ಹದಿನಾರನೇ ಶತಮಾನದ ವೀರರಾಣಿ ಚೆನ್ನಭೈರಾದೇವಿಯ ಆಡಳಿತ, ಧೈರ್ಯ ಹಾಗೂ ಸಾಧನೆಗಳನ್ನು ಆಧರಿಸಿದ ಸಂಕ್ಷಿಪ್ತ ನಾಟಕದಲ್ಲಿ ಅಭಿನಯಿಸಿದ ತನಿಷ, ಜೆಶಿಕ, ವಿಷ್ಣುವರ್ಧನ್ ಪ್ರೀತಂ ಪೂರ್ಣಚಂದ್ರ ಅವರೊಂದಿಗೆ ದಾಕ್ಷಾಯಣಿ, ಮಂಜುಳಾ ಇತರರಿದ್ದರು. 
ಕೊಡಗು

ವಿದ್ಯಾರ್ಥಿಗಳಿಂದ ವೀರರಾಣಿ ಚೆನ್ನಭೈರಾದೇವಿ ನಾಟಕ ಪ್ರದರ್ಶನ

ಗೋಣಿಕೊಪ್ಪ:

ಪೊನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಸ್ಕೂಲ್(ಕೆಪಿಎಸ್) ಪ್ರಾಥಮಿಕ ವಿಭಾಗದಲ್ಲಿ ಇತ್ತೀಚೆಗೆ ಸಚೇತನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಂಗವಾಗಿ 16ನೇ ಶತಮಾನದ ವೀರರಾಣಿ ಚೆನ್ನಭೈರಾದೇವಿಯ ಆಡಳಿತ, ಧೈರ್ಯ ಹಾಗೂ ಸಾಧನೆಗಳನ್ನು ಆಧರಿಸಿದ ಸಂಕ್ಷಿಪ್ತ ನಾಟಕವನ್ನು 4ನೇ ತರಗತಿಯ ವಿದ್ಯಾರ್ಥಿಗಳು ಅಭಿನಯದ ಮೂಲಕ ಪ್ರಸ್ತುತಪಡಿಸಿದರು. ಐತಿಹಾಸಿಕ ವಿಷಯವನ್ನು ವಿದ್ಯಾರ್ಥಿಗಳು ಪಾತ್ರಧಾರಿಗಳಾಗಿ ಅಭಿನಯಿಸಿದ್ದು, ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದಿತು.
ವೀರರಾಣಿ ಚೆನ್ನಭೈರಾದೇವಿ ಪಾತ್ರದಲ್ಲಿ ಪಿ.ವಿ.ತನಿಷ ಪಿಳ್ಳೆ, ಮಂತ್ರಿ ಪಾತ್ರದಲ್ಲಿ ಎಚ್.ಎಸ್.ಜೆಶಿಕ ಹಾಗೂ ಆಸ್ಥಾನಿಕರಾಗಿ ಸಿ.ವಿಷ್ಣುವರ್ಧನ್ ಮತ್ತು ಎನ್.ವಿ.ಪ್ರೀತಂ ಪೂರ್ಣಚಂದ್ರ ಅಭಿನಯಿಸಿದರು.
ವಿದ್ಯಾರ್ಥಿಗಳ ಈ ಚಟುವಟಿಕೆಗೆ ತರಗತಿ ಶಿಕ್ಷಕಿಯರಾದ ಎನ್.ಎಸ್.ದಾಕ್ಷಾಯಣಿ ಹಾಗೂ ಆರ್.ಮಂಜುಳಾ ಮಾರ್ಗದರ್ಶನ ನೀಡಿದರು. ಮಕ್ಕಳನ್ನು ಐತಿಹಾಸಿಕ ಪಾತ್ರಗಳಿಗೆ ಸಜ್ಜುಗೊಳಿಸುವಲ್ಲಿ ಪಾಲಕರೂ ಸಹಕಾರ ನೀಡಿದರು.
ವಿದ್ಯಾರ್ಥಿಗಳು ಐತಿಹಾಸಿಕ ಘಟನೆಗಳನ್ನು ಅಭಿನಯದ ಮೂಲಕ ಪರಿಣಾಮಕಾರಿಯಾಗಿ ಪರಿಚಯಿಸಿದ್ದಕ್ಕೆ ಮುಖ್ಯಶಿಕ್ಷಕ ಬಿ.ಎಂ.ವಿಜಯ್ ಹಾಗೂ ಶಿಕ್ಷಕ ವೃಂದ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು.