ರಾಜಪೇಟೆ ತಾಲೂಕು ಅಮ್ಮತ್ತಿ ನಿವಾಸಿ ಎನ್.ಆರ್.ರಾಜೇಶ್
- ಕೇರಳದ ಕಟ್ಟಪನ
- ಕೊಡಗಿನ ಎನ್.ಆರ್.ರಾಜೇಶ್ ಜಾದೂಗಾರ 4ನೇ ಸ್ಥಾನ
- ರಾಜ್ಯ ಪ್ರಶಸ್ತಿ ವಿಜೇತರೂ ಆಗಿರುವ ರಾಜೇಶ್
ಸಿದ್ದಾಪುರ: ಕೇರಳದ ಕಟ್ಟಪನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರಮಟ್ಟದ ಜಾದೂ ಸ್ಪರ್ಧೆಯಲ್ಲಿ ಕೊಡಗಿನ ಎನ್.ಆರ್.ರಾಜೇಶ್ ಜಾದೂಗಾರ 4ನೇ ಸ್ಥಾನ ಪಡೆದಿದ್ದಾರೆ.
ರಾಜ್ಯ ಪ್ರಶಸ್ತಿ ವಿಜೇತರೂ ಆಗಿರುವ ರಾಜೇಶ್ ವಿರಾಜಪೇಟೆ ತಾಲೂಕು ಅಮ್ಮತ್ತಿಯ ನಿವಾಸಿ. ಸಮಾಜ ಸೇವೆಯೊಂದಿಗೆ 2012 ರಲ್ಲಿ ವಿರಾಜಪೇಟೆಯಿಂದ ಸಿದ್ದಾಪುರದವರೆಗೆ ಒಟ್ಟು 17 ಕಿ.ಮೀ. ದೂರ ಕಣ್ಣಿಗೆ ಬಟ್ಟೆಕಟ್ಟಿ ಕೊಂಡು ಬೈಕ್ ಚಾಲನೆ ಮಾಡುವ ಮೂಲಕ ಹೆಲ್ಮೆಟ್ ಕಡ್ಡಾಯದ ಬಗ್ಗೆ ಜಾಗೃತಿ ಮೂಡಿಸಿ ಸಾರ್ವಜನಿಕ ಪ್ರಶಂಸೆಗೆ ಪಾತ್ರರಾಗಿದ್ದರು.
ದೇಶದ ವಿವಿಧ ರಾಜ್ಯಗಳ ಒಟ್ಟು 118 ಸ್ಪರ್ಧಿಗಳು ಪಾಲ್ಗೊಂಡಿದ್ದ ಸ್ಪರ್ಧೆಯಲ್ಲಿ ಕೊಡಗಿನ ಈ ಜಾದೂಗಾರ ನಾಲ್ಕನೇ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.