ಸೋಮವಾರಪೇಟೆ ತಾಲೂಕಿನ ಬಡುಬನಹಳ್ಳಿ ನಿವಾಸಿ ಪರ್ವರೋಹಿ ಲತಾ ಅವರನ್ನು ಅಕ್ಕನಬಳಗದ ವತಿಯಿಂದ ಸನ್ಮಾನಿಸಲಾಯಿತು. ಶಿವಲಿಂಗಸ್ವಾಮೀಜಿ, ಮಹೇಶ್, ಗೀತಾರಾಜು, ಮಾಯಾ ಇದ್ದರು.
ಸೋಮವಾರಪೇಟೆ: ತಾಲೂಕಿನ ಬಡುಬನಹಳ್ಳಿ ನಿವಾಸಿ, ಪರ್ವತಾರೋಹಿ ಡಾ. ಬಿ.ಎಂ.ಲತಾ ಅವರನ್ನು ಅಕ್ಕನ ಬಳಗದ ವತಿಯಿಂದ ಸನ್ಮಾನಿಸಲಾಯಿತು.
ತಾಲೂಕಿನ ಆಲೂರುಸಿದ್ದಾಪುರ ಸಮೀಪದ ತಪೋಕ್ಷೇತ್ರ ಮನೆಹಳ್ಳಿ ಮಠದಲ್ಲಿ ಬುಧವಾರ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಅಕ್ಕನಬಳಗದ ಪದಾಧಿಕಾರಿಗಳು ಸನ್ಮಾನಿಸಿದರು.
ಬೆಂಗಳೂರಿನಲ್ಲಿ ಸ್ತ್ರೀರೋಗ ತಜ್ಞರಾಗಿರುವ ಲತಾ ಅವರು 57 ವರ್ಷದ ಪ್ರಾಯದಲ್ಲೂ ಇತ್ತೀಚೆಗೆ ಎವರೆಸ್ಟ್ ಬೆಸ್ ಕ್ಯಾಂಪ್ ಮೂಲಕ ಪರ್ವತವೇರಿ 18,514ಅಡಿ ಎತ್ತರದ ಕಾಲಾಪತ್ತರ್ ಎಂಬ ಸ್ಥಳ ಕ್ರಮಿಸಿ ಸಾಹಸ ಮೆರೆದಿದ್ದಾರೆ. ವೃತ್ತಿಯಲ್ಲಿ ವೈದ್ಯರಾದರೂ ಮ್ಯಾರಥಾನ್ ಸೇರಿದಂತೆ ಇನ್ನಿತರ ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ಇವರು, ಈಗಾಗಲೇ 86 ದೇಶಗಳಿಗೆ ಭೇಟಿ ನೀಡಿ ಅಲ್ಲಿನ ಜನಜೀವನ ಹಾಗೂ ಸಂಸ್ಕೃತಿ ಬಗ್ಗೆ ಅಧ್ಯಯನ ನಡೆಸಿದ್ದಾರೆ ಎಂದು ಅಕ್ಕನ ಬಳಗದ ಪದಾಧಿಕಾರಿಗಳು ಹೇಳಿದರು.
ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ರಾಷ್ಟ್ರೀಯ ಕಾರ್ಯದರ್ಶಿ ಎಸ್.ಮಹೇಶ್, ಅಕ್ಕನ ಬಳಗದ ಅಧ್ಯಕ್ಷೆ ಗೀತಾರಾಜು, ಕಾರ್ಯದರ್ಶಿ ಮಾಯಾಗಿರೀಶ್, ಉಪಾಧ್ಯಕ್ಷೆ ಸರಿತಾ ಮಲ್ಲಿಕಾರ್ಜುನ, ಸದಸ್ಯರಾದ ಅನುಪಮಾ, ಜಗದಾಂಬ, ತಪೋಕ್ಷೇತ್ರ ಸೇವಾ ಟ್ರಸ್ಟ್ ನ ಸದಸ್ಯರಾದ ಪ್ರಕಾಶ್, ನಾರಾಯಣ, ಮಂಜುನಾಥ ಇತರರು ಇದ್ದರು.