ಸೋಮವಾರಪೇಟೆ ಹೈಟೆಕ್ ಮಾರುಕಟ್ಟೆ ಬಳಿಯಲ್ಲಿ ಕಳೆದ ಹಲವು ವರ್ಷಗಳಿಂದ ಸಂಗ್ರವಾಗಿದ್ದ ತ್ಯಾಜ್ಯವನ್ನು ಶಾಸಕರ ಸ್ವಂತ ಹಣದಿಂದ ತೆರವುಗೊಳಿಸಿ ಮೈಸೂರಿನ ವೆಲ್‌ಕಮ್ ತ್ಯಾಜ್ಯ ವಿಲೇವಾರಿ ಘಟಕಕ್ಕೆ ವರ್ಗಾಯಿಸಲಾಯಿತು.
ಸೋಮವಾರಪೇಟೆ: ಇಲ್ಲಿನ ಹೈಟೆಕ್ ಮಾರುಕಟ್ಟೆ ಬಳಿಯಲ್ಲಿ ಕಳೆದ ಹಲವು ವರ್ಷಗಳಿಂದ ಸಂಗ್ರಹವಾಗಿದ್ದ ತ್ಯಾಜ್ಯವನ್ನು ಶಾಸಕರ ಸ್ವಂತ ಹಣದಿಂದ ತೆರವುಗೊಳಿಸಿ, ಮೈಸೂರಿನ ವೆಲ್‌ಕಮ್ ಟ್ರೇಡರ್ಸ್‌ನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ವರ್ಗಾಯಿಸಲಾಯಿತು.
ಪಟ್ಟಣದಲ್ಲಿ ಇಂದಿಗೂ ತ್ಯಾಜ್ಯ ವಿಲೇವಾರಿಗೆ ಸಮಸ್ಯೆ ಇದ್ದು, ಎಲ್ಲೆಡೆ ಸಂಗ್ರಹ ಮಾಡಿದ್ದರಿಂದ ಸಮಸ್ಯೆಯಾಗಿತ್ತು. ಇದನ್ನು ಮನಗಂಡ ಶಾಸಕ ಡಾ.ಮಂತರ್ ಗೌಡ ಅವರು ಸ್ವಂತ ವೆಚ್ಚದಿಂದ ತ್ಯಾಜ್ಯವನ್ನು ತೆಗೆಸಲು ಮುಂದಾಗಿದ್ದಾರೆ. ಪಟ್ಟಣ ಪಂಚಾಯಿತಿ ಸಿಬ್ಬಂದಿ ಗುರುವಾರ ಮಾರುಕಟ್ಟೆ ಬಳಿಯ ತ್ಯಾಜ್ಯವನ್ನು ಲಾರಿಗೆ ತುಂಬಿಸಿ ಮೈಸೂರಿಗೆ ಕಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಆರೋಗ್ಯಾಧಿಕಾರಿ ಜಾಸಿಂಖಾನ್ ಮತ್ತು ಸಿಬ್ಬಂದಿ ಇದ್ದರು.