ನಾಪೋಕ್ಲು: ಗಾಳಿ-ಮಳೆಗೆ ಪೆರಾಜೆ ಗ್ರಾಮದಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಜತೆಗೆ ವಾಸದ ಮನೆಗಳಿಗೆ ಹಾನಿ ಆಗಿ ಭಾರಿ ನಷ್ಟ ಸಂಭವಿಸಿದೆ.
ಕೆಂಚಕಮೂಲೆ - ನಿಡ್ಯಮಲೆ ರಸ್ತೆ, ಪೆರಾಜೆ - ಆಲೆಟ್ಟಿ ರಸ್ತೆಗಳು ಗುಡ್ಡ ಕುಸಿತದಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಅಲ್ಲದೆ ಕುಂದಲ್ಪಾಡಿ ಯಶೋದಾ ಪಾಟಾಳಿ ಅವರ ಅಡುಗೆ ಮನೆಯೊಳಗೆ ಗುಡ್ಡದ ಮಣ್ಣು ಆವರಿಸಿಕೊಂಡಿದೆ. ಅಡ್ಕ ಭಾಸ್ಕರ ಮತ್ತು ಮಾದಪ್ಪ ಅವರ ವಾಸದ ಮನೆಗಳು ಹಾನಿಯಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ನಷ್ಟ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.