ಹುದುಗೂರು ಬಳಿಯ ಕಾಳಿದೇವನ ಹೊಸೂರು ಗ್ರಾಮದ ಗದ್ದೆಯೊಂದರಲ್ಲಿ ಕಾಡಾನೆ ದಾಳಿಯಿಂದ ನಾಶವಾದ ಭತ್ತದ ಫಸಲು
ಕುಶಾಲನಗರ: ಕುಶಾಲನಗರ ಸಮೀಪದ ಹುದುಗೂರು ಬಳಿಯ ಕಾಳಿದೇವನ ಹೊಸೂರು ಗ್ರಾಮದಲ್ಲಿ ಗುರುವಾರ ರಾತ್ರಿ ಕಾಡಾನೆಗಳು ನಡೆಸಿದ ದಾಳಿಯಿಂದಾಗಿ ಬೆಳೆದು ನಿಂತಿದ್ದ ಭತ್ತದ ಫಸಲು ನಾಶವಾಗಿದೆ.
ಗ್ರಾಮದ ರೈತರಾದ ರಾಣಿ, ನಾರಾಯಣ, ದಿನೇಶ, ಸ್ವಾಮಿ ಮೊದಲಾದ ರೈತರ
ಗದ್ದೆಗೆ ಕಾಡಾನೆಗಳು ಲಗ್ಗೆ ಇಟ್ಟು ಫಸಲನ್ನು ತಿಂದು, ತುಳಿದು ನಾಶಪಡಿಸಿವೆ. ಸಹಕಾರ ಸಂಘಗಳಿಂದ ಸಾಲ ಮಾಡಿ ಬೆಳೆದ ಬೆಳೆಯೆ ಕೈಗೆಟುಕದಾಗ ಸಾಲ ತೀರಿಸುವ ಬಗೆ ಹೇಗೆ ಎಂದು ಕೃಷಿಕರು ಚಿಂತಿತರಾಗಿದ್ದಾರೆ. ಕಳೆದ ವರ್ಷವೂ ಇದೇ ರೀತಿಯ ಘಟನೆ ಸಂಭವಿಸಿತ್ತು. ಅದಕ್ಕೆ ಇದುವರೆಗೂ ಪರಿಹಾರಕ್ಕಾಗಿ ಕಚೇರಿಗೆ ಅಲೆದರೂ ಫಲ ದೊರಕಿಲ್ಲ ಎಂದು ನೊಂದ ಕೃಷಿಕರು ಮೋವು ತೋಡಿಕೊಂಡಿದ್ದಾರೆ. ಈ ಕುರಿತು ಶಾಸಕರು ಗಮನ ಹರಿಸಬೇಕೆಂದು ಮನವಿ ಮಾಡಿದ್ದಾರೆ.