ಫುಟ್ ಪಲ್ಸ್ ಥೆರಪಿ ಉಚಿತಾ ಚಿಕಿತ್ಸಾ ಶಿಬಿರದಲ್ಲಿ ಪಾಲ್ಗೊಂಡಿರುವ ಶಿಬಿರಾರ್ಥಿಗಳು 
ಕೊಡಗು

ಫುಟ್ ಫಲ್ಸ್ ಥೆರೆಪಿ ಶಿಬಿರ

ಕುಶಾಲನಗರ:
ಹೆಬ್ಬಾಲೆ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಸಾರ್ವಜನಿಕರಿಗಾಗಿ ಫುಟ್ ಪಲ್ಸ್ ಥೆರಪಿ ಉಚಿತಾ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ. ಏ. 7ರಿಂದಲೇ ಈ ಶಿಬಿರ ಆರಂಭವಾಗಿದ್ದು, ಏ. 22 ರವರೆಗೆ ನಡೆಯಲಿದೆ. ಪ್ರತಿದಿನವೂ ಬೆಳಗ್ಗೆ 10 ಗಂಟೆಯಿAದ ಸಂಜೆ 5 ಗಂಟೆಯವರೆಗೆ ನಡೆಯುವ ಶಿಬಿರದಲ್ಲಿ 8 ವರ್ಷದ ಮೇಲ್ಪಟ್ಟು ವಯೋ ವೃದ್ದರವರೆಗೂ ಥೆರಪಿಯ ಪ್ರಯೋಜನ ಪಡೆದುಕೊಳ್ಳಬಹುದು ಎಂದು ತರಬೇತಿ ಶಿಬಿರದ ಆಯೋಜಕರಾದ ಕಂಪಾನಿಯೋ ಸಂಸ್ಥೆಯ ಥೆರಪಿಯನ್ ಶಶಿಕಾಂತ ಪೂಜಾರಿ ಹೇಳಿದರು.
ಅರ್ಧ ಗಂಟೆ ಕಾಲ ನಡೆಸುವ ಥೆರಪಿಯಲ್ಲಿ ಓರ್ವ ಆರೋಗ್ಯವಂತ ಮನುಷ್ಯ 5 ಕಿಮೀ ವೇಗದ ನಡಿಗೆ ಮಾಡಿದಷ್ಟು ಪ್ರಯೋಜನವಾಗಲಿದೆ.
ಥೆರಪಿಯಿಂದಾಗಿ ದೇಹದ ನರನಾಡಿಗಳಲ್ಲಿ ಸುಗಮ ರಕ್ತ ಸಂಚಾರವಾಗುತ್ತದೆ. ದೇಹದಲ್ಲಿನ ಅಶುದ್ಧ ರಕ್ತ ಶುದ್ಧವಾಗುತ್ತದೆ. ಹೃದಯಸಂಬAಧಿ ಕಾಯಿಲೆಗಳು ಸೇರಿದಂತೆ ಸೊಂಟ ನೋವು, ಹಿಂಬದಿ ನೋವು, ಬೆನ್ನು ನೋವು ಮೊದಲಾದ ನರ ದೌರ್ಬಲ್ಯಗಳ ನೋವುಗಳು ನಿವಾರಣೆಯಾಗಲಿವೆ. ಕಂಪಾನಿಯೋ ಸಂಸ್ಥೆ 2014 ರಿಂದ ಆರಂಭವಾಗಿದ್ದು ದೇಶಾದ್ಯಂತ 15 ಲಕ್ಷಕ್ಕೂ ಹೆಚ್ಚು ಮಂದಿಗೆ ಪ್ರಯೋಜನವಾಗಿದೆ ಎಂದು ಮಾಹಿತಿ ನೀಡಿದರು.