ಶನಿವಾರಸಂತೆ: ಬೆಂಗಳೂರಿನ ಕಾಶಿ ಶ್ರೀ ಚಾರಿಟಬಲ್ ಟ್ರಸ್ಟ್ ಆಫ್ ಕರ್ನಾಟಕ ಸಂಸ್ಥೆಯಿಂದ
ಕೊಡಗು ಮೂಲದ ಡಾ.ವಿಶಾಲ್ ಶೆಟ್ಟಿ ಅವರಿಗೆ ಸ್ಟಾರ್ ಎಕ್ಸಲೆನ್ಸ್ ಅವಾರ್ಡ್ ಪ್ರಶಸ್ತಿ ನೀಡಿ ಗೌರವಿಸಿದೆ.
ಡಾ.ವಿಶಾಲ್ ಶೆಟ್ಟಿ ಮೈಂಡ್ ಕೋಚ್ ಥೆರಪಿಸ್ಟ್, ಹೀಲರ್ ಹಾಗೂ ತರಬೇತುದಾರರಾಗಿ ಸಾರ್ವಜನಿಕರಿಗೆ ಮಾನಸಿಕ ಆರೋಗ್ಯ, ಆತ್ಮ ವಿಶ್ವಾಸ, ಒತ್ತಡ ನಿರ್ವಹಣೆ, ವ್ಯಕ್ತಿತ್ವ ಮತ್ತು ಜೀವನ ಕೌಶಲ ಕುರಿತು ತರಬೇತಿ ಹಾಗೂ ಮಾರ್ಗದರ್ಶನ ನೀಡುತ್ತಿದ್ದಾರೆ. ಅವರ ಕಾರ್ಯ ಸಾಧನೆಯನ್ನು ಗುರುತಿಸಿರುವ ಕಾಶಿ ಶ್ರೀ ಚಾರಿಟಬಲ್ ಸಂಸ್ಥೆಯು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ಟಾರ್ ಎಕ್ಸಲೆನ್ಸ್ ಪ್ರಶಸ್ತಿ ನೀಡಿ ಗೌರವಿಸಿದೆ.
ಡಾ.ವಿಶಾಲ್ ಶೆಟ್ಟಿ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೋಬಳಿಗೆ ಸೇರಿದ ಬೆಸೂರಿನ ಕೊಣೆಗನಹಳ್ಳಿ ಗ್ರಾಮದ ಗುರುಸ್ವಾಮಿ ಶೆಟ್ಟಿ ಮತ್ತು ಲಲಿತಮ್ಮ ದಂಪತಿ ಪುತ್ರ.