ಸೋಮವಾರಪೇಟೆ: ತಾಲೂಕಿನ ಕುಂಬಾರಗಡಿಗೆ ಗ್ರಾಮದಲ್ಲಿ ವೃದ್ಧನೊಬ್ಬ ಪತ್ನಿಗೆ ಗುಂಡು ಹಾರಿಸಿ ಕೊಂದು, ನಂತರ ತಾನೂ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕುಂಬಾರಗಡಿಗೆ ಗ್ರಾಮದ ಕೃಷಿಕರಾದ ಕೆ.ಟಿ.ಸುಬ್ಬಯ್ಯ(77), ಬೋಜಮ್ಮ(74) ಮೃತಪಟ್ಟವರು. ಒಂಟಿ ನಳಿಕೆ ಕೋವಿಯಿಂದ ಗುಂಡು ಹಾರಿಸಿದ್ದು, ಪತ್ನಿಗೆ ತಲೆಯ ಭಾಗಕ್ಕೆ ಗುಂಡು ತಗುಲಿದೆ. ಪತಿ ಕೋಣೆಯಲ್ಲಿ ಎದೆ ಭಾಗಕ್ಕೆ ಗುಂಡು ಹಾರಿಸಿಕೊಂಡಿದ್ದಾರೆ.
ಸೋಮವಾರ ತಡರಾತ್ರಿ ಕುಟುಂಬಸ್ಥರು ನೆಂಟರ ಮನೆಗೆ ಹೋಗಿದ್ದ ಸಂದರ್ಭ ಘಟನೆ ಸಂಭವಿಸಿದೆ. ಮುಂಗೋಪಿಯಾಗಿದ್ದ ಸುಬ್ಬಯ್ಯ, ತನ್ನ ಪತ್ನಿಯೊಂದಿಗೆ ಆಗಾಗ್ಗೆ ಜಗಳವಾಡಿ ಹೊಡೆಯುತ್ತಿದ್ದ. ಜಗಳವೇರ್ಪಟ್ಟು ಕೊಲೆ ಮಾಡಿರಬಹುದು ಎಂದು ಮಗ ದೊರೆಮಣಿ ಸೋಮವಾರಪೇಟೆ ರಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಎಸ್.ಪಿ.ಬಿಂದುಮಣಿ, ಇನ್‌ಸ್ಪೆಕ್ಟರ್ ಮುದ್ದು ಮಹಾದೇವ ಭೇಟಿ ನೀಡಿ ಪರಿಶೀಲಿಸಿ ಕ್ರಮಕೈಗೊಂಡಿದ್ದಾರೆ.