ಚೆರಂಡೇಟಿ ಅಂಗನವಾಡಿ ಕೇಂದ್ರದಲ್ಲಿ ಅನ್ನಪ್ರಾಶನ ಮತ್ತು ಆರೋಗ್ಯ ತಪಾಸಣೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಮೇಪಾಡಂಡ ಸವಿತಾ ಕೀರ್ತನ್, ಪಿ.ಎಸ್.ಉಮಾಶ್ರೀ ಇತರರಿದ್ದರು.
- ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ಕಾರ್ಯಕ್ರಮ
ಮಡಿಕೇರಿ: ಚೆರಂಡೇಟಿ ಅಂಗನವಾಡಿ ಕೇಂದ್ರದಲ್ಲಿ ಪೋಷಣಾಭಿಯಾನದ ಅಂಗವಾಗಿ ಅನ್ನಪ್ರಾಶನ ಮತ್ತು ಆರೋಗ್ಯ ತಪಾಸಣೆ ಕಾರ್ಯಕ್ರಮ ನಡೆಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ಮಗುವಿಗೆ ೧೦೦೦ ದಿನಗಳು, ಎದೆ ಹಾಲಿನ ಮಹತ್ವ, ಮಗು ಮತ್ತು ತಾಯಿಯ ಸ್ವಚ್ಛತೆ, ಸ್ಥಳೀಯ ಆಹಾರಗಳ ಬಳಕೆ, ಇಲಾಖೆಯ ಯೋಜನೆಗಳಾದ ಭಾಗ್ಯ ಲಕ್ಷ್ಮಿ, ಮಾತೃವಂದನ ಯೋಜನೆಗಳು ಇತ್ಯಾದಿಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಪುಟಾಣಿಗಳಾದ ಹೆಯನ್ ಮತ್ತು ದಿಯನ್‌ಗೆ ಅನ್ನಪ್ರಾಶನವನ್ನು ಹಮ್ಮಿಕೊಳ್ಳಲಾಯಿತು. ನಂತರ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಶೈಮ, ಆರೋಗ್ಯ ಕಾರ್ಯಕರ್ತೆ ಮಮತಾ ರವರು ಮಕ್ಕಳ ತೂಕ, ಎತ್ತರ, ಆರೋಗ್ಯ ತಪಾಸಣೆ ಮತ್ತು ಅನಿಮಿಯಾ ಪರೀಕ್ಷೆ ನಡೆಸಿದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಪಿ.ಎಸ್.ಉಮಾಶ್ರೀ, ಶಾಲಾ ಶಿಕ್ಷಕಿ ಪುಷ್ಪವೇಣಿ, ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಬಿನ್ನಿ ಗೋಪಾಲ್, ಕೇಂದ್ರದ ಸಹಾಯಕಿ ಕೆ.ಎಂ.ರೇಷ್ಮಾ, ಬಾಲವಿಕಾಸ ಸಮಿತಿಯ ಪ್ರಮುಖರು, ಮಕ್ಕಳ ತಾಯಂದಿರು, ಪೋಷಕವರ್ಗದವರು ಹಾಜರಿದ್ದರು.