ಅಗ್ನಿವೀರ್ ಯೋಧನಾಗಿ ಆಯ್ಕೆಯಾಗಿ, ಪಂಜಾಬ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಗೇಶ್ವರ್ ಅವರನ್ನು ಕೊಡಗಿನ ಅಜಿಲ ಸಮುದಾಯದಿಂದ ಸನ್ಮಾನಿಸಿ ಗೌರವಿಸಲಾಯ್ತು. ಲಕ್ಷಿö್ಮÃ ರಾಜಪ್ಪ, ಬಾಬು ಅಜಿಲ, ದೇವಯ್ಯ ಇದ್ದರು. 
ಕೊಡಗು

ಅಗ್ನಿವೀರ್ ಯೋಧನಿಗೆ ಸನ್ಮಾನ

ಮಡಿಕೇರಿ:
ಅಗ್ನಿವೀರ್ ಯೋಧನಾಗಿ ಆಯ್ಕೆಯಾಗಿ, ಪಂಜಾಬ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಗೇಶ್ವರ್ ಅವರನ್ನು ಕೊಡಗಿನ ಅಜಿಲ ಸಮುದಾಯದಿಂದ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯ್ತು.
ವೀರಾಜಪೇಟೆ ಬಳಿಯ ಕೊಟ್ಟೋಳಿಯ ದೇವಯ್ಯ ಅವರ ಮನೆಯಂಗಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಗೇಶ್ವರ್ ಅವರನ್ನು ಶಾಲು, ಪೇಟ, ಹಾರ ಮತ್ತು ಫಲ ತಾಂಬೂಲದೊAದಿಗೆ ಸನ್ಮಾನಿಸಿ ಗೌರವಿಸಲಾಯ್ತು. ಅಧ್ಯಕ್ಷತೆ ವಹಿಸಿದ್ದ ಹಿರಿಯರಾದ ಬಾಬು ಅಜಿಲ ಮಾತನಾಡಿ, ಯೋಗೇಶ್ವರ್ ದೇಶಸೇವೆಗಾಗಿ ಆಯ್ಕೆಯಾಗಿರುವುದು ಸಮುದಾಯಕ್ಕೆ ಹೆಮ್ಮೆ ತಂದಿದೆ. ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ, ಅವರಲ್ಲಿರುವ ಪ್ರತಿಭೆಗಳನ್ನು ಹೊರತರಲು ಶ್ರಮಿಸಬೇಕು. ಜತೆಗೆ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಬೇಕು. ಉತ್ಸಾಹಿ ಯುವಕ ಯೋಗೇಶ್ವರ್ ಅಗ್ನಿವೀರ್ ಯೋಧನಾಗಿ ದೇಶ ಸೇವೆಯಲ್ಲಿ ತೊಡಗಿಸಿಕೊಂಡಿರುವದು, ಉಳಿದ ಯುವಕರಿಗೆ ಮಾದರಿ ಎಂದರು.
ಯೋಧ ಯೋಗೇಶ್ವರ್ ತಾಯಿ ಬಿಟ್ಟಂಗಾಲದÀ ಬಿಎಸ್‌ಎನ್‌ಎಲ್ ಉದ್ಯೋಗಿ ಲಕ್ಷಿö್ಮÃ ರಾಜಪ್ಪ ಮಾತನಾಡಿ ಎಲ್ಲ ಸನ್ಮಾನಕ್ಕಿಂತಲೂ ಸಮುದಾಯದವರಿಂದ ಸಿಕ್ಕಿದ ಗೌರವದಿಂದ ಹೃದಯ ತುಂಬಿ ಬಂದAತಾಗಿದೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಯೋಧ ಯೋಗೇಶ್ವರ್ ನನ್ನನ್ನು ಗೌರವಿಸಲು ಸಮುದಾಯ ಬಾಂಧವರು ಒಂದಾದAತೆ, ಮುಂದೆ ಕೂಡಾ ಪ್ರತಿಯೊಬ್ಬರ ನೋವು ನಲಿವುಗಳಲ್ಲಿ ಪಾಲ್ಗೊಂಡು ಒಗ್ಗಟ್ಟು ಮೆರೆಯಬೇಕೆಂದರು.
ಸಮಾರಂಭದಲ್ಲಿ ಕುಟುಂಬದ ಹಿರಿಯರಾದ ದೇವಯ್ಯ, ಉಷಾ ದೇವಯ್ಯ, ಜಾಜಿ, ಜಲಜಾ ಬಾಬು, ಪುರುಷ, ಜಯಂತಿ, ಆನಂದ್ ಮತ್ತಿತರರು ಹಾಜರಿದ್ದರು.