ಕೂಡಿಗೆಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣಾ ಪ್ರಕ್ರಿಯೆ ನಡೆಯಿತು. 
ಕೊಡಗು

ಕೂಡಿಗೆ ಮುರಾರ್ಜಿ ಶಾಲೆಯಲ್ಲಿ ಚುನಾವಣೆ

ಕುಶಾಲನಗರ:
ಕೂಡಿಗೆಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶುಕ್ರವಾರ ನಡೆದ ಶಾಲಾ ಸಂಸತ್ ಚುನಾವಣಾ ಪ್ರಕ್ರಿಯೆ ಗಮನ ಸೆಳೆಯಿತು.
ಚುನಾವಣೆಯ ಪ್ರಕ್ರಿಯೆಯಂತೆ ಮೊದಲಿಗೆ ಅಧಿಸೂಚನೆ ಹೊರಡಿಸಲಾಯಿತು. ನಂತರ ಎಲ್ಲಾ ವಿದ್ಯಾರ್ಥಿಗಳು ತಮ್ಮ ನಾಮಪತ್ರದೊಂದಿಗೆ ಹೆಸರನ್ನು ನೋಂದಾಯಿಸಿಕೊAಡರು. ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆದು ಅಭ್ಯರ್ಥಿಗಳಿಗೆಲ್ಲ ಚಿಹ್ನೆ ನೀಡಲಾಗಿತ್ತು. ಎಲ್ಲ ಅಭ್ಯರ್ಥಿಗಳು ತಮ್ಮ ಪರವಾಗಿ ಚುನಾವಣಾ ಪ್ರಚಾರ ಮಾಡಿದರು. ಚುನಾವಣೆ ಸಂದರ್ಭ ವಿದ್ಯಾರ್ಥಿಗಳು ಪೊಲೀಸ್ ಸಮವಸ್ತ್ರ ಧರಿಸಿ ರಕ್ಷಣಾ ಸಿಬ್ಬಂದಿಯAತೆ ಕರ್ತವ್ಯ ನಿರ್ವಹಿಸಿದರು. ಮುಖ್ಯ ಚುನಾವಣಾ ಅಧಿಕಾರಿಯಾಗಿ ಶಾಲೆಯ ಪ್ರಾಂಶುಪಾಲೆ ಕೆ.ಆರ್. ಭಾರತಿ ವಿದ್ಯಾರ್ಥಿಗಳಿಗೆ ಚುನಾವಣಾ ಪ್ರಕ್ರಿಯೆ ಹೇಗೆ ನಡೆಯುವುದು, ಮತದಾನದ ಮೌಲ್ಯ ಹಾಗೂ ಮಕ್ಕಳು ತಮಗೆ 18 ವರ್ಷ ಕಳೆದ ಬಳಿಕ ಮತದಾನದ ಹಕ್ಕು ದೊರಕಿದಾಗ ಉತ್ತಮ ಅಭ್ಯರ್ಥಿಯನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದರ ಮಾಹಿತಿ ನೀಡಿದರು.
ಶಾಲಾ ಕಾಲೇಜು ಹಂತದಿAದಲೇ ವಿದ್ಯಾರ್ಥಿಗಳಿಗೆ ಮತದಾನದ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಬೋಧಿಸಬೇಕು. ದೂರದರ್ಶನ, ಕನ್ನಡ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕ ಪ್ರಚಾರ ನಡೆಸಬೇಕು. ಉತ್ತಮ ರಾಜಕೀಯವು ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಪ್ರತಿಬಿಂಬವಾಗಿದೆ. ನಾವು ನಮ್ಮ ಪ್ರಜಾಪ್ರಭುತ್ವದ ನಾಯಕನನ್ನು ಯಾವುದೇ ಆಸೆ ಆಮಿಷಗಳಿಗೆ ಗುರಿಯಾಗದೆ ಆಯ್ಕೆ ಮಾಡಿಕೊಳ್ಳಬೇಕು. ರಾಜಕೀಯ ಎಂದರೆ ತಮ್ಮ ಪ್ರಜೆಗಳಿಗೆ ಉತ್ತಮ ಸಮಾಜವನ್ನು ಮತ್ತು ಸರ್ವತೋಮುಖ ಅಭಿವೃದ್ಧಿಯನ್ನು ನೀಡುವಂತೆ ಇರಬೇಕು. ಭ್ರಷ್ಟಾಚಾರಿಗಳ ಕೈಯಲ್ಲಿ ನಮ್ಮ ರಾಜಕೀಯ ಸಿಲುಕದೆ ಭ್ರಾತೃತ್ವವನ್ನು ಮೆರೆಯುವ ಉತ್ತಮ ನಾಯಕರ ಕೈಗೆ ದೊರೆಯುವಂತೆ ಆಗಬೇಕು. ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಈ ಸಂವಿಧಾನಕ್ಕೆ ನಾವೆಲ್ಲರೂ ಅರ್ಥವನ್ನು ಮತ್ತು ಗೌರವವನ್ನು ನೀಡಬೇಕು ಎಂದರು.
ನಂತರ ಎಲ್ಲ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತು ಇವಿಎಂ ಯಂತ್ರದ ಮೂಲಕ ಮತದಾನ ಮಾಡಿ ತಮ್ಮ ಕೈಗಳಿಗೆ ನೀಲಿ ಶಾಹಿಯನ್ನು ಹಚ್ಚಿಸಿಕೊಂಡರು. ಅಭ್ಯರ್ಥಿಗಳ ಸಮ್ಮುಖದಲ್ಲಿಯೇ ಮತ ಎಣಿಕೆ ನೆರವೇರಿಸಲಾಯಿತು, ಶಾಲಾ ನಾಯಕನಾಗಿ ಎಚ್.ಜಿ. ಧನುಷ್, ನಾಯಕಿಯಾಗಿ ಭೂಮಿಕ ಅನಿಲ್, ಉಪಮುಖ್ಯಮಂತ್ರಿ ಎಚ್.ಪಿ. ತೇಜಸ್ವಿನಿ ಆಯ್ಕೆಯಾದರು.
ಚುನಾವಣಾ ಅಧಿಕಾರಿಯಾಗಿ ಶಿಕ್ಷಕ ನಾಗೇಂದ್ರ, ಚುನಾವಣಾ ಸಹಾಯಕರಾಗಿ ಎಚ್.ಬಿ. ದಿನೇಶಾಚಾರಿ, ಶಾಲಾ ಶಿಕ್ಷಕರಾದ ಕೆ.ವಿ. ಅಮೃತ, ಸಿ. ಪಿ. ಮಂಜು, ಹರಿಣಾಕ್ಷಿ, ಎಂ.ಆರ್. ಮೀನಾ, ಕವಿತಾ, ದೊಡ್ಡಯ್ಯ, ಅಶ್ವಥಿ, ಅಂಕಿತ ಹಾಗೂ ಸಹಾಯಕಿ ಪಾರ್ವತಿ ಇದ್ದರು.