ಕೂಡಿಗೆ ಕ್ರೀಡಾ ಪ್ರೌಢಶಾಲೆಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಹಾಕಿ ಮೈದಾನದ ಅಸ್ಟ್ರೋಟರ್ಫ್ ಹೆಚ್ಚುವರಿ ಕಾಮಗಾರಿಗಳಿಗೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಭೂಮಿ ಪೂಜೆ ನೆರವೇರಿಸಿದರು. ಸಿ.ಎಸ್. ಅರುಣ್ ಮಾಚಯ್ಯ, ವಿಸ್ಮಯಿ ಚಕ್ರವರ್ತಿ, ಫಿಲೋಮಿನಾ ಮತ್ತಿತರರು ಇದ್ದರು. 
ಕೊಡಗು

ಅಸ್ಟ್ರೋಟರ್ಫ್ ಹೆಚ್ಚುವರಿ ಕಾಮಗಾರಿಗಳಿಗೆ ಭೂಮಿಪೂಜೆ

ಸುನಿಲ್ ಪೊನ್ನೇಟಿ
ಕುಶಾಲನಗರ:
ಕೂಡಿಗೆ ಕ್ರೀಡಾ ಪ್ರೌಢಶಾಲೆಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಹಾಕಿ ಮೈದಾನದ ಅಸ್ಟ್ರೋಟರ್ಫ್ ಹೆಚ್ಚುವರಿ ಕಾಮಗಾರಿಗಳಿಗೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಶನಿವಾರ ಭೂಮಿ ಪೂಜೆ ನೆರವೇರಿಸಿದರು. ನಂತರ ಮಾತಾನಾಡಿ ಗ್ರಾಮಾಂತರ ಪ್ರದೇಶದ ಯುವಕ, ಯುವತಿಯರು ಕ್ರೀಡಾ ಶಾಲೆಗೆ ಅಯ್ಕೆಗೊಂಡ ನಂತರ ತಮ್ಮ ಸಾಮರ್ಥ್ಯವನ್ನು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸುವ ಅವಕಾಶಕ್ಕೆ ಪೂರಕವಾಗಿ ರಾಷ್ಟ್ರೀಯ ಕ್ರೀಡಾ ನಿಯಮಾನುಸಾರ ಇಂಥ ಮೈದಾನದ ಅವಶ್ಯಕತೆ ಪ್ರಮುಖವಾಗಿರುತ್ತದೆ. ಅದರಿಂದಲೇ ರಾಜ್ಯ ಸರ್ಕಾರ ಕ್ರೀಡಾ ಇಲಾಖೆಯ ನಿಯಮ ಅಡಿಯಲ್ಲಿ ಕ್ರೀಡಾ ಶಾಲೆಗಳ ಅಭಿವೃದ್ಧಿ ಮತ್ತು ಮೈದಾನದ ಅಭಿವೃದ್ಧಿಗೆ ಪೂರಕವಾದ ಯೋಜನೆಯನ್ನು ಜಾರಿಗೆ ತರುವ ಮೂಲಕ ಮೂರು ಕೋಟಿ ರೂ. ವೆಚ್ಚದಲ್ಲಿ ಕೂಡಿಗೆ ಕ್ರೀಡಾ ಶಾಲೆಯ ಕ್ರೀಡಾಂಗಣದ ಅಭಿವೃದ್ಧಿಪಡಿಸಲಾಗುವುದು. ಮುಂದಿನ ದಿನಗಳಲ್ಲಿ ಜಿಲ್ಲಾ ಕ್ರೀಡಾಂಗಣದ ಕ್ರೀಡಾಭಿವೃಧ್ಧಿಗೆ ಹೆಚ್ಚು ಅನುದಾನವನ್ನು ತಂದು ಅಭಿವೃದ್ಧಿ ಮಾಡಲಾಗುವುದು ಎಂದರು.
ಮುಖ್ಯ ಅತಿಥಿಯಾಗಿ ಅಗಮಿಸಿದ್ದ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ ಮಾತಾನಾಡಿ ಕ್ರೀಡಾಂಗಣದ ಅಭಿವೃದ್ಧಿ ಮೂಲಕ ಕ್ರೀಡಾ ಶಾಲಾ ವಿದ್ಯಾರ್ಥಿಗಳ ಪ್ರಗತಿಗೆ ಪೂರಕ ಮತ್ತು ಶಾಲೆಗೆ ಸಂಬAಧಿಸಿದ ಸುಸಜ್ಜಿತ ಕ್ರೀಡಾಂಗಣ ಅದಕ್ಕೆ ಸಂಬAಧಿಸಿದ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಕ್ರೀಡಾ ಶಾಲೆಯ ಅಭಿವೃದ್ಧಿ ಸಾಧ್ಯ. ಜಿಲ್ಲೆಯ ಕ್ರೀಡಾಂಗಣಗಳನ್ನು ಮೇಲ್ದರ್ಜೆಗೆ ಏರಿಸುವ ಮೂಲಕ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಗುವುದು. ಇಲಾಖೆಯ ಕಟ್ಟಡಗಳ ಉನ್ನತೀಕರಣಕ್ಕೆ ಆದ್ಯತೆ ಕೊಡಲಾಗುವುದು.
ದಸರಾ ಕ್ರೀಡೋತ್ಸವ ಸಂದರ್ಭದಲ್ಲಿ ನೀಡುವ ಪ್ರಶಸ್ತಿ ಪತ್ರವನ್ನು ಮರು ಪರಿಷ್ಕರಿಸಣಗೊಳಿಸಿ ಕ್ರೀಡಾ ಪ್ರತಿಭೆಯು ತನ್ನ ಬದುಕಿಗೆ ಪೂರಕವಾದ ಉದ್ಯೋಗವನ್ನು ಪಡೆಯುಲು ಅನುಕೂಲ ಕಲ್ಪಿಸುವ ವ್ಯವಸ್ಥೆ ಆಗಬೇಕಾಗಿದೆ. ಇದಕ್ಕೆ ಸಂಬAಧಿಸಿದAತೆ ಇಲಾಖೆಯ ಸಚಿವಯೊಂದಿಗೆ ಚರ್ಚಿಸಲಾಗುವುದು. ರಾಜ್ಯದಲ್ಲಿ ಕ್ರೀಡಾ ಪಟುಗಳಿಗೆ ಉದ್ಯೋಗದಲ್ಲಿ ಶೇ. 2 ಮೀಸಲಾತಿ ಇರುವುದರಿಂದ ಪ್ರಶಸ್ತಿ ಪತ್ರದ ಬದಲಾವಣೆ ಬಹು ಮುಖ್ಯ ಎಂದು ಹೇಳಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿಸ್ಮಯಿ ಚಕ್ರವರ್ತಿ, ಕೂಡಿಗೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಟಿ.ಪಿ. ಹಮೀದ್, ಪದವಿಪೂರ್ವ ಕಾಲೇಜು ಉಪಾಧ್ಯಕ್ಷ ಸೋಮಶೇಖರ್, ಕೂಡುಮಂಗಳೂರು ಗ್ರಾಮ ಪಂಚಾಯತಿ ಮಾಜಿ ಸದಸ್ಯೆ ಫಿಲೋಮಿನಾ, ಈರಪ್ಪ, ಚಂದ್ರ, ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಜಯಪ್ರಕಾಶ್, ಕ್ರೀಡಾ ತರಬೇತುದಾರರಾದ ವೆಂಕಟೇಶ್, ದಿನಮಣಿ, ಸುರೇಶ್, ಗುತ್ತಿಗೆದಾರ ಮಂಜುನಾಥ, ಶಾಲಾ ಮುಖ್ಯೋಪಾಧ್ಯಾಯನಿ ಅಶ್ವಿತ್, ಶಿಕ್ಷಕರ ವೃಂದ, ವಿವಿಧ ವಿಭಾಗದ ತರಬೇತುದಾರರು, ಶಾಲಾ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಇದ್ದರು.