ಪೊನ್ನಂಪೇಟೆ ತಾಲೂಕು ಅರ್ವತೋಕ್ಲು ಗ್ರಾಮದ ಡಾಲು (46) ಅವರ ಅಂಗಾAಗಳನ್ನು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಪಡೆದುಕೊಳ್ಳಲಾಯಿತು. ಡಾ. ಲೋಕೇಶ್, ಡಾ. ಸೋಮಶೇಖರ್, ಡಾ. ನಂಜುAಡಯ್ಯ ಮತ್ತಿತರರು ಇದ್ದರು. 
ಕೊಡಗು

ಜಿಲ್ಲಾಸ್ಪತ್ರೆಯಲ್ಲಿ ಮೊದಲ ಅಂಗಾಗ ದಾನ ಪ್ರಕ್ರಿಯೆ

ಮಡಿಕೇರಿ:
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮಡಿಕೇರಿ ಬೋಧಕ ಆಸ್ಪತ್ರೆ (ಕೊಡಗು ಜಿಲ್ಲಾಸ್ಪತ್ರೆ) ಪ್ರಥಮ ಅಂಗಾAಗ ದಾನ ಪ್ರಕ್ರಿಯೆಗೆ ಶನಿವಾರ ಸಾಕ್ಷಿ ಆಯಿತು. ಜಿಲ್ಲೆಯ ಪೊನ್ನಂಪೇಟೆ ತಾಲೂಕು ಅರ್ವತೋಕ್ಲು ಗ್ರಾಮದ ಡಾಲು (46) ಎಂಬವರ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಅವರ ಅಂಗಾAಗ ದಾನಕ್ಕೆ ಕುಟುಂಬದವರು ನಿರ್ಧಾರ ತೆಗೆದುಕೊಂಡ ಹಿನ್ನೆಲೆಯಲ್ಲಿ ಡಾಲು ಅವರ ಅಂಗಾAಗಗಳನ್ನು ವೈದ್ಯಕೀಯ ತಂಡ ಪಡೆದುಕೊಂಡಿತು.
ದಾನವಾಗಿ ಕೊಡಲಾದ ವ್ಯಕ್ತಿಯ ಮೂತ್ರಪಿಂಡ, ಕಣ್ಣುಗಳು, ಹೃದಯ ಕವಾಟಗಳು ಸೇರಿದಂತೆ ವಿವಿಧ ಅಂಗಾAಗಳನ್ನು ವೈದ್ಯಕೀಯ ನಿಯಮಾನುಸಾರ ಮೈಸೂರಿನ ವೈದ್ಯಕೀಯ ತಂಡ ಸ್ವೀಕರಿಸಿತು. ಈ ಅಂಗಗಳನ್ನು ಮೈಸೂರಿನ ಜೆಎಸ್‌ಎಸ್ ಮತ್ತು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಕೊಂಡೊಯ್ದು ಅಗತ್ಯವಿರುವ ರೋಗಿಗಳಿಗೆ ಪ್ರತಿರೂಪಣೆ ಮಾಡಲಾಗುವುದು ಎಂದು ಕೊಡಗು ಮೆಡಿಕಲ್ ಕಾಲೇಜು ಡೀನ್ ಡಾ. ಲೋಕೇಶ್ ಮಾಹಿತಿ ನೀಡಿದ್ದಾರೆ.
ಅಂಗಾAಗ ದಾನ ಪ್ರಕ್ರಿಯೆ ಕೊಡಗು ಜಿಲ್ಲೆಯಲ್ಲಿ ಪ್ರಥಮವಾಗಿ ನಡೆದಿದ್ದು ಇದರಿಂದ ಅನೇಕ ರೋಗಿಗಳಿಗೆ ಜೀವದಾನ ದೊರಕಲಿದೆ ಎಂದು ಜಿಲ್ಲಾ ಸರ್ಜನ್ ಡಾ. ಸೋಮಶೇಖರ್ ತಿಳಿಸಿದ್ದಾರೆ. ನೋವಿನಲ್ಲೂ ಮಾನವೀಯವಾಗಿ ಸ್ಪಂದಿಸುವ ಮೂಲಕ ಡಾಲು ಕುಟುಂಬಸ್ಥರು ಮಾದರಿಯಾಗಿ ನಡೆದುಕೊಂಡಿದ್ದಾರೆ ಎಂದು ಸರ್ಜನ್ ಡಾ. ನಂಜುAಡಯ್ಯ ಶ್ಲಾಘಿಸಿದ್ದಾರೆ. ಜನಸಾಮಾನ್ಯರು ಅಂಗಾAಗ ದಾನದ ಮಹತ್ವದ ಬಗ್ಗೆ ಬಗ್ಗೆ ಅರಿವು ಪಡೆದುಕೊಂಡು ತಮ್ಮ ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿ ದಾನಕ್ಕೆ ಮುಂದಾಗಬೇಕು. ಇದರಿಂದ ಅನೇಕ ಜೀವಗಳನ್ನು ಉಳಿಸಬಹುದು ಎಂದು ತಿಳಿಸಿದ್ದಾರೆ.