ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕುಶಾಲನಗರ ತಾಲೂಕು ಕ.ಸಾ.ಪ. ಹಾಗೂ ಹೆಬ್ಬಾಲೆ ವಲಯದ ಕ.ಸಾ.ಪ. ಘಟಕದ ವತಿಯಿಂದ ತೊರೆನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಪಟೇಲ್ ಸಣ್ಣಯ್ಯ ವಾರ್ಷಿಕ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಬಿ.ಆರ್. ಸತ್ಯನಾರಾಯಣ ಉದ್ಘಾಟಿಸಿದರು. ಡಾ. ಜೆ. ಸೋಮಣ್ಣ, ಟಿ.ಜಿ. ಪ್ರೇಮಕುಮಾರ್, ಎಚ್.ಬಿ. ಚಂದ್ರಪ್ಪ, ಕೆ.ಎಸ್. ಕೃಷ್ಣೇಗೌಡ ಮತ್ತಿತರರು ಇದ್ದರು. 
ಕೊಡಗು

ಜನಪದ ಸಾಹಿತ್ಯ ಎಲ್ಲಾ ಸಾಹಿತ್ಯದ ತಾಯಿಬೇರು

ಕುಶಾಲನಗರ
ಜನಪದ ಸಾಹಿತ್ಯ ಎಲ್ಲಾ ಸಾಹಿತ್ಯದ ತಾಯಿಬೇರು. ಸಮಾಜದಲ್ಲಿ ಗ್ರಾಮೀಣ ಸೊಗಡಿನ ಜಾನಪದ ಸಾಹಿತ್ಯದಲ್ಲಿ ನಿಜವಾದ ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳು ಇವೆ ಎಂದು ಸಾಹಿತಿ ಡಾ ಜೆ. ಸೋಮಣ್ಣ ಹೇಳಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕುಶಾಲನಗರ ತಾಲೂಕು ಕ.ಸಾ.ಪ., ಹಾಗೂ ಹೆಬ್ಬಾಲೆ ವಲಯದ ಕ.ಸಾ.ಪ. ಘಟಕದ ವತಿಯಿಂದ ತೊರೆನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಗ್ರಾಮೀಣ ಜನಪದ ಸೊಗಡು
ಎಂಬ ವಿಷಯದ ಕುರಿತು ಏರ್ಪಡಿಸಿದ್ದ ಪಟೇಲ್ ಸಣ್ಣಯ್ಯ ವಾರ್ಷಿಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಧುನಿಕ ತಂತ್ರಜ್ಞಾನದ ಸಂದರ್ಭದಲ್ಲಿ ಇಂತಹ ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ತುಂಬುವ ಜಾನಪದ ಕಲೆ, ಸಾಹಿತ್ಯವನ್ನು ಯುವಜನಾಂಗ ಮೈಗೂಢಿಸಿಕೊಳ್ಳಬೇಕು. ಕನ್ನಡ ಜನಪದ ಸಾಹಿತ್ಯ ಗ್ರಾಮೀಣ ಜನರ ಜೀವನದ ಸಹಜ ಅನುಭವಗಳು, ಗ್ರಾಮೀಣ ಸೊಗಡು, ಕಲೆ- ಸಂಸ್ಕೃತಿ ಮತ್ತು ಮೌಲ್ಯಗಳನ್ನು ಬಿಂಬಿಸುವ ಶ್ರೀಮಂತ ನೆಲದ ಸೊಗಡಾಗಿದೆ. ಜನಪದದಲ್ಲಿ ಗ್ರಾಮೀಣ ಕೃಷಿಕರ ಶ್ರಮಿಕ ಸಂಸ್ಕೃತಿಯನ್ನು ಮತ್ತು ಸ್ತ್ರೀಯರ ಸಂಭ್ರಮದ ಆಚರಣೆಗಳನ್ನು ಪ್ರತಿನಿಧಿಸುವ ಕಲೆ ಹಾಗೂ ವಿಶಿಷ್ಟ ಹಾಡುಗಳು ಜನಪದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಆಡುಭಾಷೆಯಲ್ಲಿನ ಪದಗಳ ಜೋಡಣೆಯನ್ನಾಧರಿಸಿ ತಮ್ಮ ದೈನಂದಿನ ಬದುಕಿನ ಕಷ್ಟ, ಸುಖ, ಸಂಬAಧ, ಅನುಭವಗಳನ್ನೇ ಜನಪದರು ಪದವಾಗಿಸಿದವರು. ಅವರು ಅಕ್ಷರ ಜ್ಞಾನ ಹೊಂದಿವರಲ್ಲ. ಆದರೂ ಸಾರ್ವಕಾಲಿಕ ಪದ ಕಟ್ಟಿ ಹಾಡಿದವರು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್, ಕನ್ನಡ ಸಾಹಿತ್ಯ ಬೆಳವಣಿಗೆಗೆ ದತ್ತಿ ಉಪನ್ಯಾಸ ಕಾರ್ಯಕ್ರಮಗಳು ತುಂಬಾ ಸಹಕಾರಿಯಾಗಿವೆ. ಜಾನಪದ ಕೃಷಿ ಜೀವನವೇ ನಿಜವಾದ ಗ್ರಾಮೀಣ ಜನಪದ ಸಂಸ್ಕ್ರತಿಯ ಪ್ರತೀಕವಾಗಿದೆ. ಇಂದಿನ ಯುವಜನಾಂಗಕ್ಕೆ ಜನಪದ ಕಲೆ, ಸಂಸ್ಕ್ರತಿ, ಪರಂಪರೆಯೊAದಿಗೆ ಜನಪದ ಸಾಹಿತ್ಯದ ಮಹತ್ವ ಹಾಗೂ ಜನಪದ ಸಂಸ್ಕ್ರತಿಯ ರಕ್ಷಣೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಇಂತಹ ಜನಪದ ದತ್ತಿ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಲಾ ಮುಖ್ಯೋಪಾಧ್ಯಾಯ ಬಿ.ಆರ್. ಸತ್ಯನಾರಾಯಣ ಮಾತನಾಡಿ, ಇಂತಹ ಸಾಹಿತ್ಯ ಕಾರ್ಯಕ್ರಮಗಳು
ಗ್ರಾಮೀಣ ಶ್ರೀಮಂತ ಜನಪದ ಕಲೆ, ಸಂಸ್ಕ್ರತಿ, ಪರಂಪರೆಯನ್ನು ಪ್ರತಿಬಿಂಬಿಸುತ್ತವೆ. ವಿದ್ಯಾರ್ಥಿಗಳು ಜನಪದ ಕಲೆ, ಸಂಸ್ಕ್ರತಿಯ ಸಂರಕ್ಷಣೆಗೆ ಪಣ ತೊಡಬೇಕು ಎಂದು ಹೇಳಿದರು.
ಬಹುಮಾನ ವಿತರಿಸಿ ಮಾತನಾಡಿದ ಕುಶಾಲನಗರ ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ಎಚ್.ಬಿ. ಚಂದ್ರಪ್ಪ, ಜನಪದ ಸಂಸ್ಕ್ರತಿಯ ಪ್ರತೀಕವಾದ
ಈ ಶಾಲಾ ಪರಿಸರವು ಮಕ್ಕಳ ಕಲಿಕೆಗೆ ತುಂಬಾ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಇಂತಹ ಸಾಹಿತ್ಯ ಗೋಷ್ಠಿಗಳ ಪ್ರಯೋಜನವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಕಲಿಕೆ ಹಾಗೂ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದರು.
ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕೆ.ಎಸ್. ಕೃಷ್ಣೇಗೌಡ, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಟಿ.ಎಂ. ಮೋಹನ್ ರಾಜ್, ಕನ್ನಡ ಭಾಷಾ ಶಿಕ್ಷಕ ಟಿ.ಬಿ. ಮಂಜುನಾಥ್ ಮಾತನಾಡಿದರು.
ವಿರಾಜಪೇಟೆ ತಾಲೂಕು ಕ.ಸಾ.ಪ. ಮಾಜಿ ಅಧ್ಯಕ್ಷ ಮಧೋಶ್ ಪೂವಯ್ಯ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷ ಎಚ್.ಎಂ. ರಘು,
ಕುಶಾಲನಗರ ತಾಲೂಕು ಕಸಾಪ ಕೋಶಾಧಿಕಾರಿ ಕೆ.ವಿ. ಉಮೇಶ್, ಹೆಬ್ಬಾಲೆ ವಲಯದ ಕ.ಸಾ.ಪ. ಘಟಕದ ಅಧ್ಯಕ್ಷ ಎಂ.ಎನ್. ಮೂರ್ತಿ, ಕಾರ್ಯದರ್ಶಿ ಎಚ್.ಎನ್. ಸುಬ್ರಮಣ್ಯ, ಜಾನಪದ ಕಲಾವಿದ ಭರಮಣ್ಣ ಟಿ. ಬೇಟಗೇರಿ ಮತ್ತಿತರರು ಇದ್ದರು.