ಲಿಟಲ್‌ವುಡ್ ಮಾಂಟೆಸ್ಸರಿ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಸಂಭ್ರಮದಲ್ಲಿ ಡಿಎಂಪಿ ಶಾಲೆ ಸಂಸ್ಥಾಪಕ ಎಂ.ಎಂ. ದೇವಯ್ಯ,ಲಿಟಲ್‌ವುಡ್ ಮಾಂಟೆಸ್ಸರಿ ಶಾಲೆ ಸಂಸ್ಥಾಪಕಿ ಸುಧಾ ಉತ್ತಪ್ಪ, ಲಯನ್ಸ್ ಕ್ಲಬ್ ಅಧ್ಯಕ್ಷೆ ಪಟ್ಟಡ ವಿದ್ಯಾ ದೇವಯ್ಯ ಇತರರು ಇದ್ದರು. 
ಕೊಡಗು

ಬಾಲ್ಯದಿಂದಲೇ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿ

ಮಾದೇಶ್ ತಿ.ನರಸೀಪುರ

ಪ್ರಮುಖ ಮುಖ್ಯಾಂಶಗಳು

  • ಡಿಎಂಪಿ ಶಾಲೆ ಸಂಸ್ಥಾಪಕ ಎಂ.ಎಂ.ದೇವಯ್ಯ ಸಲಹೆ
  • ಲಿಟಲ್‌ವುಡ್ ಮಾಂಟೆಸ್ಸರಿ ಶಾಲೆ ವಾರ್ಷಿಕೋತ್ಸವ
ಸಿದ್ದಾಪುರ: ಬಾಲ್ಯದಿಂದಲೇ ಶಿಕ್ಷಣದ ಮೂಲಕ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿಕೊಂಡರೆ ಉತ್ತಮ ಭವಿಷ್ಯ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಡಿಎಂಪಿ ಶಾಲೆ ಸಂಸ್ಥಾಪಕ ಎಂ.ಎಂ.ದೇವಯ್ಯ ಹೇಳಿದರು.
ಸಿದ್ದಾಪುರದ ಕರಡಿಗೋಡು ರಸ್ತೆಯ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಬಿಟ್ಟಂಗಾಲ ಹಾಗೂ ಸಿದ್ದಾಪುರದ ಲಿಟಲ್‌ವುಡ್ ಮಾಂಟೆಸ್ಸರಿ ಶಾಲೆಯ ಜಂಟಿ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಾಲಕರು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡುವುದರಿಂದ ಸಮಾಜದಲ್ಲಿ ತಮ್ಮದೇ ಆದ ಗುರುತನ್ನು ಸಾಧಿಸಬಹುದು ಎಂದು ತಿಳಿಸಿದರು.
ಲಿಟಲ್‌ವುಡ್ ಮಾಂಟೆಸ್ಸರಿ ಶಾಲೆ ಸಂಸ್ಥಾಪಕಿ ಸುಧಾ ಉತ್ತಪ್ಪ ಮಾತನಾಡಿ, ಮಕ್ಕಳ ಪ್ರತಿಭೆಗೆ ಅನುಗುಣವಾಗಿ ವಿಶೇಷ ಕಲಿಕಾ ವಿಧಾನಗಳನ್ನು ಅನುಸರಿಸಲಾಗುತ್ತಿದೆ. ಶಾಲೆಯ ಪಠ್ಯಕ್ರಮಕ್ಕೆ ಮಾತ್ರ ಸೀಮಿತವಾಗದೆ, ಮಕ್ಕಳನ್ನು ನೇರ ಅನುಭವಗಳ ಮೂಲಕ ಕಲಿಕೆಗೆ ಪ್ರೇರೇಪಿಸಲಾಗುತ್ತಿದೆ. ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸಲಾಗಿದ್ದು, ಬಾಲ್ಯದಲ್ಲಿಯೇ ಪ್ರತಿಭೆ ಅರಳಲು ಪಾಲಕರು ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಮನವಿ ಮಾಡಿದರು.
ವಾರ್ಷಿಕೋತ್ಸವದಲ್ಲಿ ಶಾಲಾ ಮಕ್ಕಳಿಂದ ನೃತ್ಯ, ಭಾಷಣ, ಯೋಗ, ಹಾಡು, ಸಂಗೀತ ಸೇರಿದಂತೆ ಆರೋಗ್ಯ, ಪರಿಸರ, ನೈರ್ಮಲ್ಯ ಜಾಗೃತಿ ಮತ್ತು ಪ್ರಾಣಿ-ಪಕ್ಷಿಗಳ ಸಂರಕ್ಷಣೆಯ ಕುರಿತು ವಿವಿಧ ಪ್ರದರ್ಶನ ಏರ್ಪಡಿಸಲಾಗಿತ್ತು. ಬಳಿಕ ವಿದ್ಯಾರ್ಥಿಗಳಿಗೆ ಗ್ರಾೃಜುಯೇಷನ್ ಪ್ರಮಾಣಪತ್ರ ವಿತರಣೆ ಮಾಡಲಾಯಿತು. ಕೊಡಗಿನ ಹೆಸರಾಂತ ವಾಲಗ ತಂಡದಿಂದ ವಿಶೇಷ ಸಂಗೀತ ಕಾರ್ಯಕ್ರಮ ನಡೆಯಿತು. ವಾಲಗದ ಮದ್ದಾಳೆಯ ಸದ್ದಿಗೆ ಮಕ್ಕಳು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷೆ ಪಟ್ಟಡ ವಿದ್ಯಾ ದೇವಯ್ಯ, ಪ್ರಮುಖರಾದ ಪಲ್ಲವಿ, ಡಾ.ಸೀಮಾ ಪಾಲೇಕಂಡ, ಶಿಕ್ಷಕರಾದ ಪಿ.ಸೌಮ್ಯಾ ದೇವಯ್ಯ, ಜ್ಯೋತ್ಸ್ನಾ ಅಯ್ಯಪ್ಪ, ಚಿನ್ನು ಥಾಮಸ್, ದೀಪಿಕಾ ಸುಬ್ಬಯ್ಯ, ಮಲ್ಲಿಕಾ ಅಪ್ಪಯ್ಯ ಇತರರು ಇದ್ದರು.