ವಿರಾಜಪೇಟೆ: ಹೋಮ್ ಸ್ಟೇಗಳಿಗೆ ವಿದೇಶಿ ಪ್ರವಾಸಿಗರು ಬಂದಲ್ಲಿ ಅಂತಹ ಪ್ರವಾಸಿಗರ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬೇಕು. ಹೋಮ್ ಸ್ಟೇಗಳಲ್ಲಿ ನಡೆಯುವಂತ ವಿಚಾರಗಳ ಮಾಹಿತಿಯನ್ನು ಇಲಾಖೆಗೆ ತಪ್ಪದೇ ನೀಡಬೇಕು ಎಂದು ವಿರಾಜಪೇಟೆ ಡಿವೈಎಸ್‌ಪಿ ಮಹೇಶ್‌ಕುಮಾರ್ ಹೇಳಿದರು. 
ಕೊಡಗು

ಪ್ರವಾಸಿಗರ ಸಂಪೂರ್ಣ ಮಾಹಿತಿ ಕಲೆ ಹಾಕಿ

ರವಿಕುಮಾರ್ ಪಿ. ಕೆ
ವಿರಾಜಪೇಟೆ: ಹೋಮ್ ಸ್ಟೇಗಳಿಗೆ ವಿದೇಶಿ ಪ್ರವಾಸಿಗರು ಬಂದಲ್ಲಿ ಅಂತಹ ಪ್ರವಾಸಿಗರ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬೇಕು. ಹೋಮ್ ಸ್ಟೇಗಳಲ್ಲಿ ನಡೆಯುವಂತ ವಿಚಾರಗಳ ಮಾಹಿತಿಯನ್ನು ಇಲಾಖೆಗೆ ತಪ್ಪದೇ ನೀಡಬೇಕು ಎಂದು ವಿರಾಜಪೇಟೆ ಡಿವೈಎಸ್‌ಪಿ ಮಹೇಶ್‌ಕುಮಾರ್ ಹೇಳಿದರು.
ವಿರಾಜಪೇಟೆ ವೃತ್ತ ನಿರೀಕ್ಷಕರ ಕಛೇರಿಯ ಸಭಾಂಗಣದಲ್ಲಿ ನಗರ ಮತ್ತು ಗ್ರಾಮಾಂತರ ಠಾಣಾ ಉಪವಿಭಾಗ ವ್ಯಾಪ್ತಿಯ ಹೋಮ್ ಸ್ಟೇಗಳ ಮಾಲೀಕರು ಮತ್ತು ವ್ಯವಸ್ಥಾಪಕರಿಗೆ ಮಂಗಳವಾರ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಎಲ್ಲ ಹೋಮ್ ಸ್ಟೇಗಳು ರಾಜ್ಯ ಪ್ರವಾಸೋದ್ಯಮ ಇಲಾಖೆಯ ಅಡಿಯಲ್ಲಿ ನೋಂದಣಿ ಆಗಿರಬೇಕು. ಇಲ್ಲವಾದಲ್ಲಿ ಅಂತಹ ಹೋಮ್ ಸ್ಟೇಗಳನ್ನು ಕಾನೂನುಬಾಹಿರ ಎಂದು ಪರಿಗಣಿಸಲಾಗುವುದು. ಪ್ರತಿ ಹೋಮ್ ಸ್ಟೇಗಳಲ್ಲಿ ಸಿಸಿ ಕ್ಯಾಮರಾಗಳನ್ನು ಕಡ್ಡಾಯವಾಗಿ ಅಳವಡಿಸಿರಬೇಕು. 30 ದಿನಗಳ ಶೇಖರಣ ಸಾಮರ್ಥ್ಯದ ಕ್ಯಾಮರಾಗಳನ್ನು ಅಳವಡಿಸಿರಬೇಕು. ಯಾವುದೇ ಸಮಯದಲ್ಲಿ ಪೊಲೀಸ್ ಅಧಿಕಾರಿಗಳು ಬಂದ ಸಂದರ್ಭದಲ್ಲಿ ಕ್ಯಾಮರಾದಲ್ಲಿ ಸಂಗ್ರಹವಾದ ದಾಖಲೆ ನೀಡುವಂತ ಸೌಲಭ್ಯ ಇರಬೇಕು. ಹೋಮ್ ಸ್ಟೇಗಳಿಗೆ ಭೇ ಟಿ ನೀಡುವ ಪ್ರವಾಸಿಗರು ಯಾವ ಉದ್ದೇಶಕ್ಕಾಗಿ ಬಂದಿದ್ದಾರೆ ಎಂಬ ಮಾಹಿತಿಯನ್ನು ಮತ್ತು ವಿಳಾಸವನ್ನು ಪಡೆದುಕೊಳ್ಳಬೇಕು. ಹೋಮ್ ಸ್ಟೇಗಳಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರ ಹೆಸರು, ವಿಳಾಸವನ್ನು ಕಡ್ಡಾಯವಾಗಿ ನೋಂದಾವಣೆ ಪುಸ್ತಕದಲ್ಲಿರಬೇಕು. ಪ್ರತಿ ತಿಂಗಳು ನಾಲ್ಕನೇ ಬುಧವಾರ ಹೋಮ್ ಸ್ಟೇ ಮಾಲೀಕರ ಸಭೆ ನಡೆಸಲಾಗುವುದು. ಸಭೆಗೆ ತಪ್ಪದೇ ಹಾಜರಾಗುವಂತೆ ಹೇಳಿದರು.
ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಮಾತನಾಡಿ, ಪ್ರತಿಯೊಬ್ಬರೂ ಕಾನೂನಿನ ನಿಯಮವನ್ನು ಪಾಲಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ನಗರ ಮತ್ತು ಗ್ರಾಮಾಂತರ ಠಾಣಾಧಿಕಾರಿಗಳಾದ ಎಚ್.ಎಸ್.ಪ್ರಮೋದ್, ಎನ್.ಜಿ.ಲತಾ, ಟಿ.ಎಂ.ಕಾವೇರಪ್ಪ ಮತ್ತು ವಾಣಿಶ್ರೀ ಉಪಸ್ಥಿತರಿದ್ದರು.
ವಿರಾಜಪೇಟೆ ತಾಲೂಕಿನ ವ್ಯಾಪ್ತಿಯ ಹೋಮ್ ಸ್ಟೇ ಮಾಲೀಕರು ಮತ್ತು ವ್ಯವಸ್ಥಾಪಕರ ಸಭೆ ಮಂಗಳವಾರ ನಡೆಯಿತು. ಮಹೇಶ್‌ಕುಮಾರ್, ಅನೂಪ್ ಮಾದಪ್ಪ , ಎಚ್.ಎಸ್.ಪ್ರಮೋದ್, ಎನ್.ಜಿ.ಲತಾ, ಟಿ.ಎಂ.ಕಾವೇರಪ್ಪ ಮತ್ತು ವಾಣಿಶ್ರೀ ಇದ್ದರು.