ಗ್ಯಾಸ್ ಸಿಲಿಂಡರ್ ಹಾಗೂ ರೆಗ್ಯುಲೇಟರ್ ಬಳಕೆ ಹಾಗೂ ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ ಹಾಗೂ ಅರಿವು ಕಾರ್ಯಾಗಾರದಲ್ಲಿ ಮೈಸೂರಿನ ಗ್ಯಾಸ್ ಸುರಕ್ಷಿತ ಸಂಸ್ಥೆಯ ವ್ಯವಸ್ಥಾಪಕ ಶಕೀಲ್ ಅಹಮದ್, ಸಿವಿಲ್ ನ್ಯಾಯಾಧೀಶೆ ಎಲ್. ಚೈತ್ರಾ, ವಕೀಲರ ಸಂಘದ ಕಾರ್ಯದರ್ಶಿ ಕೆ.ಬಿ.ಮೋಹನ್, ಸದಸ್ಯರಾದ ಕೆ. ಎಸ್. ವೆಂಕಟರಮಣರಾವ್ ಮತ್ತಿತರರಿದ್ದರು.
ಕುಶಾಲನಗರ: ಪ್ರತಿ ಮನೆಯಲ್ಲಿ ಉಪಯೋಗಿಸುವ ಗ್ಯಾಸ್ ಸಿಲಿಂಡರ್ ಹಾಗೂ ರೆಗ್ಯುಲೇಟರ್ ಬಳಕೆ ಹಾಗೂ ನಿರ್ವಹಣೆ ಕುರಿತು ಕುಶಾಲನಗರದ ನ್ಯಾಯಾಲಯದ ಆವರಣದಲ್ಲಿ ಪ್ರಾತ್ಯಕ್ಷಿಕೆ ಹಾಗೂ ಅರಿವು ಕಾರ್ಯಾಗಾರ ಶುಕ್ರವಾರ ನಡೆಯಿತು.
ಮೈಸೂರಿನ ಗ್ಯಾಸ್ ಸುರಕ್ಷಿತ ಸಂಸ್ಥೆಯ ವ್ಯವಸ್ಥಾಪಕ ಶಕೀಲ್ ಅಹಮದ್ ಮಾಹಿತಿ ನೀಡಿದರು. ಮಹಿಳೆಯರು ಗ್ಯಾಸ್ ಸಿಲಿಂಡರ್ ಗಳನ್ನು ಬಳಸುವಾಗ ಅಗತ್ಯವಾಗಿ ಅನುಸರಿಸಬೇಕಾದ ಸುರಕ್ಷಾ ಕ್ರಮಗಳ ಕುರಿತು ಸಿವಿಲ್ ನ್ಯಾಯಾಧೀಶೆ ಎಲ್. ಚೈತ್ರಾ ವಿವರಣೆ ನೀಡಿ ಇಂತಹ ಜಾಗೃತಿ ಕಾರ್ಯಾಗಾರ ಎಲ್ಲೆಡೆ ಅಗತ್ಯವಿದೆ ಎಂದರು.
ವಕೀಲರ ಸಂಘದ ಕಾರ್ಯದರ್ಶಿ ಕೆ.ಬಿ. ಮೋಹನ್, ಸದಸ್ಯರಾದ ಕೆ.ಎಸ್. ವೆಂಕಟರಮಣರಾವ್, ಸುಧಾಕರ್, ರಾಘವೇಂದ್ರ, ಸಂತೋಷ್ ಕುಮಾರ್, ಸವಿತಾ ಮೊದಲಾದವರಿದ್ದರು.