ಆರೋಪಿ ಹೆಚ್.ಕೆ. ಚಂದು 
ಕೊಡಗು

ಅನೈತಿಕ ಸಂಬoಧದ ಸಿಟ್ಟಿನಿಂದ ಜೋಡಿ ಕೊಲೆ

ಸುನಿಲ್ ಪೊನ್ನೇಟಿ
ಮಡಿಕೇರಿ:
ಭಾಗಮಂಡಲ ಪೊಲೀಸ್ ಠಾಣೆ ವ್ಯಾಪ್ತಿಯ ಚೆಟ್ಟಿಮಾನಿ ಸಮೀಪ ಕುಂದಚೇರಿಯಲ್ಲಿ ಬುಧವಾರ ನಡೆದ ಜೋಡಿ ಕೊಲೆಗೆ ಅನೈತಿಕ ಸಂಬAಧಕ್ಕೆ ಇದ್ದ ವಿರೋಧವೇ ಕಾರಣ ಎನ್ನುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.
ಕುಂದಚೇರಿ ಗ್ರಾಮದ ನಿವಾಸಿಗಳಾದ ಯಶೋಧ (45) ಮತ್ತು ಕುಂಞÂರಾಮ (55) ಎಂಬವರನ್ನು ಹೆಚ್.ಕೆ. ಚಂದು (65) ಎಂಬಾತ ಕೊಲೆ ಮಾಡಿರುವ ಬಗ್ಗೆ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಚಂದುವನ್ನು ಪೊಲೀಸರು ಬಂಧಿಸಿ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ ಎಂದು ಎಸ್.ಪಿ. ಆರ್.ಎನ್. ಬಿಂದುಮಣಿ ಮಾಹಿತಿ ನೀಡಿದ್ದಾರೆ. ಕೊಲೆಗೀಡಾದ ಯಶೋಧ ಮತ್ತು ಕುಂಞÂರಾಮ ಮಧ್ಯೆ ಕಳೆದ 2 ವರ್ಷಗಳಿಂದ ಅನೈತಿಕ ಸಂಬAಧ ಇರುವ ಬಗ್ಗೆ ಯಶೋಧಳ ಅಣ್ಣ ಹೆಚ್.ಕೆ. ಚಂದುಗೆ ಇಷ್ಟವಿಲ್ಲದೆ ಜಗಳವಾಡಿ ಅವರಿಬ್ಬರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ಕಂಡುಬAದಿದೆ ಎಂದು ಮಾಹಿತಿ ನೀಡಿದ್ದಾರೆ.
ಕೃತ್ಯ ನಡೆದ ಸ್ಥಳಕ್ಕೆ ಎಸ್‌ಪಿ ಆರ್.ಎನ್. ಬಿಂದು ಮಣಿ, ಮಡಿಕೇರಿ ಉಪವಿಭಾಗ ಡಿಎಸ್‌ಪಿ ಪಿ.ಎ. ಸೂರಜ್, ಮಡಿಕೇರಿ ಗ್ರಾಮಾಂತರ ವೃತ್ತ ಸಿಪಿಐ ಪಿ. ಅನೂಪ್ ಮಾದಪ್ಪ, ನಾಪೋಕ್ಲು ಪಿಎಸ್‌ಐ ಪಿ.ಜಿ. ರಾಘವೇಂದ್ರ, ಅಪರಾಧ ಪತ್ತೆ ಸಿಬ್ಬಂದಿ, ಅಪರಾಧ ಕೃತ್ಯ ಪರಿಶೀಲನಾ ತಜ್ಞರ ತಂಡ ಭೇಟಿ ನೀಡಿ ಅಪರಾಧ ಕೃತ್ಯಕ್ಕೆ ಸಂಬAಧಿಸಿದ ಮಾಹಿತಿ ಹಾಗೂ ಸಾಕ್ಷಾಧಾರಗಳನ್ನು ಕಲೆ ಹಾಕಿದ್ದಾರೆ.
ಈ ಮಧ್ಯೆ ಮೃತದೇಹಗಳನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ತರಲಾಗಿದ್ದು, ಮರಣೋತ್ತರ ಪರೀಕ್ಷೆ ನಂತರ ಗುರುವಾರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.