ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಿರಣ್.ಜಿ.ಗೌರಯ್ಯ, ಡಾ.ಎಚ್.ಎಂ.ರಘುಕೋಟಿ, ಎಚ್.ಎಂ.ಮೀನಾಕ್ಷಿ, ಬಿ.ಎಸ್.ಸದಾಶಿವ ಶೆಟ್ಟಿ, ಟಿ.ಜಿ.ಪ್ರೇಮ್ ಕುಮಾರ್ ಇದ್ದರು. 
ಕೊಡಗು

ಮಹಾನ್ ಮಾನವತಾವಾದಿ ಅಂಬೇಡ್ಕರ್

ಲಲಾಟಾಕ್ಷ ಎಸ್
ಕುಶಾಲನಗರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನವನ್ನು ಪ್ರಬಲವಾಗಿ ಜಾರಿಗೆ ತರುವ ಮೂಲಕ ಸಮಾನತೆ, ಸಹೋದರತ್ವ ಮತ್ತು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದ ಮಹಾನ್ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಎಂದು ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ.ಜಮೀರ್ ಅಹ್ಮದ್ ಅಭಿಪ್ರಾಯಪಟ್ಟರು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಹಯೋಗದೊಂದಿಗೆ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ ರಾಮ್ ಜಯಂತಿ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಸಾಮಾಜಿಕ ಕ್ರಾಂತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರು ಮಹಾನ್ ಮಾನವತಾವಾದಿ. ಸಂವಿಧಾನವನ್ನು ಜಾರಿಗೆ ತರುವ ಮೂಲಕ ಸಮಾನತೆ, ಸಹೋದರತ್ವವನ್ನು ಸಾರಿದರು ಎಂದರು.
ಸಾಹಿತಿ ಭಾರದ್ವಾಜ್ ಕೆ.ಆನಂದತೀರ್ಥ ಮಾತನಾಡಿ, ಡಾ.ಬಾಬು ಜಗಜೀವನ ರಾಮ್ ಅವರು ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿ ಜಾತ್ಯತೀತ, ಸಾಮಾಜಿಕ ಸಾಮರಸ್ಯ, ಕೃಷಿ ಅರ್ಥಶಾಸ್ತ್ರ, ಆಹಾರ ಉತ್ಪಾದನೆ ರಕ್ಷಣೆ ನಿರ್ವಹಣೆ ಕಾರ್ಮಿಕ ಕಲ್ಯಾಣ ಮಹಿಳಾ ಸಬಲೀಕರಣಕ್ಕೆ ಅವರ ಕೊಡುಗೆ ಅಪಾರ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅರುಣಿ ಅಶೋಕ್, ಮೋಹನ್ ಕುಮಾರ್, ಗಣೇಶ ತೊರೆನೂರು, ಮೀನಾಕ್ಷಿ ಬೆಂಗಳೂರು, ಜಯಲಕ್ಷ್ಮೀ ಹೆಬ್ಬಾಲೆ, ಜಯಶ್ರೀ ಕರವೆ, ಮುಸ್ತಫ, ಗಣೇಶ, ಸದಾಶಿವ ಶೆಟ್ಟಿ, ಜಮೀರ ಅಹಮ್ಮದ್, ರವಿ.ಆರ್.ಶಾಸ್ತ್ರಿ ಮತ್ತು ದಿಶಾ ನಿಡ್ತಮಲೆ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ರೆನಿತ್, ಗೌತಮಿ, ಸಂಸ್ಕೃತಿ, ದಿಶಾ, ರಂಜಿತಾ, ಭೂಮಿಕಾ, ಚಿರಾಗ್, ವೆನ್ಯ, ಪ್ರಯಾಗ್ ಮತ್ತು ತನ್ಮಯಿ ಅವರಿಗೆ ಶಿಕ್ಷಣ ಜ್ಞಾನಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತಹಸೀಲ್ದಾರ್ ಕಿರಣ್.ಜಿ.ಗೌರಯ್ಯ, ಡಾ.ಎಚ್.ಎಂ.ರಘುಕೋಟಿ, ಎಚ್.ಎಂ.ಮೀನಾಕ್ಷಿ, ಬಿ.ಎಸ್.ಸದಾಶಿವ ಶೆಟ್ಟಿ, ಟಿ.ಜಿ.ಪ್ರೇಮ್ ಕುಮಾರ್, ಕುರಿ ಮತ್ತು ಉಣ್ಣೆ ಸಹಕಾರ ಸಂಘದ ಅಧ್ಯಕ್ಷ ಡಿ.ಆರ್.ಪ್ರಭಾಕರ್, ಗಣೇಶ್, ಮುಸ್ತಫ ಉಪಸ್ಥಿತರಿದ್ದರು.