯ ರೋಚಕ ಕ್ಷಣ. 
ಕೊಡಗು

ಹಿಂದು ಕಪ್ ಜಿಲ್ಲಾಮಟ್ಟದ ಹಗ್ಗ ಜಗ್ಗಾಟ ಸ್ಪರ್ಧೆ

ಪ್ರಮುಖ ಮುಖ್ಯಾಂಶಗಳು

  • ಸಂಭ್ರಮದಿಂದ ಪಾಲ್ಗೊಂಡ ವನಿತೆಯರು
ನಾಪೋಕ್ಲು: ಪುರುಷರಿಗೆ ಮತ್ತು ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸುವ ಉದ್ದೇಶದಿಂದ ಜಿಲ್ಲಾ ಮಟ್ಟದ ಹಗ್ಗ ಜಗ್ಗಾಟ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದು ಕ್ರೀಡಾಮಂಡಳಿ ಕಾರ್ಯದರ್ಶಿ ಬೊಳ್ಳಚೆಟ್ಟಿರ ಜಯಂತಿ ಹೇಳಿದರು.
ಇಲ್ಲಿನ ಸಮೀಪದ ಬಲಮುರಿಯ ಮಹದೇವ ಕ್ರೀಡಾ ಮಂಡಳಿ ವತಿಯಿಂದ ಕಾವೇರಿ ನದಿ ದಡದ ಬಳಗಮುಡಿ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಹಿಂದು ಕಪ್ ಜಿಲ್ಲಾಮಟ್ಟದ ಹಗ್ಗ ಜಗ್ಗಾಟ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಗ್ರಾಮೀಣ ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಹಾಗೂ ಗ್ರಾಮದ ಒಗ್ಗಟ್ಟು ಹಾಗೂ ಒಟ್ಟಾಗಿ ಗೆಲ್ಲುವ ಸಂಸ್ಕೃತಿಯನ್ನು ಬಲಪಡಿಸುವ ಸಲುವಾಗಿ ಮೊಟ್ಟ ಮೊದಲ ಬಾರಿಗೆ ಮಹದೇವ ಕ್ರೀಡಾ ಮಂಡಳಿ ವತಿಯಿಂದ ಜಿಲ್ಲಾ ಮಟ್ಟದ ಹಗ್ಗ ಜಗ್ಗಾಟ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದರು. ಸಭಾ ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗುವುದರ ಮೂಲಕ ಹಾಗೂ ಗಾಳಿಯಲ್ಲಿ ಗುಂಡು ಹೊಡೆಯುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.
ಮಹಾದೇವ ಕ್ರೀಡಾ ಮಂಡಳಿ ಅಧ್ಯಕ್ಷ ತೊತ್ತಿಯಂಡ ಬನ್ಸಿ ಚಿಣ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಾರಾಣೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪಾಡೆಯಂಡ ಕಟ್ಟಿ ಕುಶಾಲಪ್ಪ, ಅಬಕಾರಿ ಇಲಾಖೆ ಶಿವಮೊಗ್ಗ ಉಪ ವಿಭಾಗ ಆಯುಕ್ತರಾದ ನಂಗಾರು ಸುಮೀತಾ ನಿಂಗರಾಜು, ಬಹುಮಾನ ಮತ್ತು ಟ್ರೋಫಿಗಳ ದಾನಿಗಳಾದ ಹೆಬ್ಬಾಟಂಡ ಪುಷ್ಪ ಪೆಮ್ಮಯ್ಯ, ಉದ್ಯಮಿ ಚೆನ್ನೈ ಗುಡ್ಡೆರ ಸತೀಶ್ ಶಂಭು, ಕಾಫಿ ಬೆಳೆಗಾರ ಕುಂದನ ದಯಾನಂದ, ಕಾಫಿ ಬೆಳೆಗಾರ ಚಂಗಂಡ ಗಣೇಶ ಸೋಮಯ್ಯ, ನಿವೃತ್ತ ಹವಾಲ್ದಾರ್ ಪೊನ್ನಚನ ಮನು ಮೋಹನ್, ಕ್ರೀಡಾ ಮಂಡಳಿ ಉಪಾಧ್ಯಕ್ಷ ಗುಡ್ಡೆರ ಲಕ್ಷು, ಸಹ ಕಾರ್ಯದರ್ಶಿ ಬೊಳ್ಳಚೆಟ್ಟಿರ ಅಚ್ಚಪ್ಪ ಪದಾಧಿಕಾರಿಗಳು, ಸಮಿತಿ ಸದಸ್ಯರು ಹಾಗೂ ಕ್ರೀಡಾಭಿಮಾನಿಗಳು ಪಾಲ್ಗೊಂಡಿದ್ದರು.
ಬ್ಬಾಟಂಡ ತಿಮ್ಮಯ್ಯ,ಶಿಕ್ಷಕಿ ಚೈಯಂಡ ಕಸ್ತೂರಿ, ಅಂಗಿರ ಕುಸುಮಾ, ಪಾರಾಣೆ ಶಿಕ್ಷಕ ಶಾಲೆಯ ಶಿಕ್ಷಕ ಮಂಜು, ಹಾತೂರು ಶಾಲೆಯ ಡೆನ್ಸಿ ದೇವಯ್ಯ,ಚೈಯಂಡ ರಘು ತಿಮ್ಮಯ್ಯ ಭಾಗವಹಿಸಿದ್ದರು.
ಸಭಾ ಕಾರ್ಯಕ್ರಮದ ನಂತರ ಹಾತೂರು ಹಾಗೂ ಕಾವೇರಿ ಫ್ರೆಂಡ್ಸ್ ಮಹಿಳಾ ತಂಡಗಳಿಂದ ಪ್ರಥಮ ಪಂದ್ಯಾಟ ಜರುಗಿತು. ಜಿಲ್ಲೆಯ ವಿವಿಧ ಕಡೆಯಿಂದ ಆಗಮಿಸಿದ್ದ ತಂಡಗಳು ಪಾಲ್ಗೊಂಡಿದ್ದವು.