ಶ್ರೀ ವೀರಾಂಜನೇಯ ಸ್ವಾಮಿ ದೇಗುಲದಲ್ಲಿ ವಾರ್ಷಿಕ ಹನುಮ ಜಯಂತಿ ವಿಶೇಷ ಪೂಜೆಯಲ್ಲಿ ನೆರೆದಿರುವ ಭಕ್ತರು.
ವಿರಾಜಪೇಟೆ: ನಗರದ ಚಿಕ್ಕಪೇಟೆ ಛತ್ರಕೆರೆ ಸಮೀಪದ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ವಾರ್ಷಿಕ ಹನುಮ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಇತ್ತಿಚೆಗೆ ಆಚರಿಸಲಾಯಿತು.
ಮುಂಜಾನೆ ಶ್ರೀ ಸ್ವಾಮಿಗೆ ವಿಶೇಷ ಕಲಾಶಾಭಿಷೇಕ ಪೂಜೆಗಳು ಸಲ್ಲಿಕೆಯಾದವು. ಬಳಿಕ ವಿವಿಧ ಹೂವುಗಳಿಂದ ಶ್ರೀ ಸ್ವಾಮಿಗೆ ಶೃಂಗಾರ ನಡೆಸಲಾಯಿತು. ನಗರದ ಭಜನಾ ಮಂಡಳಿ ಸದಸ್ಯರಿಂದ ರಾಮ ಹನುಮನ ಭಜನೆ ಸಂಕೀರ್ತನೆ ನಡೆಯಿತು. ಮಧ್ಯಾಹ್ನ ಸ್ವಾಮಿಗೆ ಮಹಾಮಂಗಳಾರತಿ, ಪೂಜೆ ನಡೆಯಿತು. ತೀರ್ಥ ಪ್ರಸಾದ ವಿನಿಯೋಗದ ನಂತರ ಆಡಳಿತ ಮಂಡಳಿ ವತಿಯಿಂದ ಆಗಮಿಕ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.
ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು. ನಗರದ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ದೇವರ ಅನುಗ್ರಹ ಪಡೆದು ಪುನೀತರಾದರು.