ಪರಿಸರ ದಿನದ ಹಿನ್ನೆಲೆಯಲ್ಲಿ ಕಳೆದ ವರ್ಷ ನೆಟ್ಟು ಬೆಳೆಸಿದ ಗಿಡದ ಮುಂದೆ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಪ್ರಾಂಶುಪಾಲರು, ಎನ್ ಎಸ್ ಎಸ್ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಸಂಭ್ರಮಿಸಿದರು. ಡಾ. ಎಂ.ಬಿ. ಕಾವೇರಿಯಪ್ಪ, ಎಂ.ಎ. ಕುಶಾಲಪ್ಪ, ಕೆ.ಎಸ್. ಪೂಜಾ, ಟಿ. ಕೆ. ಲತಾ ಇದ್ದರು. 
ಕೊಡಗು

ಕಾವೇರಿ ಕಾಲೇಜಿನಲ್ಲಿ ಪರಿಸರ ದಿನಾಚರಣೆ

ಗೋಣಿಕೊಪ್ಪಲು:
ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ಕಾಲೇಜು ಆವರಣದಲ್ಲಿ ಶುಕ್ರವಾರ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಎನ್‌ಎಸ್‌ಎಸ್ ಸ್ವಯಂಸೇವಕರು ವಿವಿಧ ಜಾತಿಯ ಗಿಡಗಳನ್ನು ನೆಟ್ಟು, ನೀರೆರೆದರು. ವಿಶೇಷವಾಗಿ ಕಳೆದ ವರ್ಷ ತಾವೇ ನೆಟ್ಟು ಆರೈಕೆ ಮಾಡಿ ಬೆಳೆಸಿದ ಗಿಡಗಳ ಮುಂದೆ ನಿಂತು ವಿದ್ಯಾರ್ಥಿಗಳು ಫೋಟೋ ತೆಗೆಸಿಕೊಳ್ಳುವ ಮೂಲಕ ನೆಟ್ಟ ಗಿಡವನ್ನು ಫೋಷಿಸಿ ಬೆಳೆಸಿ ಎಂಬ ಸಂದೇಶ ಸಾರಿದರು.
ಈ ಸಂದರ್ಭ ಮಾತನಾಡಿದ ಕಾಲೇಜು ಪ್ರಾಂಶುಪಾಲ ಡಾ. ಎಂ.ಬಿ. ಕಾವೇರಿಯಪ್ಪ, ಪರಿಸರ ಸಂರಕ್ಷಣೆ ಕೇವಲ ಒಂದು ದಿನದ ಕಾರ್ಯಕ್ರಮವಲ್ಲ. ನೆಟ್ಟ ಪ್ರತಿಯೊಂದು ಗಿಡವೂ ಮರವಾಗಿ ಬೆಳೆಯುವವರೆಗೆ ನಮ್ಮ ಜವಾಬ್ದಾರಿ ಇದೆ. ವಿದ್ಯಾರ್ಥಿಗಳು ಪರಿಸರದ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಅಧಿಕಾರಿಗಳಾದ ಎಂ.ಎ. ಕುಶಾಲಪ್ಪ, ಕೆ.ಎಸ್. ಪೂಜಾ, ಕಚೇರಿ ಅಧೀಕ್ಷಕಿ ಟಿ. ಕೆ. ಲತಾ ಹಾಗೂ ಎನ್ ಎಸ್ ಎಸ್ ಸ್ವಯಂ ಸೇವಕರು ಭಾಗವಹಿಸಿದ್ದರು.