ಅಡಕೆ ತೋಟದೊಳಗೆ ನಿಂತಿದ್ದ ಮಳೆ ನೀರು  
ಕೊಡಗು

ಪರಿಹಾರದ ನಿರೀಕ್ಷೆ ಬೆಳೆಗಾರರಿಗೆ ನಿರಾಸೆ

ಪ್ರಮುಖ ಮುಖ್ಯಾಂಶಗಳು

  • ಮಳೆಯಿಂದ ಬೆಳೆಹಾನಿ ಪರಿಹಾರ ಮರೀಚಿಕೆ
  • ಅಧಿಕಾರಿಗಳಿಂದ ಸರಿಯಾಗಿ ನಡೆಯದ ಸರ್ವೇ
  • ಕಾಫಿ ಬೆಳೆ ನಷ್ಟಕ್ಕೆ ಪರಿಹಾರವೇ ಇಲ್ಲ
ಮಡಿಕೇರಿ:
ಈ ಮುಂಗಾರಿನಲ್ಲಿ ಮಳೆಯಿಂದ ಹಾನಿಗೆ ಒಳಗಾದ ಕಾಫಿ ಫಸಲಿಗೆ ಸರ್ಕಾರದಿಂದ ಪರಿಹಾರದ ನಿರೀಕ್ಷೆಯಲ್ಲಿ ಇದ್ದ ಬೆಳೆಗಾರರಿಗೆ ನಿರಾಸೆ ಆಗಿದೆ. ಭತ್ತ ಬೆಳೆ ಹಾನಿಗೆ ಸಂಬAಧಿಸಿದAತೆ ಕೊಡಗಿನಲ್ಲಿ ಈ ವರ್ಷ ಮಡಿಕೇರಿ ತಾಲೂಕು ಹಾಗೂ ಜೋಳ ಬೆಳೆ ಹಾನಿಗೆ ಸಂಬAಧಿಸಿದAತೆ ಕುಶಾಲನಗರ ತಾಲೂಕಿನ ಕೆಲ ರೈತರಿಗೆ ಒಂದಿಷ್ಟು ಪರಿಹಾರ ಮಾತ್ರ ಬಂದಿದೆ. ಸೆಪ್ಟೆಂಬರ್‌ನಲ್ಲಿ ನಡೆದಿದ್ದ ವಿವಿಧ ಇಲಾಖೆಗಳ ಜಂಟೀ ಸಮೀಕ್ಷೆ ಆಧಾರದಲ್ಲಿ ಸರ್ಕಾರ ಈ ಪರಿಹಾರ ವಿತರಣೆ ಮಾಡಿದೆ.
2025ರಲ್ಲಿ ಮುಂಗಾರಿನ ಅಬ್ಬರಕ್ಕೆ ಕೊಡಗು ಅಕ್ಷರಶಃ ತತ್ತರಿಸಿ ಹೋಗಿತ್ತು. ಮೇ ತಿಂಗಳಿನಿAದಲೇ ಶುರುವಾಗಿದ್ದ ವರುಣನ ಆರ್ಭಟ ಅಕ್ಟೋಬರ್ ತನಕವೂ ಮುಂದುವರಿದಿದ್ದ ಕಾರಣ ಜನಸಾಮಾನ್ಯರು ವಿಶೇಷವಾಗಿ ರೈತಾಪಿ ವರ್ಗ ತೀವ್ರ ಸಂಕಷ್ಟ ಎದುರಿಸುವಂತಾಗಿತ್ತು. ಅದರಲ್ಲೂ ಕಾಫಿ ಕಾಯಿ ಕಟ್ಟುವ ಸಂದರ್ಭದಲ್ಲೇ ಹೆಚ್ಚಿನ ಮಳೆ ಆಗುತ್ತಿದ್ದುದರಿಂದ ದೊಡ್ಡ ಪ್ರಮಾಣದಲ್ಲಿ ಕಾಫಿ ಉದುರಿ ಬೆಳೆಗಾರರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದರು. ಅಧಿಕ ಮಳೆಯಿಂದಾಗಿ ಕಾಫಿ ಗಿಡಗಳ ಕೊಳೆಯುವಿಕೆಯೂ ಆರಂಭವಾಗಿತ್ತು. ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುವ ಪ್ರದೇಶದಲ್ಲಿ ಇದರಿಂದಾಗಿ ಕಾಫಿ ಬೆಳೆಗಾರರು ನಷ್ಟ ಅನುಭವಿಸುವಂತಾಗಿದ್ದು, ಈಗ ಕಾಫಿಗೆ ಉತ್ತಮ ದರ ಇದ್ದರೂ ಫಸಲು ಇಲ್ಲದೇ ಮಳೆಗೆ ಶಾಪ ಹಾಕುವಂತಾಗಿದೆ.
ಭತ್ತ ಬೆಳೆದ ರೈತರ ಪರಿಸ್ಥಿತಿ ಇದಕ್ಕಿಂತ ಬೇರೆಯೇನೂ ಇಲ್ಲ. ಜೂನ್‌ನಲ್ಲಿ ಸ್ಪಲ್ಪ ಮಳೆ ಬಿಡುವು ತೆಗೆದುಕೊಳ್ಳುತ್ತಿದ್ದಂತೆಯೇ ಬಿತ್ತನೆ ಕಾರ್ಯ ಮಾಡಿದ್ದರಾದರೂ ನಂತರ ಮತ್ತೆ ಮಳೆ ಸುರಿದು ಬಿತ್ತಿದ್ದ ಬೀಜ ಕೊಳೆತು ಹೋಗಿತ್ತು. ಅಲ್ಪಸ್ವಲ್ಪ ಉಳಿದು ಲಭ್ಯವಾದ ಪೈರು ನಾಡಿ ಮಾಡಿದರೆ ಆಗಸ್ಟ್, ಸೆಪ್ಟೆಂಬರ್‌ನಲ್ಲಿ ನದಿ, ತೋಡುಗಳ ನೀರು ಉಕ್ಕೇರಿ ಬಹುತೇಕ ಕಡೆಗಳಲ್ಲಿ ಇದನ್ನೂ ನಾಶ ಮಾಡಿತ್ತು. ಹಾಗಾಗಿ ಡಿಸೆಂಬರ್ ಅಂತ್ಯಕ್ಕೆ ಭತ್ತದ ಕೊಯ್ಲು ಸಂದರ್ಭ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬರದೆ ನಷ್ಟ ಅನುಭವಿಸುವಂತಾಯಿತು. ವಾಣಿಜ್ಯ ಬೆಳೆ ಶುಂಠಿ ಕೃಷಿ ಮಾಡಿದ್ದವರಿಗೂ ಫಸಲು ಕೈಸೇರಲಿಲ್ಲ.
ಹೆಚ್ಚಿನ ಮಳೆಯಿಂದಾಗಿ ಅಡಕೆ ಗಿಡಗಳೂ ರೋಗ ಬಾಧೆ ಎದುರಿಸುವಂತಾಯಿತು. ಕರಿಮೆಣಸು ಬಳ್ಳಿಗಳೂ ಹಾನಿಗೆ ಒಳಗಾದವು. ಇವುಗಳ ಜಾಗದಲ್ಲಿ ಹೊಸ ಗಿಡಗಳು ಮತ್ತೆ ಫಸಲು ಕೊಡುವಂತಾಗಲು ಕನಿಷ್ಠ ಇನ್ನೂ 4 ವರ್ಷಗಳು ಬೇಕಾಗುತ್ತದೆ. ಈ ವಿಷಯಗಳನ್ನು ರೈತರು, ರೈತ ಮುಖಂಡರು ಜುಲೈನಲ್ಲೇ ಜಿಲ್ಲಾಡಳಿತ, ಸರ್ಕಾರದ ಗಮನಕ್ಕೆ ತರಲಾರಂಭಿಸಿದ್ದರು. ಅಲ್ಲಲ್ಲಿ ಪ್ರತಿಭಟನೆಗಳೂ ನಡೆದವು. ಮಳೆಹಾನಿಯ ನಷ್ಟ ಅಂದಾಜಿಸಲು ಕೊನೆಗೂ ಜಿಲ್ಲಾಧಿಕಾರಿಗಳು ಸೆಪ್ಟೆಂಬರ್‌ನಲ್ಲಿ ಅಧಿಕಾರಿಗಳ ಜಂಟಿ ತಂಡವೊAದನ್ನು ರಚನೆ ಮಾಡಿದ್ದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ, ಕಾಫಿ ಬೋರ್ಡ್ ಉಪನಿರ್ದೇಶಕ ಹಾಗೂ ಜಿಲ್ಲೆಯ 5 ತಾಲೂಕುಗಳ ತಹಸೀಲ್ದಾರ್‌ಗಳನ್ನು ಒಳಗೊಂದ ಅಧಿಕಾರಿಗಳ ತಂಡ ರಚನೆ ಮಾಡಿ ಜಿಲ್ಲಾಧಿಕಾರಿ ಸೆ.2ರಂದು ಆದೇಶ ಹೊರಡಿಸಿದ್ದರು. ಜಿಲ್ಲಾಧಿಕಾರಿ ನಿರ್ದೇಶನದಂತೆ ಸಮೀಕ್ಷೆ ನಡೆಸಿದ ಅಧಿಕಾರಿಗಳ ತಂಡ ಸಲ್ಲಿಸಿದ ವರದಿ ಪ್ರಕಾರ ತೋಟಗಾರಿಕೆ ಬೆಳೆಗಳಿಗೆ ಜಿಲ್ಲೆಯಲ್ಲಿ ಶೇ.33 ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಆಗಲಿಲ್ಲ. ಹಾಗಾಗಿ ಪರಿಹಾರದ ಪ್ರಮಾಣವನ್ನೂ ಶಿಫಾರಸ್ಸು ಮಾಡಿರಲಿಲ್ಲ.
ಕೃಷಿ ಬೆಳೆಗಳ ಪೈಕಿ ಮಡಿಕೇರಿ ತಾಲೂಕಿನಲ್ಲಿ 4.08 ಹೆಕ್ಟೇರ್‌ಗಳಷ್ಟು ಪ್ರದೇಶದಲ್ಲಿ ಭತ್ತದ ನಷ್ಟವಾಗಿದ್ದು, 34,680 ರೂ.ಗಳ ನಷ್ಟ ಪರಿಹಾರದ ಶಿಫಾರಸ್ಸು ಮಾಡಲಾಗಿದೆ. ಆದರೆ ಉಳಿದ ತಾಲೂಕುಗಳಲ್ಲಿ ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಭತ್ತದ ನಷ್ಟ ಆಗಿಲ್ಲ ಎಂದು ಈ ತಂಡ ಸರ್ಕಾರಕ್ಕೆ ವರದಿ ನೀಡಿದೆ. ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ 0.8 ಹೆಕ್ಟೇರ್ ಪ್ರದೇಶದಲ್ಲಿ ಜೋಳದ ಬೆಳೆ ನಾಶವಾಗಿದ್ದು, 6,800 ರೂ.ಗಳ ಬೆಳೆ ಪರಿಹಾರಕ್ಕೆ ಶಿಫಾರಸ್ಸು ಮಾಡಲಾಗಿದೆ. ಆದರೆ ಕಾಫಿ ತೋಟಕ್ಕೆ ಮಳೆಯಿಂದ ಎನ್‌ಡಿಆರ್‌ಎಫ್ ಮಾರ್ಗಸೂಚಿ ಅಡಿಯಲ್ಲಿ ಹಾನಿಯಾಗಿರುವ ಬಗ್ಗೆ ಕಾಫಿ ಮಂಡಳಿ ಯಾವುದೇ ವರದಿ ಸಲ್ಲಿಸಿಲ್ಲ.
ಕಾಫಿಗೆ ಉತ್ತಮ ಬೆಲೆ ಇದೆ ಎನ್ನುವ ಆಕರ್ಷಕ ವಿಷಯದ ಮುಂದೆ ಕಾಫಿ ಬೆಳೆಗಾರರ ಸಮಸ್ಯೆ ತೆರೆಮರೆಗೆ ಸರಿಯುತ್ತಿದೆ. ಸದ್ಯಕ್ಕೆ ಕಾಫಿಗೆ ಉತ್ತಮ ದರವೇನೋ ಸಿಗುತ್ತಿದೆ ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಇಲ್ಲದಿರುವುದು ಬೆಳೆಗಾರರು ಕೈ ಕೈ ಹಿಸುಕಿಕೊಳ್ಳುವಂತೆ ಮಾಡಿದೆ. ಕಾಫಿ ತೋಟದ ಅಭಿವೃದ್ಧಿ, ವ್ಯವಸಾಯದಲ್ಲಿ ಯಾಂತ್ರೀಕರಣ, ಆಧುನೀಕರಣ ಮತ್ತಿತರ ಕಾರಣಗಳಿಂದ ಬ್ಯಾಂಕ್‌ಗಳಲ್ಲಿ ಸಾಲ ಪಡೆದುಕೊಂಡಿರುವ ಬೆಳೆಗಾರರಿಗೆ ಮರುಪಾವತಿ ಸಾಧ್ಯವಾಗುತ್ತಿಲ್ಲ. ಇದೆಲ್ಲದರ ಮಧ್ಯೆ ಪ್ರತಿ ವರ್ಷವೂ ಮಳೆಗಾಲದಲ್ಲಿ ಕಾಫಿ ಫಸಲು ನಷ್ಟವಾಗವುದರ ಜತೆಗೆ ತೋಟಕ್ಕೂ ಹಾನಿ ಆಗುತ್ತಿದೆ. ಈ ಹಿಂದೆ ಮಳೆಹಾನಿಗೆ ಸರ್ಕಾರದಿಂದ ಬೆಳೆಗಾರರಿಗೆ ಉತ್ತಮ ಪರಿಹಾರ ಸಿಗುತ್ತಿತ್ತು. ಆದರೆ ಕಳೆದ 3 ವರ್ಷಗಳಿಂದ ಚಿಕ್ಕಾಸೂ ಪರಿಹಾರ ಬಂದಿಲ್ಲ. ಈ ವರ್ಷವಂತೂ ಕಾಫಿ ತೋಟಕ್ಕೆ ಮಳೆಯಿಂದ ಎನ್‌ಡಿಆರ್‌ಎಫ್ ಮಾರ್ಗಸೂಚಿ ಅಡಿಯಲ್ಲಿ ಹಾನಿಯಾಗಿರುವ ಬಗ್ಗೆ ಕಾಫಿ ಮಂಡಳಿಯೇ ಸರ್ಕಾರಕ್ಕೆ ವರದಿ ಕೊಟ್ಟಿಲ್ಲ. ಹಾಗಾಗಿ ಕಾಫಿ ಬೆಳೆಗಾರರಿಗೆ ಮಳೆಹಾನಿ ಪರಿಹಾರ ಈ ಬಾರಿ ಮರೀಚಿಕೆಯಾಗಿಯೇ ಉಳಿದಿದೆ. ಈ ಬಗ್ಗೆ ವಿಧಾನಪರಿಷತ್ ಸದಸ್ಯ ಎಂ.ಪಿ. ಸುಜಾಕುಶಾಲಪ್ಪ ಸದನದಲ್ಲೂ ವಿಷಯ ಪ್ರಸ್ತಾಪ ಮಾಡಿದ್ದರು.
"

ಕೃಷಿ ಇಲಾಖೆ ಜಂಟಿ ನಿರ್ದೇಶಕ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ, ಕಾಫಿ ಬೋರ್ಡ್ ಉಪನಿರ್ದೇಶಕ ಹಾಗೂ ಜಿಲ್ಲೆಯ 5 ತಾಲೂಕುಗಳ ತಹಸೀಲ್ದಾರ್‌ಗಳನ್ನು ಒಳಗೊಂಡ ಅಧಿಕಾರಿಗಳ ತಂಡ ಕೊಡಗಿನಲ್ಲಿ ಮಳೆಯಿಂದ ಆದ ಬೆಳೆಹಾನಿ ಬಗ್ಗೆ ಜಿಲ್ಲಾಧಿಕಾರಿಗೆ ಜಂಟಿ ಸಮೀಕ್ಷಾ ವರದಿ ಸಲ್ಲಿಸಿದ್ದಾರೆ. ಈ ವರದಿ ವಿರೋಧಿಸಿ ಆಕ್ಷೇಪಣೆಗಳು ಸ್ವೀಕೃತ ಆಗಿಲ್ಲ ಎಂದು ಕೊಡಗು ಜಿಲ್ಲಾಧಿಕಾರಿ ವರದಿ ನೀಡಿದ್ದಾರೆ. ಜಂಟಿ ಸಮೀಕ್ಷಾ ವರದಿ ಅನ್ವಯ ಡಿಬಿಟಿ ಮೂಲಕ ಫಲಾನುಭವಿಗಳಿಗೆ ಜಿಲ್ಲಾಧಿಕಾರಿ ಒಟ್ಟು 62,446 ರೂ. ಪರಿಹಾರ ಹಣ ಪಾವತಿಸಿದ್ದಾರೆ.

"

ರಾಜ್ಯ ಸರ್ಕಾರದ ನಿರ್ದೇಶನದ ಪ್ರಕಾರ ಜಿಲ್ಲಾಧಿಕಾರಿ ರಚಿಸಿದ್ದ ತಂಡ ಮಳೆಯಿಂದ ಆದ ಬೆಳೆಹಾನಿ ಬಗ್ಗೆ ಸರಿಯಾದ ಸಮೀಕ್ಷೆಯನ್ನೇ ಮಾಡಿಲ್ಲ. ಅವರು ಸಮೀಕ್ಷೆ ಆರಂಭಿಸುವಾಗಲೇ ತಡವಾಗಿತ್ತು. ಹಾಗಾಗಿ ಅಧಿಕಾರಿಗಳಿಗೆ ನಷ್ಟದ ಸ್ಪಷ್ಟ ಚಿತ್ರಣ ಸಿಕ್ಕಿರಲಿಲ್ಲ. ಕಾಫಿ ಮಂಡಳಿಯೂ ಸಮರ್ಪಕವಾಗಿ ವರದಿ ಕೊಟ್ಟಿಲ್ಲ. ನಮ್ಮ ಪಕ್ಷದ ವತಿಯಿಂದ ಸಮೀಕ್ಷೆ ನಡೆಸಿದ್ದ ವೇಳೆ ಕೊಡಗಿನಲ್ಲಿ ಕಾಫಿಗೆ ಭಾರಿ ಹಾನಿ ಆಗಿರುವುದು ಕಂಡು ಬಂದಿತ್ತು. ಕೃಷಿ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಹಾನಿ ಆಗಿದೆ. ಈ ವರದಿಯನ್ನು ನಾವು ರಾಜ್ಯಮಟ್ಟಕ್ಕೆ ಕಳುಹಿಸಿದ್ದೆವು.