ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮತ್ತು ಮಡಿಕೇರಿ ಬ್ರಹ್ಮಕುಮಾರಿ ಶಾಖೆ ಸಹಯೋಗದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು. ಬಿ.ಕೆ. ಧನಲಕ್ಷಿö್ಮÃ, ಮೇಜರ್ ಪ್ರೊ.ಬಿ. ರಾಘವ, ಸುರೇಶ್ ಕಾರಂತ್, ರೇವತಿ ಮತ್ತಿತರರು ಇದ್ದರು 
ಕೊಡಗು

ಎಫ್‌ಎಂಸಿ ಕಾಲೇಜಿನಲ್ಲಿ ಪರಿಸರ ದಿನಾಚರಣೆ

ಮಡಿಕೇರಿ:
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮತ್ತು ಮಡಿಕೇರಿ ಬ್ರಹ್ಮಕುಮಾರಿ ಶಾಖೆ ಸಹಯೋಗದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಬುಧವಾರ ವಿಶ್ವ ಪರಿಸರ ದಿನ ಆಚರಿಸಲಾಯಿತು. ಕಾಲೇಜು ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ಮಡಿಕೇರಿ ಶಾಖೆ ಸಂಚಾಲಕರಾದ ರಾಜಯೋಗಿನಿ ಬಿ.ಕೆ. ಧನಲಕ್ಷಿö್ಮÃ ಮಾತನಾಡಿ, ಭೂಮಿಯು ಸಮಸ್ತ ಜೀವಿಗಳಿಗೂ ಜೀವನಾಧಾರ, ಪೋಷಕ ಹಾಗೂ ಎಲ್ಲವನ್ನೂ ಸಹಿಸಿಕೊಂಡು ಕ್ಷಮಾಪಣೆ ಮತ್ತು ಕೊಡುವ ಗುಣಕ್ಕೆ ಭೂಮಿ ಸಂಕೇತವಾಗಿದೆ. ಭೂಮಿ ನಮಗೆ ನೀತಿಯ ಪಾಠವನ್ನು, ಜೀವನದ ಮೌಲ್ಯಗಳನ್ನು ಮತ್ತು ಪ್ರಕೃತಿಯ ಸೌಂದರ್ಯವನ್ನು ನೀಡುತ್ತದೆ. ಆ ನಿಟ್ಟಿನಲ್ಲಿ ನಾವುಗಳು ವಿಶ್ವ ಪರಿಸರ ದಿನವನ್ನು ಒಂದು ದಿನಕ್ಕೆ ಸೀಮಿತ ಗೊಳಿಸದೇ ಸಹಸ್ರಾರು ಗಿಡಗಳನ್ನು ನೆಟ್ಟು ಪರಿಸರಕ್ಕೆ ಕೊಡಗೆ ನೀಡಬೇಕು. ಅದೇ ರೀತಿ ಪ್ರಕೃತಿಯ ಐದು ಗುಣವನ್ನು ಜೀವನದಲ್ಲಿ ಅಳವಡಿಸಿಕೊಂಡು ನಮ್ಮೊಂದಿಗೆ ಇತರರನ್ನು ಸುಖಿಯಾಗಿರುವಂತೆ ನೋಡಿಕೊಳ್ಳಬೇಕು ಎಂದರು.
ಕಾಲೇಜಿನ ಆವರಣದಲ್ಲಿ ಹಣ್ಣಿನ ಗಿಡ ನೆಟ್ಟು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕಾಲೇಜು ಪ್ರಾಂಶುಪಾಲ ಮೇಜರ್ ಪ್ರೊ.ಬಿ. ರಾಘವ ಮಾತನಾಡಿ, ಪರಿಸರ ಜ್ಞಾನ ನಮ್ಮ ಸುತ್ತಲಿನ ಪ್ರಕೃತಿ, ಜೀವಿಗಳು ಮತ್ತು ಅವುಗಳ ನಡುವಿನ ಸಂಬAಧವನ್ನು ಅರ್ಥಮಾಡಿಸಲು ಸಹಕಾರಿಯಾಗಿದೆ. ಇದು ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಲು, ಮಾಲಿನ್ಯ ತಗ್ಗಿಸಲು ಮತ್ತು ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು ಪ್ರತಿಯೊಬ್ಬರಿಗೂ ಅತ್ಯಗತ್ಯವಾದ ಜ್ಞಾನವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಪರಿಸರ ಕಾಳಜಿ ಹೊಂದಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಸಿಬ್ಬಂದಿ ಸುರೇಶ್ ಕಾರಂತ್, ಮಡಿಕೇರಿ ಎಸ್‌ಬಿಐ ಶಾಖೆಯ ನಿವೃತ್ತ ಅಧಿಕಾರಿ ರೇವತಿ, ಕಾಲೇಜಿನ ಕಾಲೇಜಿನ ಪ್ರಾಧ್ಯಪಕರುಗಳಾದ ಪ್ರೊ. ಎಂ.ಪಿ. ಕೃಷ್ಣ, ಪ್ರೊ.ಕೆ.ಪಿ. ನಾಗರಾಜು, ಪ್ರೊ. ಇ. ತಿಪ್ಪೆಸ್ವಾಮಿ, ಗ್ರಂಥಪಾಲಕಿ ಡಾ. ವಿಜಯಲತಾ, ಬೋಧಕ, ಬೋಧಕೇತರರು, ವಿದ್ಯಾರ್ಥಿಗಳು ಹಾಗೂ ಎನ್‌ಸಿಸಿ ಕೆಡೆಟ್‌ಗಳು ಇದ್ದರು.