ಭಗವತಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ವತಿಯಿಂದ ಸಹಾಯಧನದ ಚೆಕ್ ನೀಡಲಾಯಿತು. ಹರೀಶ್, ಕೆ.ಬಿ.ಪೊನ್ನಪ್ಪ, ಕಾರ್ಯದರ್ಶಿ ಪಿ.ಪಿ. ಪೆಮ್ಮಯ್ಯ ಇದ್ದರು.
ವಿರಾಜಪೇಟೆ: ಸಮೀಪದ ಅರಮೇರಿ ಗ್ರಾಮದ ಬೆಪ್ಪುನಾಡು ಪೆಮ್ಮತ್ ಮಾನಿ ಶ್ರೀ ಭಗವತಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ವತಿಯಿಂದ 2 ಲಕ್ಷ ರೂ.ಗಳ ಸಹಾಯಧನದ ಡಿಡಿಯನ್ನು ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಹರೀಶ್ ದೇವಸ್ಥಾನ ಸಮಿತಿಗೆ ಇತ್ತೀಚೆಗೆ ಹಸ್ತಾಂತರ ಮಾಡಿದರು.
ಬಳಿಕ ಮಾತನಾಡಿದ ಅವರು ಗ್ರಾಮಾಂತರ ಭಾಗದಲ್ಲಿ ಧಾರ್ಮಿಕ ಕ್ಷೇತ್ರಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಪೂಜ್ಯರು ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಮುಂದಿನ ಯುವ ಪೀಳಿಗೆ ಇಂತಹ ಕಾರ್ಯಕ್ರಮಗಳಿಂದ ಧಾರ್ಮಿಕ ಪರಂಪರೆಯನ್ನು ಬೆಳೆಸುವಂತಾಗಬೇಕು. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಶೀಘ್ರ ಪೂರ್ಣಗೊಳ್ಳಲಿ ಎಂದು ಹಾರೈಸಿದರು.
ದೇವಸ್ಥಾನದ ಸಮಿತಿ ಅಧ್ಯಕ್ಷ ಕೆ.ಬಿ.ಪೊನ್ನಪ್ಪ, ಕಾರ್ಯದರ್ಶಿ ಪಿ.ಪಿ.ಪೆಮ್ಮಯ್ಯ, ಪದಾಧಿಕಾರಿಗಳು, ಗ್ರಾಮಸ್ಥರು, ವಲಯದ ಮೇಲ್ವಿಚಾರಕರು ಉಪಸ್ಥಿತರಿದ್ದರು.