ಪಾಲಿಬೆಟ್ಟ ಭಾಗದಲ್ಲಿ ಸುರಿದ ಮಳೆ 
ಕೊಡಗು

ಅಮ್ಮತ್ತಿ, ಪಾಲಿಬೆಟ್ಟ ಭಾಗದಲ್ಲಿ ಮೊದಲ ವರ್ಷಧಾರೆ

ಪ್ರಮುಖ ಮುಖ್ಯಾಂಶಗಳು

  • ರೈತರ ಮೊಗದಲ್ಲಿ ಮಂದಹಾಸ
ಸಿದ್ದಾಪುರ: ವಿರಾಜಪೇಟೆ ತಾಲೂಕು ಅಮ್ಮತ್ತಿ ಹಾಗೂ ಪಾಲಿಬೆಟ್ಟ ಪ್ರದೇಶಗಳಲ್ಲಿ ವರ್ಷದ ಮೊದಲ ಮಳೆಯ ಸಿಂಚನದಿಂದ ವಾತಾವರಣ ತಂಪುಗೊಂಡಿದೆ.
ಬೆಳೆಗಳಿಗೆ ಹೊಸ ಚೈತನ್ಯ ಸಿಕ್ಕಿದೆ. ಮಳೆ ಸುರಿದ ಹಿನ್ನೆಲೆ ಕೃಷಿ ಚಟುವಟಿಕೆಗಳಿಗೆ ಚುರುಕು ಬಂದಿದ್ದು, ರೈತರ ಮುಖದಲ್ಲಿ ಸಂತಸ ಮೂಡಿದೆ