ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವತಿಯಿಂದ ಕೈಗಾರಿಕಾ ಬಡಾವಣೆಯಲ್ಲಿ ಪೇ ಪಾರ್ಕಿಂಗ್ ಕಾಮಗಾರಿಗೆ ಶಾಸಕ ಡಾ.ಮಂತರ್‌ಗೌಡ ಚಾಲನೆ ನೀಡಿದರು. ಆದಂ, ಕೃಷ್ಣಪ್ರಸಾದ್, ಹೇಮಕುಮಾರ್, ಜಯಂತಿ, ಚಂದ್ರು ಇದ್ದರು. 
ಕೊಡಗು

ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಸಹಕರಿಸಿ

ಕೆಂಡಗಣ್ಣ ಎನ್

ಪ್ರಮುಖ ಮುಖ್ಯಾಂಶಗಳು

  • traffic
ಸೋಮವಾರಪೇಟೆ: ಟ್ರಾಫಿಕ್ ಸಮಸ್ಯೆ ಬಗೆಹರಿಸಲು ವಾಹನ ಮಾಲೀಕರು ಸಹಕರಿಸಬೇಕು. ಶಿಸ್ತುಬದ್ಧ ವಾಹನ ನಿಲುಗಡೆಗೆ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಇದೆ ಎಂದು ಶಾಸಕ ಡಾ.ಮಂತರ್‌ಗೌಡ ಹೇಳಿದರು.
ಪಟ್ಟಣ ಪಂಚಾಯಿತಿಯ ಉದ್ದಿಮೆ ನಿಧಿಯಿಂದ ಕೈಗಾರಿಕಾ ಬಡಾವಣೆಯಲ್ಲಿ 80ಲಕ್ಷ ರೂ.ಗಳ ವೆಚ್ಚದಲ್ಲಿ ಪೇ ಪಾರ್ಕಿಂಗ್ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ರಸ್ತೆ ಮೇಲಿನ ವಾಹನ ದಟ್ಟನೆ ಕಡಿಮೆ ಮಾಡಲು ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿ ಬೇಗ ಪೂರ್ಣಗೊಂಡರೆ ಜನರಿಗೆ ಉಪಯೋಗವಾಗಲಿದೆ. ವಾಹನ ಮಾಲೀಕರು ಕೂಡ ಪೇ ಪಾರ್ಕಿಂಗ್ ಸ್ಥಳದಲ್ಲೇ ವಾಹನ ನಿಲುಗಡೆ ಮಾಡಬೇಕು. ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿದರೆ ಸಮಸ್ಯೆ ಬಗೆಹರಿಯುವುದಿಲ್ಲ ಎಂದರು.
ಶಾಸಕರ ವಿಶೇಷ ಅನುದಾನದಲ್ಲಿ 10 ಲಕ್ಷ ರೂ.ಗಳ ವೆಚ್ಚದಲ್ಲಿ ಸಿ.ಕೆ.ಸುಬ್ಬಯ್ಯ ರಸ್ತೆ ಅಗಲೀಕರಣವಾಗಿದೆ. ಬಾಣಾವರ ರಸ್ತೆಯಲ್ಲಿರುವ ಪ್ರಯಾಣಿಕರ ತಂಗುದಾಣ 5 ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಂಡಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಸೂಡ ಅಧ್ಯಕ್ಷ ಕೆ.ಎ.ಆದಂ, ಎಂಜಿನಿಯರ್ ಹೇಮಕುಮಾರ್, ಮಾಜಿ ಅಧ್ಯಕ್ಷರಾದ ಜಯಂತಿ ಶಿವಕುಮಾರ್, ಪಿ.ಕೆ.ಚಂದ್ರು, ಮಾಜಿ ಕೌನ್ಸಿಲರ್‌ಗಳಾದ ಶೀಲಾ ಡಿಸೋಜ, ಬಿ.ಸಂಜೀವ, ಮಹೇಶ್, ಮೋಹಿನಿ ಇದ್ದರು.