ಗುಡ್ ಫ್ರೈಡೆ ಪ್ರಯುಕ್ತ ಗೋಪಾಲಪುರ ಚರ್ಚ್‌ನಲ್ಲಿ ಮೆರವಣಿಗೆ ನಡೆಯಿತು.
ಶನಿವಾರಸಂತೆ: ಸಮೀಪದ ಗೋಪಾಲಪುರದ ಸಂತ ಅಂತೋಣಿ ಚರ್ಚ್ ಫಾದರ್ ಕ್ರಿಸ್ಟೋಫರ್ ಸಗಾಯರಾಜ್ ಅವರಿಂದ ಶುಭ ಶುಕ್ರವಾರದಂದು 15 ಶಿಲುಬೆ ಬೆಟ್ಟದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಪ್ರತಿ ಒಂದೊಂದು ಶಿಲುಬೆಯಲ್ಲಿ ದೇವರು ಅನುಭವಿಸಿದ ಕಷ್ಟಗಳನ್ನು ಕುರಿತು ಪ್ರಾರ್ಥನೆ ಸಲ್ಲಿಸುತ್ತಾ ಹಾಗೂ ದೇಶದ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಪ್ರತಿಯೊಂದು ಜನರಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಿ ದೇವರ ಸ್ಮರಣೆಯನ್ನು ಮಾಡುತ್ತ ಶಿಲುಬೆ ಪ್ರಾರ್ಥನೆಯನ್ನು ಮುಗಿಸಿ ತದನಂತರ ಚರ್ಚ್‌ನಲ್ಲಿರುವ ಶಿಲುಬೆಗೆ ಪೂಜೆ ಸಲ್ಲಿಸಿದರು. ಚರ್ಚ್ ಫಾದರ್ ಕ್ರಿಸ್ಟೋಫರ್ ಸಗಾಯರಾಜ್ ಹಾಗೂ ಸಿಸ್ಟರ್ ಲೂಸಿ ಹಾಗೂ ಸಲಹಾ ಸಮಿತಿಗಳ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.