ಮಡಿಕೇರಿಯಲ್ಲಿ ಇಡೀ ದಿನ ಮಂಜು ಮುಸುಕಿದ ವಾತಾವರಣ ಮತ್ತು ನಿರಂತರ ತುಂತುರು ಮಳೆ ಇತ್ತು.
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಜಲಾಶಯ ಭರ್ತಿ ಆಗಲು ಇನ್ನು 4.87 ಅಡಿಗಳಷ್ಟು ನೀರು ಬರಬೇಕಿದೆ. ಬುಧವಾರ 2854.13 ಅಡಿಗಳು ನೀರಿದೆ. ಕಳೆದ ವರ್ಷ ಇದೇ ದಿನ 2856.86 ಅಡಿಗಳಷ್ಟು ನೀರಿತ್ತು. ಜಲಾಶಯಕ್ಕೆ 3,145 ಕ್ಯೂಸೆಕ್ ನೀರಿನ ಒಳಹರಿವು ಇದ್ದು, ಕಳೆದ ವರ್ಷ ಇದೇ ದಿನ 3,436 ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ನದಿಗೆ 180 ಕ್ಯೂಸೆಕ್ ನೀರು ಬಿಡಲಾಗಿತ್ತಿದೆ. ಕಳೆದ ವರ್ಷ ಇದೇ ದಿನ ನದಿಗೆ 4,500 ಕ್ಯೂಸೆಕ್ ಮತ್ತು ನಾಲೆಗೆ 400 ಕ್ಯೂಸೆಕ್ ನೀರು ಬಿಡಲಾಗುತ್ತಿತ್ತು.
ಕೊಡಗು ಜಿಲ್ಲೆಯಾದ್ಯಂತ ಬುಧವಾರ ಮುಂಗಾರು ಮಳೆ ಮತ್ತೆ ಸ್ವಲ್ಪ ಚುರುಕುಗೊಂಡಿದ್ದು, ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಸಾಧಾರಣದಿಂದ ಉತ್ತಮ ಮಳೆಯಾಗಿದೆ. ಬುಧವಾರ ಮುಂಜಾನೆಯಿAದಲೇ ಮೋಡಕವಿದ ವಾತಾವರಣದೊಂದಿಗೆ ಹನಿ ಇಡಲು ಆರಂಭಿಸಿತು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಇಡೀ ದಿನ ಮಂಜು ಮುಸುಕಿದ ವಾತಾವರಣ ಹಾಗೂ ನಿರಂತರ ತುಂತುರು ಮಳೆ ಮುಂದುವರಿಯಿತು. ಕಾವೇರಿ ಉಗಮ ಸ್ಥಾನ ತಲಕಾವೇರಿ ಹಾಗೂ ಭಾಗಮಂಡಲ ವ್ಯಾಪ್ತಿಯಲ್ಲಿ ನಿರಂತರ ಮಳೆಯಾಗುತ್ತಿದ್ದು, ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟದಲ್ಲಿ ಸಲ್ಪ ಏರಿಕೆ ಕಂಡುಬAದಿದೆ. ನಾಪೋಕ್ಲು ಹಾಗೂ ವಿರಾಜಪೇಟೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಆಗಾಗ್ಗೆ ಸಾಧಾರಣ ಮಳೆಯಾಗಿದ್ದು, ಶೀತ ಗಾಳಿಯ ವಾತಾವರಣ ನಿರ್ಮಾಣವಾಗಿತ್ತು. ಗೋಣಿಕೊಪ್ಪಲು, ಪೊನ್ನಂಪೇಟೆ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಮಧ್ಯಾಹ್ನದ ವೇಳೆಗೆ ಉತ್ತಮ ಮಳೆಯಾಗಿದೆ. ಕುಶಾಲನಗರ ಹಾಗೂ ಸೋಮವಾರಪೇಟೆ ತಾಲೂಕಿನ ಹಲವೆಡೆ ಜಿಟಿಜಿಟಿ ಮಳೆಯೊಂದಿಗೆ ತಂಪಾದ ವಾತಾವರಣ ಇತ್ತು.
ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 7.81 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 8.80 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 777.40 ಮಿ.ಮೀ. ಮಳೆಯಾಗಿದ್ದು ಕಳೆದ ವರ್ಷ ಇದೇ ಅವಧಿಯಲ್ಲಿ 1837.56 ಮಿ.ಮೀ. ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ 9.33 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 4.90 ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ 17.45 ಮಿ.ಮೀ.
ಸೋಮವಾರಪೇಟೆ ತಾಲೂಕಿನಲ್ಲಿ 6.37 ಮಿ.ಮೀ. ಹಾಗೂ ಕುಶಾಲನಗರ ತಾಲೂಕಿನಲ್ಲಿ 1 ಮಿ.ಮೀ. ಸರಾಸರಿ ಮಳೆಯಾಗಿದೆ.
ಮಡಿಕೇರಿ 9.50, ನಾಪೋಕ್ಲು 4.20, ಸಂಪಾಜೆ 5, ಭಾಗಮಂಡಲ 18.60, ವಿರಾಜಪೇಟೆ 5.80, ಅಮ್ಮತ್ತಿ 4, ಹುದಿಕೇರಿ 6.80, ಶ್ರೀಮಂಗಲ 3.60, ಪೊನ್ನಂಪೇಟೆ 12, ಬಾಳೆಲೆ 3.07, ಸೋಮವಾರಪೇಟೆ 22, ಶನಿವಾರಸಂತೆ 16, ಶಾಂತಳ್ಳಿ 23, ಕೊಡ್ಲಿಪೇಟೆ 8.80, ಕುಶಾಲನಗರ 1 ಹಾಗೂ ಸುಂಟಿಕೊಪ್ಪ ಹೋಬಳಿಯಲ್ಲಿ 1 ಮಿ.ಮೀ. ಸರಾಸರಿ ಮಳೆಯಾಗಿದೆ.