ಮಾಜಿ ಸಚಿವ ಅಪ್ಪಚ್ಚು ರಂಜನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು, ನಾಪಂಡ ಮುತ್ತಪ್ಪ, ಶೋಭಾ ಪ್ರಕಾಶ್, ಟಿ.ಬಿ. ಜಗದೀಶ್, ಎಚ್.ಟಿ.ಕುಶಾಲಪ್ಪ, ಸಿ.ಎಸ್.ಶಶಿಕುಮಾರ್, ಎ.ಎನ್.ರಮೇಶ್, ನಟೇಶ್ ಗೌಡ, ಧನಂಜಯ, ಆನಂದ್ ಮತ್ತಿತರರಿದ್ದರು. 
ಕೊಡಗು

ದೇವಾಲಯಗಳಿಂದ ಗ್ರಾಮಗಳಲ್ಲಿ ಸಾಮರಸ್ಯ

ಪ್ರಜ್ವಲ್.ಎನ್

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ಅಪ್ಪಚ್ಚು ರಂಜನ್ ಅಭಿಮತ
ಕುಶಾಲನಗರ: ದೇವಾಲಯಗಳ ಪ್ರತಿಷ್ಠಾಪನೆ ಹಾಗೂ ಸತ್ಸಂಗಗಳಿಂದ ಗ್ರಾಮಗಳಲ್ಲಿ ಏಕತೆ, ಸಾಮರಸ್ಯ ಮೂಡುತ್ತದೆ ’ಎಂದು ಮಾಜಿ ಸಚಿವ ಅಪ್ಪಚ್ಚು ರಂಜನ್ ಹೇಳಿದರು.
ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸಿರುಗುಪ್ಪೆ ಗ್ರಾಮದಲ್ಲಿ ಇತ್ತೀಚೆಗೆ ನೂತನವಾಗಿ ಭದ್ರಕಾಳಿ, ಭಂಟ, ನಾಗನಕಟ್ಟೆ, ಮಾರಿಯಮ್ಮ ಮತ್ತು ಗುಳಿಗ ದೇವರುಗಳ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
ಗ್ರಾಮಗಳಲ್ಲಿ ಕೃಷಿ ಚಟುವಟಿಕೆಗಳು ನಿರ್ವಿಘ್ನವಾಗಿ ಸಾಗಲು ,ಕಾಲಕಾಲಕ್ಕೆ ಮಳೆ ಬೆಳೆಯಾಗಲು ದೇವರು ಹರಸುವಂತಾಗಬೇಕು. ಭಾರತೀಯರು ಪ್ರಕೃತಿಯ ಆರಾಧಕರು. ಭೂಮಿಗೆ ಮಾರಕವಾದ ಪ್ಲಾಸ್ಟಿಕ್ ಬಳಕೆಯನ್ನು ಗ್ರಾಮಗಳ ಪ್ರತಿ ಮನೆಯೂ ನಿಷೇಧಿಸುವಂತಾಗಬೇಕೆಂದು ಕರೆ ಕೊಟ್ಟರು.
ಉದ್ಯಮಿ ನಾಪಂಡ ಮುತ್ತಪ್ಪ ಮಾತನಾಡಿ, ’1200 ವರ್ಷಗಳ ಹಿಂದಿನ ಗಂಗರಾಜನ ಕಾಲದ ಶಾಸನ ಅರಿಶಿಣಗುಪ್ಪೆಯಲ್ಲಿದ್ದು ಧಾರ್ಮಿಕವಾಗಿ ಬಹಳಷ್ಟು ಪ್ರಾಮುಖ್ಯತೆ ಇರುವ ಗ್ರಾಮವಾಗಿದೆಯೆಂದು ಹೇಳಿದರು.
ಸಿದ್ದಲಿಂಗಪುರದ ಶ್ರೀ ಮಂಜುನಾಥ ದೇವಾಲಯದ ಮುಖ್ಯಸ್ಥರಾದ ಶ್ರೀ ರಾಜೇಶ್ ನಾಥ್ ಗುರೂಜಿ ಆಶೀರ್ವಚನ ನೀಡಿದರು .
ತೊರೆನೂರು ಗ್ರಾ.ಪಂ .ಅಧ್ಯಕ್ಷರಾದ ಶೋಭಾ ಪ್ರಕಾಶ್, ಉಪಾದ್ಯಕ್ಷರಾದ ರೂಪ ಮಹೇಶ್, ಸದಸ್ಯರಾದ ದೇವರಾಜು, ಎಂ.ಟಿ.ಬೇಬಿ, ತೊರೆನೂರು ಸಹಕಾರ ಸಂಘದ ಅಧ್ಯಕ್ಷ ಟಿ.ಬಿ.ಜಗದೀಶ್, ನಿರ್ದೇಶಕ ಎಚ್.ಟಿ.ಕುಶಾಲಪ್ಪ, ಬಸವೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಸಿ.ಎಸ್.ಶಶಿಕುಮಾರ್, ಅಳುವಾರದಮ್ಮ ದೇವಾಲಯ ಟ್ರಸ್ಟ್ ಅಧ್ಯಕ್ಷ ಎ.ಎನ್.ರಮೇಶ್, ಕಾಂಗ್ರೆಸ್ ಮುಖಂಡ ಹೆಬ್ಬಾಲೆಯ ನಟೇಶ್ ಗೌಡ, ಬಿ.ಪಿ.ಹರೀಶ್ ಕುಮಾರ್, ಗ್ರಾಪಂ ಸದಸ್ಯ ಕೆ.ಬಿ.ದೇವರಾಜು, ಮಾಜಿ ಸದಸ್ಯರಾದ ಪಿ.ಡಿ.ರವಿಕುಮಾರ್, ಯೋಗಿಣಿ ಬೆಳ್ಳಿಯಪ್ಪ, ಮಾಜಿ ಯೋಧ ಧನಂಜಯ, ಬಸಿರುಗುಪ್ಪೆ ಬಸವೇಶ್ವರ ದೇವಾಲಯ ಸೇವಾ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಧನಂಜಯ, ಗೌರವಾಧ್ಯಕ್ಷ ಆನಂದ್, ಉಪಾಧ್ಯಕ್ಷ ಟಿ.ಸಿ.ಮೋಹನ್, ಕಾರ್ಯದರ್ಶಿ ಹೆಚ್.ಆರ್.ಉದಯಕುಮಾರ್, ಪದಾಧಿಕಾರಿಗಳಾದ ಗುರುಪ್ರಸಾದ್, ಕುಶನ್ ಕುಮಾರ್, ಶಿವಕುಮಾರ್, ಸತೀಶ್ ಕುಮಾರ್, ವಿನೋದ್ ಕುಮಾರ್, ದೇವಾಲಯದ ಅರ್ಚಕ ಉರುಂಡೆ ಅಶೋಕ್ ಇದ್ದರು.