ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಸುಂಟಿಕೊಪ್ಪ ವಲಯದ ಗದ್ದೆಹಳ್ಳ ಒಕ್ಕೂಟದ ವತಿಯಿಂದ ಗದ್ದೆಹಳ್ಳ ಸರ್ಕಾರಿ ಶಾಲೆಯಲ್ಲಿ ಗಿಡಗಳನ್ನು ನೆಡಲಾಯಿತು.
ಸುಂಟಿಕೊಪ್ಪ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಮಡಿಕೇರಿ, ಸುಂಟಿಕೊಪ್ಪ ವಲಯದ ಗದ್ದೆಹಳ್ಳ ಒಕ್ಕೂಟದ ವತಿಯಿಂದ ಸೋಮವಾರ ಗದ್ದೆಹಳ್ಳ ಸರ್ಕಾರಿ ಶಾಲೆಯಲ್ಲಿ ಪರಿಸರ ಜಾಗೃತಿ ಹಾಗೂ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸುಂಟಿಕೊಪ್ಪ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪರಿಸರವನ್ನು ಉಳಿಸಿದರೆ ಮಾತ್ರ ಮುಂದಿನ ಜನಾಂಗ ಉಳಿವು ಸಾಧ್ಯ. ಆದ್ದದರಿಂದ ಪರಿಸರವನ್ನು ಉಳಿಸಿ, ಬೆಳೆಸುವ ಬಗ್ಗೆ ಜಾಗೃತರಾಬೇಕು. ಗಿಡ ನೆಡುವುದು ಒಂದು ದಿನಕ್ಕೆ ಸಿಮೀತವಾಗಬಾರದು, ಅದರ ರಕ್ಷಣೆಯನ್ನು ಮಾಡುವುದರ ಬಗ್ಗೆ ಮಕ್ಕಳಿಗೆ ತಿಳಿ ಹೇಳಿದರು.
ಶಿಕ್ಷಕ ಮಂಜುನಾಥ ಮಾತನಾಡಿ, ಮಕ್ಕಳಿಗೆ ಪರಿಸರದ ಉಳಿವಿಗೆ ಮಕ್ಕಳು ವಹಿಸಬೇಕಾದ ಜವಾಬ್ದಾರಿಗಳ ಬಗ್ಗೆ ತಿಳಿಸಿದರು. ಶಾಲಾ ಆವರಣದಲ್ಲಿ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ನೆಡಲಾಯಿತು. ಸುಂಟಿಕೊಪ್ಪ ಗ್ರಾಪಂ ಮಾಜಿ ಉಪಾಧ್ಯಕ್ಷ ಸುಕುಮಾರ್, ಮಾಜಿ ಸದಸ್ಯರಾದ ಗೀತಾ, ಪಾರ್ವತಿ ಸೋಮಯ್ಯ, ಎಸ್‌ಡಿಎಂಸಿ ಅಧ್ಯಕ್ಷೆ ಬಲ್ಕಿಸ್, ತಾಲೂಕು ಕೃಷಿ ಮೇಲ್ವಿಚಾರಕ ಅಶ್ವಥ್, ವಲಯ ಮೇಲ್ವಿಚಾರಕ ಸಂತೋಷ್, ಮುಖ್ಯ ಶಿಕ್ಷಕಿ ಹೇಮಾಕುಮಾರಿ, ಶಿಕ್ಷಕಿ ಅನಿತಾ, ಸೇವಾ ಪ್ರತಿನಿಧಿ ಜ್ಯೋತಿ ಲಕ್ಷ್ಮೀ ಹಾಗೂ ಸ್ವಸಹಾಯ ಸಂಘದ ಸದಸ್ಯರು ಪಾಲ್ಗೊಂಡಿದ್ದರು.