ಆರೊಗ್ಯ ಜಾಗೃತಿ ಕಾರ್ಯಕ್ರಮ ನಾಳೆ 
ಕೊಡಗು

ಆರೊಗ್ಯ ಜಾಗೃತಿ ಕಾರ್ಯಕ್ರಮ ನಾಳೆ

ಎಂ.ರವಿ
ಸೋಮವಾರಪೇಟೆ: ಇನ್ನರ್ ವ್ಹೀಲ್ ಕ್ಲಬ್ ಸೋಮವಾರಪೇಟೆ ಗೋಲ್ಡ್, ಮಹಿಳಾ ಸಹಕಾರ ಸಂಘ, ಜೇಸಿಐ ಸೋಮವಾರಪೇಟೆ ಮತ್ತು ರೋಟರಿ ಕ್ಲಬ್ ಆಫ್ ಸೋಮವಾರಪೇಟೆ ಹಿಲ್ಸ್ ಸಹಯೋಗದಲ್ಲಿ ಏ.19ರಂದು ಮಹಿಳಾ ಸಮಾಜದ ಸಭಾಂಗಣದಲ್ಲಿ ಮಧ್ಯಾಹ್ನ 3 ಗಂಟೆಗೆ ಆರೋಗ್ಯ ಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ಇನ್ನರ್‌ವ್ಹೀಲ್ ಅಧ್ಯಕ್ಷೆ ತನ್ಮಯಿ ಪ್ರವೀಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಋತುಬಂಧ ಬಂಧವಲ್ಲ ವಿಷಯದ ಬಗ್ಗೆ ಡಾ.ಇಮಾನಿ ಹಾಗೂ ತ್ವಜೆ ಮತ್ತು ಕೂದಲಿನ ಆರೈಕೆ ಬಗ್ಗೆ ಡಾ.ವರ್ಷ ಮಾಹಿತಿ ನೀಡಿಲಿದ್ದಾರೆ. ಮಹಿಳೆಯರು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.