ಸೋಮವಾರಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪಿಎಂಶ್ರೀ ಸರ್ಕಾರಿ ಶಾಲೆಗೆ ಜಿಜೆಸಿ ಸ್ನೇಹಿತರ ಬಳಗದಿಂದ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಿಕೊಡಲಾಯಿತು. ಬೆಳ್ಳಿಯಪ್ಪ, ದಿನೇಶ್, ಯಶೋದಾ ಇದ್ದರು. 
ಕೊಡಗು

ಸರ್ಕಾರಿ ಶಾಲೆಗೆ ಸಿ.ಸಿ. ಕ್ಯಾಮರಾಗಳ ಕೊಡುಗೆ

ಸೋಮವಾರಪೇಟೆ: ಇಲ್ಲಿನ ಪಿಎಂಶ್ರೀ ಸರ್ಕಾರಿ ಶಾಲೆಗೆ 1991-93ರ ಸಾಲಿನ ಹಳೇ ವಿದ್ಯಾರ್ಥಿಗಳ ಜಿಜೆಸಿ ಸ್ನೇಹಿತರ ಬಳಗದಿಂದ 4 ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಲಾಯಿತು.
ಕೆಲ ದಿನಗಳ ಹಿಂದೆ ಪುಂಡರಿಂದ ಶಾಲಾ ಆವರಣದಲ್ಲಿ ಅನುಚಿತ ಕೃತ್ಯಗಳನ್ನು ನಡೆದಿತ್ತು. ಭದ್ರತೆಯ ದೃಷ್ಟಿಯಿಂದ ಸಿ.ಸಿ. ಕ್ಯಾಮರಾದ ಅವಶ್ಯಕತೆ ಇರುವುದನ್ನು ಮನಗಂಡ ಹಳೇ ವಿದ್ಯಾರ್ಥಿಗಳು, ಶಾಲೆಗೆ 4 ಸಿ.ಸಿ. ಕ್ಯಾಮರಾಗಳನ್ನು ಕೊಡುಗೆಯಾಗಿ ನೀಡಿದರು.
ಅಂತೆಯೇ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಾಮಫಲಕ ಅಳಿಸಿ ಹೋಗಿದ್ದ ಹಿನ್ನೆಲೆಯಲ್ಲಿ ಇದೇ ಬಳಗದಿಂದ ಅಕ್ರಾಲಿಕ್ ಫಲಕ ಅಳವಡಿಸಲಾಯಿತು. ಈ ಸಂದರ್ಭ ಕಾಲೇಜು ಪ್ರಾಂಶುಪಾಲ ಬೆಳ್ಳಿಯಪ್ಪ , ಪಿಎಂಶ್ರೀ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ದಿನೇಶ್, ಮುಖ್ಯಶಿಕ್ಷಕಿ ಯಶೋದಾ ಹಾಗೂ ಶಿಕ್ಷಕರು, ಸ್ನೇಹಿತರ ಬಳಗದ ಪದಾಧಿಕಾರಿಗಳು ಇದ್ದರು.