ಬೊಮ್ಮಂಜಿ ಕೇರಿಯ ಭದ್ರಕಾಳಿ ದೇವರ ಉತ್ಸವವು ವಿವಿಧ ದೈವ ಕೋಲಗಳೊಂದಿಗೆ ಸಂಭ್ರಮ ಶ್ರದ್ಧಾ-ಭಕ್ತಿಯಿಂದ ನೆರವೇರಿತು. 
ಕೊಡಗು

ಭದ್ರಕಾಳಿ ದೇವರ ಉತ್ಸವ

ನಾಪೋಕ್ಲು: ಸಮೀಪದ ಕೊಳಗೇರಿ ಗ್ರಾಮದ ಬೊಮ್ಮಂಜಿ ಕೇರಿಯಲ್ಲಿ ವಾರ್ಷಿಕವಾಗಿ ಆಚರಿಸಲ್ಪಡುವ ಶ್ರೀ ಭದ್ರಕಾಳಿ ದೇವರ ಉತ್ಸವವು ವಿವಿಧ ದೈವ ಕೋಲಗಳೊಂದಿಗೆ ಸಂಭ್ರಮ ಶ್ರದ್ಧಾಭಕ್ತಿಯಿಂದ ನೆರವೇರಿತು.
ಬುಧವಾರದಿಂದ ಎರಡು ದಿನಗಳಿಂದ ನಡೆದ ಉತ್ಸವದಲ್ಲಿ ಪೂದ ಮತ್ತು ಭದ್ರಕಾಳಿ ದೇವರ ತೆರೆ ನಡೆದು ಉತ್ಸವ ಸಂಪನ್ನಗೊಂಡಿತು. ದೇವರ ಉತ್ಸವದಲ್ಲಿ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಇಷ್ಟಾರ್ಥ ಹರಕೆ ಕಾಣಿಕೆಗಳನ್ನು ಒಪ್ಪಿಸಿ ದೇವರ ಪ್ರಸಾದ ಸ್ವೀಕರಿಸಿ ಪುನೀತರಾದರು. ಈ ಸಂದರ್ಭ ದೇವಾಲಯದ ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿ ಪದಾಧಿಕಾರಿಗಳು, ಊರಿನ ಪರ ಊರಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.