ವಿರಾಜಪೇಟೆ ಕರ್ನಾಟಕ ಸಂಘದಿಂದ 80ನೇ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಮಾಳೇಟಿರ ಎಂ.ಬೆಲ್ಲು ಬೋಪಯ್ಯ , ಚೇನಂಡ.ಈ.ಗಿರೀಶ್ ಪೂಣಚ್ಚ, ಕಾರ್ಯದರ್ಶಿ ಮುಂಡ್ಯೋಳಡ ಕುಸುಮ ಸೋಮಣ್ಣ, ಕೋಶಾಧಿಕಾರಿ ಕೋಟೆರ.ಯು.ಗಣೇಶ್ ತಮ್ಮಯ್ಯ, ನಿರ್ದೇಶಕರಾದ ಸಿ.ಪಿ. ಕಾವೇರಪ್ಪ, ಸಿ.ಎಂ.ಸುರೇಶ್ ನಾಣಯ್ಯ, ಪುಗ್ಗೇರ ನಂದ ಇದ್ದರು.
ಇಲ್ಲಿನ ಕರ್ನಾಟಕ ಸಂಘದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ 80ನೇ ಸ್ವಾತಂತ್ರೃ ದಿನಾಚರಣೆಯಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಮಾಳೇಟಿರ ಎಂ.ಬೆಲ್ಲು ಬೋಪಯ್ಯ ಧ್ವಜಾರೋಹಣ ನೆರವೇರಿಸಿದರು.
ಸ್ವಾತಂತ್ರೃ ದಿನ ಅರ್ಥಪೂರ್ಣವಾಗಿ ಆಚರಿಸುವುದು ಮತ್ತು ಯುವ ಪೀಳಿಗೆಗೆ ದೇಶದ ಇತಿಹಾಸ, ಸಂಸ್ಕೃತಿ, ಕಲೆ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಸಾವಿರಾರು ಕ್ರಾಂತಿಕಾರಿಗಳ ತ್ಯಾಗ ಹಾಗೂ ಬಲಿದಾನದ ಫಲವಾಗಿ ಸ್ವಾತಂತ್ರೃ ಸಿಕ್ಕಿದೆ. ಈ ದಿನಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ದೇಶಭಕ್ತರನ್ನು ಸ್ಮರಿಸುವುದು ನಮ್ಮ ಧರ್ಮ ಎಂದರು.
ಕರ್ನಾಟಕ ಸಂಘದ ಉಪಾಧ್ಯಕ್ಷ ಚೇನಂಡ.ಈ.ಗಿರೀಶ್ ಪೂಣಚ್ಚ, ಕಾರ್ಯದರ್ಶಿ ಮುಂಡ್ಯೋಳಡ ಕುಸುಮ ಸೋಮಣ್ಣ, ಕೋಶಾಧಿಕಾರಿ ಕೋಟೆರ.ಯು.ಗಣೇಶ್ ತಮ್ಮಯ್ಯ, ನಿರ್ದೇಶಕರಾದ ಸಿ.ಪಿ. ಕಾವೇರಪ್ಪ, ಸಿ.ಎಂ.ಸುರೇಶ್ ನಾಣಯ್ಯ, ಪುಗ್ಗೇರ ನಂದ, ಎ.ಎಂ.ಜೋಯಪ್ಪ, ಮುಂಡಂಡ.ರಾಣು ಮಂದಣ್ಣ, ಬೊಳ್ಯಪಂಡ ಎಂ.ಸುರೇಶ್, ಬಾಚೀರ ಆರ್.ಗಣೇಶ್, ಕಂಜಿತಂಡ ಎಂ.ಮೊಣ್ಣಪ್ಪ, ಮೂಕಚಂಡ.ಬಿ. ದೇವಯ್ಯ, ಚಾರಿಮಂಡ ಯು. ಶರಣು ನಂಜಪ್ಪ, ಬಲ್ಲಡಿಚಂಡ ಜಿ. ವಿಜು ಕುಶಾಲಪ್ಪ, ಪೋರೇರ ಎಂ. ಬಿದ್ದಪ್ಪ ಇತರರು ಇದ್ದರು.