ಡಾ. ನವಿತಾ ಸೋಮಯ್ಯ 
ಕೊಡಗು

ಡಾ. ನವಿತಾ ಸೋಮಯ್ಯಗೆ ಪ್ರತಿಷ್ಠಿತ ಗೌರವ

ಮಡಿಕೇರಿ
ಅತ್ಯುನ್ನತ ಶೈಕ್ಷಣಿಕ ಸಾಧನೆಗಾಗಿ ಅಂತರರಾಷ್ಟಿçÃಯ ಖ್ಯಾತಿಯ ವೈದ್ಯೆ ಹಾಗೂ ವಿಜ್ಞಾನಿ ಕೊಡಗು ಜಿಲ್ಲೆಯ ಡಾ. ನವಿತಾ ಸೋಮಯ್ಯ ಅವರಿಗೆ ಯುನೈಟೆಡ್ ಕಿಂಗ್‌ಡಮ್‌ನ ಶೈಕ್ಷಣಿಕ ಮತ್ತು ಸಂಶೋಧನಾ ವಲಯದ ಅತ್ಯುನ್ನತ ರಾಷ್ಟಿçÃಯ ಗೌರವ ಕ್ವೀನ್ ಎಲಿಜಬೆತ್ ಪ್ರಶಸ್ತಿ ದೊರೆತಿದೆ.
ಈ ಪ್ರಶಸ್ತಿ ಜಾಗತಿಕ ಕ್ಯಾನ್ಸರ್ ಆರೈಕೆಯಲ್ಲಿ ಇನ್ಸಿಟ್ಯೂಟ್ ಆಫ್ ಕ್ಯಾನ್ಸರ್ ರಿಸರ್ಚ್ (ಐಸಿಆರ್) ನ ಪರಿವರ್ತಕ ಪಾತ್ರ ಗುರುತಿಸುತ್ತದೆ. ಬದುಕುಳಿಯುವಿಕೆಯನ್ನು ಸುಧಾರಿಸುವುದು, ಆರೋಗ್ಯ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ಅಂತರರಾಷ್ಟಿçÃಯ ಚಿಕಿತ್ಸಾ ಮಾನದಂಡಗಳನ್ನು ರೂಪಿಸುವ ಅಂಶವನ್ನು ಒಳಗೊಂಡಿದೆ. ಸ್ತನ ಕ್ಯಾನ್ಸರ್ ಸಂಶೋಧನೆಯನ್ನು ಪ್ರತಿನಿಧಿಸುವ ಭಾಗವಾಗಿ ಡಾ.ನವಿತಾ ಸೋಮಯ್ಯ ಈ ಗೌರವವನ್ನು ಸ್ವೀಕರಿಸುತ್ತಿದ್ದಾರೆ. ಪ್ರಶಸ್ತಿಗಾಗಿ ಆಯ್ಕೆಯಾದ ಐಸಿಆರ್‌ನ ಎಂಟು ವಿಜ್ಞಾನಿಗಳಲ್ಲಿ ಇವರೂ ಒಬ್ಬರು. ಮಂಗಳವಾರ (ಫೆ.24) ಬೆಳಗ್ಗೆ 11.30 ಗಂಟೆಗೆ ಸೈಂಟ್ ಜೇಮ್ಸ್ ಪ್ಯಾಲೇಸ್‌ನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಪುತ್ರಿ ಡಾ. ನವಿತಾ ಸೋಮಯ್ಯ, ಕನ್ನಂಡ ಪೊನ್ನಪ್ಪ ಸೋಮಯ್ಯ ಮತ್ತು ಡಾ.ಕನ್ನಂಡ ನಿರ್ಮಲಾ ಸೋಮಯ್ಯ ದಂಪತಿಯ ಪುತ್ರಿ