ಸೌಹಾರ್ದ ಸಹಕಾರಿ ದಿನಾಚರಣೆಯ ಸಭಾ ಕಾರ್ಯಕ್ರಮವನ್ನು ಕೇಕಡ.ಎ.ದೇವಯ್ಯ ಉದ್ಘಾಟಿಸಿದರು. ಮಂಡುವಂಡ ಮುತ್ತಪ್ಪ, ಕುಡುವಂಡ ಬಿ.ಉತ್ತಪ್ಪ, ಪಿ.ಸಿ.ನೀಮಾ, ಕವಿತ್ ಬೊಳ್ಳಪ್ಪ ಇತರರು ಇದ್ದರು. 
ಕೊಡಗು

ಸಹಕಾರ ಸಂಘಗಳು ಬೆಳೆಯಲು ಎಲ್ಲರ ಸೇವೆ ಮುಖ್ಯ

ಪ್ರಮುಖ ಮುಖ್ಯಾಂಶಗಳು

  • ಸಹಕಾರ ಸಂಘಗಳು ಬೆಳೆಯಲು ಎಲ್ಲರ ಸೇವೆ ಮುಖ್ಯ
  • ಸೌಹಾರ್ದ ಸಹಕಾರಿ ದಿನಾಚರಣೆಯಲ್ಲಿ ಕೇಕಡ.ಎ.ದೇವಯ್ಯ
ಮಡಿಕೇರಿ: ಸಹಕಾರ ಸಂಘಗಳು ಬೆಳೆಯಲು ಸಂಘದ ಎಲ್ಲರ ಸೇವೆ ಮುಖ್ಯ ಪಾತ್ರವಹಿಸಲಿದೆ ಎಂದು ಮಡಿಕೇರಿ ಕೊಡವ ಸಮಾಜದ ಉಪಾಧ್ಯಕ್ಷರು ಹಾಗೂ ಮಡಿಕೇರಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಕಾರ್ಯಾಧ್ಯಕ್ಷ ಕೇಕಡ.ಎ.ದೇವಯ್ಯ ಹೇಳಿದರು.
ಕೊಡವ ಸಮಾಜ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ನಿಯಮಿತ ಬೆಂಗಳೂರು ಹಾಗೂ ಕೊಡಗು ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತ ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಕೊಡಗು ಸೌಹಾರ್ದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮಂಡುವಂಡ ಮುತ್ತಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸೌಹಾರ್ದ ಸಹಕಾರಿ ದಿನಾಚರಣೆಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಹಕಾರಿ ಸದಸ್ಯರುಗಳು ಸದಸ್ಯತ್ವವನ್ನು ಪಡೆಯುವುದು, ಠೇವಣಿ ಇಡುವುದು, ಸಾಲ ಪಡೆಯುವುದರ ಮೂಲಕ ಸಂಘದೊಂದಿಗೆ ನಿರಂತ ವ್ಯವಹರಿಸಿ ಸಂಘದ ಏಳಿಗೆಗೆ ಸಹಕರಿಸಬೇಕು. ಸಂಘ ಬೆಳೆಯಲು ಸಂಘದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಸೇವೆ ಮುಖ್ಯ ಪಾತ್ರವಹಿಸಲಿದೆ ಎಂದ ಅವರು, ಜಮ್ಮಾಜಾಗ ಸಮಸ್ಯೆ ಬಗ್ಗೆ ಕೊಡಗಿನ ಎರಡು ಶಾಸಕರು ಶ್ರಮಿಸುತ್ತಿದ್ದಾರೆಂದರು.
ಕೊಡಗು ಸೌಹಾರ್ದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮಂಡುವಂಡ ಮುತ್ತಪ್ಪ ಅವರು ಅಧ್ಯಕ್ಷತೆ ವಹಿಸಿದ ಮಾತನಾಡಿ, ೨೦೦೫ನೇ ಇಸವಿಯಲ್ಲಿ ಮಾಜಿ ಕಾನೂನು ಸಚಿವ ಹಾಗೂ ಹಿರಿಯ ಸಹಕಾರಿಗಳಾದ ಎಂ.ಸಿ.ನಾಣಯ್ಯ ಅವರ ಸಲಹೆ ಮೇರೆ ಮಡಿಕೇರಿ ಕೊಡವ ಸಮಾಜದ ಕಟ್ಟಡದಲ್ಲಿ ಪ್ರಾರಂಭಿಸಲಾಗಿ, ಇದರ ಆಗಿನ ಅಧ್ಯಕ್ಷ ಆಡಳಿತ ಮಂಡಳಿ ಹಾಗೂ ಮುಖ್ಯ ಪ್ರವರ್ತಕರುಗಳ ಸಹಯೋಗದಲ್ಲಿ ಸ್ಥಾಪನೆಯಾಗಿತ್ತು. ಪ್ರಸ್ತುತ ಒಂದು ಕೋಟಿ ೧೦ ಲಕ್ಷ ಪಾಲು ಹಣ ಹೊಂದಿದ್ದು, ೮ ಕೋಟಿ ದುಡಿಯು ಬಂಡವಾಳ ಹೊಂದಿದೆ. ಈ ಸಂಸ್ಥೆಯಲ್ಲಿ ಯಾವುದೇ ರೀತಿಯ ಬಂಡವಾಳ ಶಾಹಿ ಹಾಗೂ ಸರ್ಕಾರದ ಹಸ್ತಕ್ಷೇಪ ಇಲ್ಲದಿರುವುದನ್ನು ಸಭೆಗೆ ತಿಳಿಸಿದ ಅವರು, ಸಹಕಾರಿಯ ಮೂಲಕ ಠೇವಣಿಗಳ ಸಂಗ್ರಹಣೆ ಹಾಗೂ ಇತರೆ ವ್ಯವಹಾರಗಳ ಮೂಲಕ ಸಂಘವೇ ಸಂಘ ಅಭಿವೃದ್ಧಿಯಾಗಿದೆಂದರು.
ಕೊಡವ ಸಮಾಜದ ನಿರ್ದೇಶಕಿ ಹಾಗೂ ಜನರಲ್ ತಿಮ್ಮಯ್ಯ ಶಾಲೆಯ ಕರೆಸ್ಪಾಂಡೆಂಟ್ ಕನ್ನಂಡ ಕವಿತ್ ಬೊಳ್ಳಪ್ಪ ಮಾತನಾಡಿ, ಮಹಿಳೆಯರ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಈ ಸಂಘ ಸಹಕಾರಿಯಾಗಿದೆ. ಮುಂದೆ ಯುವ ಪೀಳೆಯವನ್ನು ಸಂಘದ ಸದಸ್ಯವನ್ನು ಪಡೆಯುವುದರ ಮೂಲಕ ಪ್ರಯೋಜನ ಪಡೆಯಬೇಕೆಂದರು.
ನಂತರ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣದ ಬಗ್ಗೆ ಚರ್ಚಿಸಲಾಯಿತು. ಇದಕ್ಕೂ ಮುನ್ನ ಕೊಡಗು ಸೌಹಾರ್ದ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಚೆರುಮಂದಂಡ.ಜಿ.ಪೊನ್ನಪ್ಪ ಸಹಕಾರ ಧ್ವಜಾರೋಹಣ ಮಾಡಿ ಧ್ವಜವಂದನೆ ಸಲ್ಲಿಸಲಾಯಿತು. ಬೊಪ್ಪಂಡ ಸರಳ ಕರುಂಬಯ್ಯ ಅವರು ಸಹಕಾರ ಗೀತೆಯನ್ನು ಹಾಡಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಕುಡುವಂಡ ಬಿ.ಉತ್ತಪ್ಪ, ನಿರ್ದೇಶಕರುಗಳಾದ ಚೋವಂಡ ಡಿ.ಕಾಳಪ್ಪ, ಎಂ.ಜಿ.ಉಪಾ ಅಂಜಪರವಂಡ, ಕೊಂಗಂಡ ಎ.ತಿಮ್ಮಯ್ಯ, ನಂದೇಟಿರ ಪಿ.ರಾಜಮಾದಪ್ಪ, ಕೇಕಡ.ಎಂ.ಸುಗುಣ, ಮೇದುರ ಪಿ.ಕಾವೇರಪ್ಪ, ಚೆರುಮಂದಂಡ.ಪೊನ್ನಪ್ಪ, ಕಾಂಡೆರ ಯು.ಕುಟ್ಟಪ್ಪ, ಎಂ.ಜಿ.ಉಷಾ ಅಂಜಪರವಂಡ, ಮುಖ್ಯಕಾರ್ಯನಿರ್ವಹಾಧಿಕಾರಿ ಪಿ.ಸಿ.ನೀಮಾ, ಸಿಬಂದಿಗಳಾದ ಸಿ.ಪಿ.ಗೌತಮ್, ತಸ್ವಿನ್.ಎಂ.ಪಿ, ಮಡಿಕೇರಿ ಕೊಡವ ಸಮಾಜ, ಜನರಲ್ ತಿಮ್ಮಯ್ಯ ಶಾಲೆ, ಕೊಡವ ವಿದ್ಯಾನಿಧಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.