ಕುಶಾಲನಗರ ಪಿ.ಎಂ.ಶ್ರೀ ಶಾಲಾ ಮೈದಾನದಲ್ಲಿ ಏರ್ಪಡಿಸಿದ್ದ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ಸರ್ಕಾರಿ ನೌಕರರ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ನೆರಳಿನ ಕೊಡೆಗಳನ್ನು ವಿತರಿಸಲಾಯಿತು. ಡಾ. ಮಂತರ್ ಗೌಡ, ಧರ್ಮಜ ಉತ್ತಪ್ಪ, ವಿ.ಪಿ. ಶಶಿಧರ್, ಕೃಷ್ಣಮೂರ್ತಿ, ಕಿರಣ್ ಗೌರಯ್ಯ ಇದ್ದರು. 
ಕೊಡಗು

ಸರ್ಕಾರಿ ನೌಕರರ ಕ್ರೀಡಾಕೂಟ ಸಮಾರೋಪ

ಕುಶಾಲನಗರ:
ಕುಶಾಲನಗರ ಪಿ.ಎಂ.ಶ್ರೀ ಶಾಲಾ ಮೈದಾನದಲ್ಲಿ ಏರ್ಪಡಿಸಿದ್ದ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ಸರ್ಕಾರಿ ನೌಕರರ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭ ಮಂಗಳವಾರ ಸಂಜೆ ನಡೆಯಿತು. ಇದಕ್ಕೂ ಮೊದಲು ನಡೆದ ಪಂದ್ಯಾವಳಿಯಲ್ಲಿ ಅರಣ್ಯ ಇಲಾಖೆ ತಂಡ ಪ್ರಥಮ, ಪೊಲೀಸ್ ಇಲಾಖೆ ತಂಡ ದ್ವಿತೀಯ ಸ್ಥಾನ ಪಡೆಯಿತು. ಕಂದಾಯ ಇಲಾಖೆ ತೃತೀಯ, ನ್ಯಾಯಾಂಗ ಇಲಾಖೆ ತಂಡ ನಾಲ್ಕನೇ ಸ್ಥಾನ ಗಳಿಸಿತು.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಬಹುಮಾನ ವಿತರಿಸಿದರು.
ಕ್ರೀಡೆ ಹೊರತುಪಡಿಸಿ ನೌಕರರ ಸಂಘ ಮಾನವೀಯ ಸೇವಾ ಚಟುವಟಿಕೆ ಹಮ್ಮಿಕೊಂಡಿದ್ದು ವಿಶೇಷವಾಗಿತ್ತು. ಪೋಷಕರನ್ನು ಕಳೆದುಕೊಂಡಿರುವ ಇಬ್ಬರು ಮಕ್ಕಳಿಗೆ ಭವಿಷ್ಯ ನಿಧಿಗೆ ಒದಗಿಸಲಾದ 1 ಲಕ್ಷ ಮೊತ್ತದ ಎಫ್.ಡಿ.ಬಾಂಡ್ ಅನ್ನು ಶಾಸಕರ ಮೂಲಕ ಹಸ್ತಾಂತರಿಸಲಾಯಿತು. ಜತೆಗೆ ಕುಶಾಲನಗರದ 10 ಕ್ಕೂ ಅಧಿಕ ಬೀದಿಬದಿ ವ್ಯಾಪಾರಿಗಳಿಗೆ ನೆರಳಿನ ಕೊಡೆಗಳನ್ನು ಸಮಾರೋಪ ಸಮಾರಂಭದಲ್ಲಿ ವಿತರಣೆ ಮಾಡಲಾಯಿತು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ಸಮಿತಿಯ ತಾಲೂಕು ಅಧ್ಯಕ್ಷ ವಿ.ಪಿ. ಶಶಿಧರ್, ಸೋಮವಾರಪೇಟೆ ತಹಸೀಲ್ದಾರ್ ಕೃಷ್ಣಮೂರ್ತಿ, ಕುಶಾಲನಗರ ತಹಸೀಲ್ದಾರ್ ಕಿರಣ್ ಗೌರಯ್ಯ, ಕ್ರೀಡಾಕೂಟ ಸಂಯೋಜಕರಾದ ಸೈಜನ್ ಕೆ. ಪೀಟರ್, ಕೆ. ಸಿ. ಶಿವಮೂರ್ತಿ, ರತ್ನಕುಮಾರ್, ಸ್ವಾಮಿ, ಹರೀಶ ಸೇರಿದಂತೆ ಎಲ್ಲಾ ಇಲಾಖೆ ಅಧಿಕಾರಿ ವರ್ಗ, ಸಿಬ್ಬಂದಿ ನೌಕರರು ಹಾಜರಿದ್ದರು.