ಗೋಣಿಕೊಪ್ಪಲು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಚೊಚ್ಚಲ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹಳೇ ವಿದ್ಯಾರ್ಥಿಗಳ ಸಂಘದ ಸದಸ್ಯರು ನೃತ್ಯ ಮಾಡಿ ಗಮನ ಸೆಳೆದರು. 
ಕೊಡಗು

ಹಳೇ ವಿದ್ಯಾರ್ಥಿಗಳ ಸಂಘದ ಚೊಚ್ಚಲ ವಾರ್ಷಿಕೋತ್ಸವ

ಗೋಣಿಕೊಪ್ಪಲು:
ಗೋಣಿಕೊಪ್ಪಲು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ ಜ್ಞಾನ ದೇಗುಲದ ಚೊಚ್ಚಲ ವಾರ್ಷಿಕೋತ್ಸವ ಸೋಮವಾರ ನಡೆಯಿತು. ಗ್ರಾಪಂ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿ ಮಕ್ಕಳಲ್ಲಿ ಮಾತನಾಡುವ ಪ್ರೇರಣೆಯನ್ನು ತುಂಬಬೇಕಾಗಿದೆ. ವಿಚಾರಗಳನ್ನು ಪ್ರಸ್ತುತಪಡಿಸಲು ಅಂಜುವ ವಿದ್ಯಾರ್ಥಿಗಳಿಗೆ ಅಪರವಾದ ಆತ್ಮಶಕ್ತಿಯನ್ನು ತುಂಬುವ ಕೆಲಸ ಶಿಕ್ಷಕರು ಮಾಡಬೇಕು. ಹಳೇ ವಿದ್ಯಾರ್ಥಿಗಳ ಸಂಘ ಶಾಲೆಯ ಸರ್ವೋತ್ತೋಮುಖ ಅಭಿವೃದ್ಧಿಗೆ ಮನೋ ಇಚ್ಛೆಯನ್ನು ವ್ಯಕ್ತಪಡಿಸಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.
ಶಾಲೆ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜಗದೀಶ್ ಜೋಡುಬೀಟಿ ಮಾತನಾಡಿ, ಶಾಲೆಗೆ ಮಕ್ಕಳ ದಾಖಲಾತಿ ಕಾರ್ಯಕ್ಕೆ ಹಳೇ ವಿದ್ಯಾರ್ಥಿಗಳ ಸಂಘ ಕೈಜೋಡಿಸಬೇಕು. ಈ ಸಮಾಜದ ಪ್ರತಿಯೊಬ್ಬರೂ ಮಕ್ಕಳ ಕಲಿಕೆಯಲ್ಲಿ ಮಾನವೀಯ ಪ್ರೇಮವನ್ನು ತಿಳಿಸಿಕೊಡಬೇಕು ಎಂದರು.
ಶಾಲೆಯ ಮುಖ್ಯೋಪಾಧ್ಯಾಯ ಹೆಚ್.ಕೆ. ಕುಮಾರ್ ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅನುಗುಣವಾಗಿ ಕಲಿಕೆಯ ಗುಣಮಟ್ಟವನ್ನು ಏರಿಸಲು ಶಿಕ್ಷಕರು ಮುಂದಾಗಿದ್ದಾರೆ ಈ ನಿಟ್ಟಿನಲ್ಲಿ ಈ ಶಾಲೆಯ ಮಕ್ಕಳ ಶೈಕ್ಷಣಿಕ ಪ್ರಗತಿಯ ಜತೆಗೆ ಅಭಿವೃದ್ಧಿÄ ನಡೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಸಂಘಟನಾತ್ಮಕ ಕಾರ್ಯ ಅಪರೂಪದ ತ್ಯಾಗವಾಗಿದೆ ಎಂದು ಹೇಳಿದರು.
ಗ್ರಾಪಂ ಸದಸ್ಯ ಬಿ.ಎನ್. ಪ್ರಕಾಶ್ ಮಾತನಾಡಿ, ಮಕ್ಕಳ ಕಲಿಕೆಗೆ ಬೇಕಾದ ಕೌಶಲ್ಯವನ್ನು ಒದಗಿಸಿಕೊಡುವ ವಾತಾವರಣ ನಿರ್ಮಿಸಬೇಕು. ಈ ನಿಟ್ಟಿನಲ್ಲಿ ಹಳೆಯ ವಿದ್ಯಾರ್ಥಿಗಳು ಸಂಘ ಶಾಲೆಯ ವಾತಾವರಣ ಬದಲಾಯಿಸುವ ಮೂಲಕ ಶೈಕ್ಷಣಿಕವಾಗಿ ಮಕ್ಕಳ ಭೌತಿಕ ಬೆಳವಣಿಗೆಗೆ ಶ್ರಮಿಸಿದ್ದಾರೆ ಎಂದರು.
ಮಂಡ್ಯದ ಪ್ರಗತಿ ಪರ ರೈತ ಸೋಮಶೇಖರ್ ಮಾತನಾಡಿ, ಮಾನವ ಕುಲಕ್ಕೆ ಉತ್ತಮ ಆರೋಗ್ಯ ಪೂರ್ಣ ಮಣ್ಣು ಮತ್ತು ಭೂಮಿಯನ್ನು ಒದಗಿಸುವುದು ಹಕ್ಕಾಗಿದೆ. ಆ ನಿಟ್ಟಿನಲ್ಲಿ ರೈತರು ಕಾರ್ಯ ಪ್ರವರ್ತನಾದಾಗ, ಆರೋಗ್ಯ ಪೂರ್ಣವಾದ ಆಹಾರ ಪದಾರ್ಥಗಳ ಒದಗಿಸಲು ಸಾಧ್ಯವಾಗುವುದು ಎಂದು ಹೇಳಿದರು.
ಹಳೇ ವಿದ್ಯಾರ್ತಿಗಳ ಸಂಘದ ಅಧ್ಯಕ್ಷ ಮಣಿಕಂಠ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ದೇವಯ್ಯ, ಹೋಟೆಲ್ ಉದ್ಯಮಿಗಳಾದ ಪ್ರಮೋದ್ ಕಾಮತ್, ಶಾಂತರಾಮ್ ಕಾಮತ್, ಗ್ರಾಪಂ ಸದಸ್ಯೆ ಗೀತಾ, ಹಳೆಯ ವಿದ್ಯಾರ್ಥಿ ಸಂಘದ ಸುರೇಶ್ ರೈ, ಬಿ.ಇ ಕಿರಣ್, ಸುಬ್ರಮಣಿ, ಸುರೇಶ್ ಇದ್ದರು. ಈ ಸಂದರ್ಭ ಶಾಲೆಯಲ್ಲಿ ದಾನಿಗಳು ಇಟ್ಟ ದತ್ತಿ ನಿಧಿಯನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ವಿಧ್ಯಾರ್ಥಿಗಳಿಂದ ವಿಜ್ಞಾನ ಪ್ರದರ್ಶನ ನಡೆಯಿತು. ಶಾಲೆಯ ವಿಧ್ಯಾರ್ಥಿಗಳಿಂದ, ಹಳೇ ವಿದ್ಯಾರ್ಥಿಗಳಿಂದ ನೃತ್ಯ, ಮ್ಯಾಜಿಕ್ ಶೋ, ಹಾಡು ವಿವಿಧ ಸಂಸ್ಕೃತಿಗಳ ಕಾರ್ಯಕ್ರಮ ಏರ್ಪಾಡಾಗಿತ್ತು. ಹಳೇ ವಿಧ್ಯಾರ್ಥಿಗಳು, ಶಾಲೆಯ ಶಿಕ್ಷಕರು, ಪೋಷಕರು, ವಿಧ್ಯಾರ್ಥಿಗಳು ಇದ್ದರು.