ಭಾರತೀಯ ವಿದ್ಯಾ ಭವನ ಕೊಡಗು ಕೇಂದ್ರದ ವತಿಯಿಂದ ಕೊಡಗು ಜಿಲ್ಲಾ ಪೊಲೀಸ್ ಸಿಬ್ಬಂದಿಗಾಗಿ ಏರ್ಪಡಿಸಿದ್ದ ಕೇಳುವಿಕೆ ಉಚಿತ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. ಬಿ. ದಿನೇಶ್, ಡಾ. ರಾಧಾ ಸಿಂಹಾದ್ರಿ, ಬಾಲಾಜಿ ಕಾಶ್ಯಪ್ ಇದ್ದರು.
ಭಾರತೀಯ ವಿದ್ಯಾ ಭವನ ಕೊಡಗು ಕೇಂದ್ರದ ವತಿಯಿಂದ ಕೊಡಗು ಜಿಲ್ಲಾ ಪೊಲೀಸ್ ಸಿಬ್ಬಂದಿಗಾಗಿ ಕೇಳುವಿಕೆ ಉಚಿತ ಶಿಬಿರವನ್ನು ಶನಿವಾರ ಆಯೋಜಿಸಲಾಗಿತ್ತು. ಮಡಿಕೇರಿಯ ಮೈತ್ರಿ ಸಭಾಂಗಣದಲ್ಲಿ ನಡೆದ ಶಿಬಿರವನ್ನು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ. ದಿನೇಶ್ ಉದ್ಘಾಟಿಸಿದರು. ಈ ಕಾರ್ಯಕ್ರಮವನ್ನು ಮೈಸೂರುವಿನಲ್ಲಿರುವ ಕೇಳುವಿಕೆ, ಮಾತು ಮತ್ತು ಇಂಪ್ಲಾAಟ್ ಕ್ಲಿನಿಕ್ ಸಹಯೋಗದಲ್ಲಿ ಆಯೋಜಿಸಲಾಗಿತ್ತು, ಕೇಳುವಿಕೆ ಸಮಸ್ಯೆಗಳ ಕ್ಷೇತ್ರದಲ್ಲಿ ಖ್ಯಾತಿ ಪಡೆದ ತಜ್ಞರಾದ ಡಾ. ರಾಧಾ ಸಿಂಹಾದ್ರಿ ಶಿಬಿರದ ನೇತೃತ್ವ ವಹಿಸಿದ್ದರು. ಭಾರತೀಯ ವಿದ್ಯಾ ಭವನದ ಕೊಡಗು ಘಟಕದ ಕಾರ್ಯದರ್ಶಿ ಬಾಲಾಜಿ ಕಾಶ್ಯಪ್ ಉಪಸ್ಥಿತರಿದ್ದರು. ಪೊಲೀಸ್ ಸಿಬ್ಬಂದಿ ಅಧಿಕ ಸಂಖ್ಯೆಯಲ್ಲಿ ಶಿಬಿರದ ಪ್ರಯೋಜನ ಪಡೆದರು.