ಸೋಮವಾರಪೇಟೆ ತಾಲೂಕಿನ ಶುಂಠಿ ಗ್ರಾಮದ ಸೇತುವೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ, ಇತರ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡರು. ಭರತ್, ಸತೀಶ್, ಕಿರಣ್ ಇದ್ದರು.
ಸೋಮವಾರಪೇಟೆ: ತಾಲೂಕಿನ ಶುಂಠಿ ಗ್ರಾಮ ಸಂಪರ್ಕ ಸೇತುವೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ. ಮಂತರ್ಗೌಡ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿ, ರಸ್ತೆ ಅಭಿವೃದ್ಧಿ ನಿಗಮದ ವತಿಯಿಂದ 25 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ನಿಗದಿತ ಅವಧಿಯಲ್ಲಿ ಗುಣಮಟ್ಟದ ಕೆಲಸ ಪೂರ್ಣಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮೀಣ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದ್ದು, ರಸ್ತೆ, ಸೇತುವೆ ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.
ಈ ಸೇತುವೆ ನಿರ್ಮಾಣದಿಂದ ಗ್ರಾಮಸ್ಥರ ಸಂಚಾರ ಸುಗಮವಾಗಲಿದ್ದು, ಕೃಷಿ ಉತ್ಪನ್ನಗಳ ಸಾಗಣೆಗೂ ಸಹಾಯವಾಗಲಿದೆ ಎಂದರು. ಶುಂಠಿ ಗ್ರಾಮದ ಹಿರಿಯರಾದ ಎಸ್.ಬಿ.ಭರತ್ ಕುಮಾರ್, ಪ್ರಮುಖರಾದ ಗೌಡಳ್ಳಿ ಮಹೇಶ್, ಬಿ .ಬಿ .ಸತೀಶ್, ಡಿ.ಯು.ಕಿರಣ್. ವಿನಯ್ ಮತ್ತು ಗ್ರಾಮಸ್ಥರು ಇದ್ದರು.