ಆದಿಶಕ್ತಿ ಟ್ಯುಟೋರಿಯಲ್ಸ್ನಲ್ಲಿ ವಿದ್ಯಾರ್ಥಿಗಳಿಗೆ ಬೆಂಕಿಯಿಲ್ಲದೆ ಖಾದ್ಯ ತಯಾರಿಸುವ ಸ್ಪರ್ಧೆ ನಡೆಯಿತು. ಮಾಚಯ್ಯ, ಕರಣ್, ಜಿಸ್ಮ, ಶಮಿನ, ಫಮಿದ ಷರೀಫ್, ಅನಿಮೊಳ ರಾಜೇಶ್ ಇದ್ದರು.
ವಿರಾಜಪೇಟೆ: ಆದಿಶಕ್ತಿ ಟ್ಯುಟೋರಿಯಲ್ಸ್ ನಲ್ಲಿ ಪ್ರತಿ ವರ್ಷದಂತೆ ವಿದ್ಯಾರ್ಥಿಗಳಿಗೆ ಬೆಂಕಿ ಇಲ್ಲದೆ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.
ಸಂಸ್ಥೆಯ ಮುಖ್ಯಸ್ಥ ಕರಣ್ ಕುಮಾರ್ ಮಾತನಾಡಿ, ಕಲಿಕೆಯ ಜತೆಗೆ ಮಕ್ಕಳಿಗೆ ಇನ್ನಿತರ ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಂಡು ಈ ರೀತಿಯ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ತೀರ್ಪುಗಾರರಾಗಿ ವಿರಾಜಪೇಟೆಯ ಫಮಿದ ಷರೀಫ್, ಅನಿಮೋಳ್ ರಾಜೇಶ್, ಬೆಪುಡಿಯಂಡ ಮಾಚಯ್ಯ ಪಾಲ್ಗೊಂಡಿದ್ದರು. ಸಂಸ್ಥೆಯ ಉಪನ್ಯಾಸಕರಾದ ಶಮಿನ, ಜಿಸ್ಮಾ, ಲವೀನ್ ಲೋಫೆಜ್ ಹಾಜರಿದ್ದರು.