ಸೋಮವಾರಪೇಟೆ ಪಟ್ಟಣದ ರೇಂಜರ್ಸ್ ಬ್ಲಾಕ್‌ನ ಹಿರಿಯ ವಕೀಲ ಕೆ.ಎಸ್. ಪದ್ಮನಾಭ ಅವರ ಮನೆಯಲ್ಲಿ ಪೂಕಳಂ ಬಿಡಿಸಿ ಸಂಭ್ರಮಿಸಿದರು.
ಮಲಯಾಳಿ ಭಾಷಿಕರು ಓಣಂ ಹಬ್ಬವನ್ನು ಸಾಂಪ್ರದಾಯಿಕ ವೈಭವದೊಂದಿಗೆ ಶ್ರದ್ಧಾ ಭಕ್ತಿಯಿಂದ ತಾಲೂಕಿನಾದ್ಯಂತ ಆಚರಣೆ ಮಾಡಿದರು.
ಹಬ್ಬದ ಪ್ರಯುಕ್ತ ಮನೆ-ಮನೆಗಳಲ್ಲಿ ಪೂಕಳಂ (ಹೂವಿನ ರಂಗೋಲಿ) ಹಾಕಿ, ಹೊಸ ಬಟ್ಟೆ ಧರಿಸಿ, ಸಾಂಪ್ರದಾಯಿಕ ಕಾರ್ಯಕ್ರಮಗಳ ಮೂಲಕ ಹಬ್ಬ ಆಚರಿಸಲಾಯಿತು. ಸಮೃದ್ಧಿ, ಸೌಹಾರ್ದ ಮತ್ತು ಸಂತೋಷದ ಸಂಕೇತವಾದ ಓಣಂ ಎಲ್ಲರ ಜೀವನದಲ್ಲಿ ಸುಖ-ಶಾಂತಿ ತರಲಿ ಎಂದು ಜನರು ಪರಸ್ಪರ ಶುಭಾಶಯ ಕೋರಿದರು. ಸಾಂಪ್ರದಾಯಿಕ ಓಣಂ ಸದ್ಯ (ಊಟ) ಸವಿದರು.
ಪಟ್ಟಣದ ರೇಂಜರ್ಸ್ ಬ್ಲಾಕ್‌ನ ಹಿರಿಯ ವಕೀಲ ಕೆ.ಎಸ್. ಪದ್ಮನಾಭ ಅವರ ಮನೆಯಲ್ಲಿ ಹೂವಿನ ರಂಗೋಲಿ ಬಿಡಿಸಿ ಮನೆ ಮಂದಿಯೆಲ್ಲ ಹಬ್ಬವನ್ನಾಚರಿಸಿದರು.