ವಲಯ ಮಟ್ಟದ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಪಡೆದ ತಂಡ.
- ವಲಯ ಮಟ್ಟದ ಫುಟ್‌ಬಾಲ್ ಪಂದ್ಯಾವಳಿ
ಸುಂಟಿಕೊಪ್ಪ: ವಲಯ ಮಟ್ಟದ ಫುಟ್‌ಬಾಲ್ ಪಂದ್ಯಾವಳಿಯಲ್ಲಿ 14ರ ವಯೋಮಿತಿ ವಿಭಾಗದಲ್ಲಿ ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಸ್ಕೂಲ್ ಪ್ರಥಮ ಸ್ಥಾನ, ಉದ್ಗಮ್ ಶಾಲೆ ದ್ವಿತೀಯ ಸ್ಥಾನವನ್ನು ಪಡೆಯಿತು.
17ರ ವಯೋಮಿತಿ ವಿಭಾಗದಲ್ಲಿ ಮೈಸೂರಿನ ಡಿ.ಪೌಲ್ ತಂಡ ಪ್ರಥಮ ಸ್ಥಾನ ಮತ್ತು ಮಡಿಕೇರಿ ಜನರಲ್ ತಿಮ್ಮಯ್ಯ ಶಾಲೆ ತಂಡ ದ್ವಿತೀಯ ಸ್ಥಾನ ಪಡೆಯಿತು.
19ರ ವಯೋಮಿತಿ ವಿಭಾಗದಲ್ಲಿ ಮೈಸೂರಿನ ಡಿ.ಪೌಲ್ ತಂಡ ಪ್ರಥಮ ಸ್ಥಾನ, ಗೋಣಿಕೊಪ್ಪ ಕ್ಯಾಲ್ಸ್ ತಂಡ ದ್ವಿತೀಯ ಸ್ಥಾನ ಪಡೆಯಿತು.
ವಿಜೇತ ತಂಡಗಳಿಗೆ ಕೊಡಗು ಫುಟ್‌ಬಾಲ್ ಕ್ಲಬ್ ಅಧ್ಯಕ್ಷ ಐ.ಎಸ್.ಪೊನ್ನಪ್ಪ, ಉದ್ಗಮ್ ಸಂಸ್ಥೆ ಪ್ರಾಂಶುಪಾಲ ಬಿ.ಪಿ.ಬೋಪಣ್ಣಬಹುಮಾನ ವಿತರಣೆ ಮಾಡಿದರು.